Fri. Apr 11th, 2025

Puttur: ಆಟೋ ರಿಕ್ಷಾದಲ್ಲಿ ಅಮಾನುಷವಾಗಿ ಗೋ ಸಾಗಾಟ – ಗೋವನ್ನು ರಕ್ಷಣೆ ಮಾಡಿದ ಬಜರಂಗದಳ – ಆಟೋ ರಿಕ್ಷಾ ಹಾಗೂ ಮಹಿಳೆಯರು ಪೋಲಿಸರ ವಶಕ್ಕೆ!!

ಪುತ್ತೂರು :(ಅ.16) ಪುತ್ತೂರಿನಲ್ಲಿ ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಅ.16 ರಂದು ನಡೆದಿದೆ.

ಇದನ್ನೂ ಓದಿ: ⭕ಗುರುವಾಯನಕೆರೆ : ಓವರ್ ಟೇಕ್ ಮಾಡಲು ಹೋಗಿ ದ್ವಿ ಚಕ್ರ ವಾಹನಗಳ ನಡುವೆ ಭೀಕರ ಅಪಘಾತ

ಬೈಪಾಸ್‌ ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.

ಅಕ್ರಮವಾಗಿ ಗೋವನ್ನು ಪುತ್ತೂರು ಬೈಪಾಸ್ ರಸ್ತೆಯ ಮೂಲಕ ಆಟೋ ರಿಕ್ಷಾದಲ್ಲಿ ವ್ಯಕ್ತಿಯೋರ್ವ ಸಾಗಿಸುತ್ತಿರುವುದರ ಕುರಿತು ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾವನ್ನು ಪುತ್ತೂರು ನಗರ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.


ಆಟೋ ರಿಕ್ಷಾದಲ್ಲಿ ಮಹಿಳೆಯರು ಕೂಡ ಪ್ರಯಾಣಿಸುತ್ತಿದ್ದು, ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *