Wed. Nov 20th, 2024

Bantwala: ನವರಾತ್ರಿ ಸಂದರ್ಭ ವೇಷ ಹಾಕಿ ನಿಧಿಸಂಗ್ರಹ – ಅನಾರೋಗ್ಯದಿಂದಿರುವ ಮಗುವಿಗೆ ಹಸ್ತಾಂತರ

ಬಂಟ್ವಾಳ :(ಅ.17) ಬಂಟ್ವಾಳ ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ರಾಯಪ್ಪಕೋಡಿ ಕಲ್ಲಡ್ಕ ವತಿಯಿಂದ 2 ನೇ ವರ್ಷದ ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂದರ್ಭ ದಲ್ಲಿ ವೇಷ ಹಾಕಿ ನಿಧಿಸಂಗ್ರಹ ಮಾಡಿ ಬುಡ್ ಚಿಯಾರಿ ಸಿಂಡ್ರೋಮ್ ಖಾಯಿಲೆಯಿಂದ ಬಳಲುತ್ತಿರುವ ಪುತ್ತೂರಿನ ರಂಜನ್ ಎನ್ನುವವರ 3 ವರ್ಷದ ಮಗು ಅಗಸ್ತ್ಯ ಕೃಷ್ಣ ನಿಗೆ ರೂಪಾಯಿ 37000/- ನೀಡಲಾಯಿತು.

ಇದನ್ನೂ ಓದಿ: 🟣ಬೆಳ್ತಂಗಡಿ: ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ರವರ ಪರವಾಗಿ ಬೆಳ್ತಂಗಡಿ ಮಂಡಲದಲ್ಲಿ ಶಾಸಕ ಹರೀಶ್ ಪೂಂಜರಿಂದ ಮತ ಪ್ರಚಾರ

ಈ ಪುಣ್ಯ ಕಾರ್ಯದಲ್ಲಿ ಸಮಿತಿಯ ಸದಸ್ಯರಾದ ದೀಕ್ಷಿತ್ ಆಚಾರ್ಯ, ಮೋಹಿತ್ ಆಚಾರ್ಯ, ರಕ್ಷಿತ್ ಆಚಾರ್ಯ, ಶ್ರೀಧರ್ ಆಚಾರ್ಯ, ಹರಿಪ್ರಸಾದ್, ಮಿಥುನ್, ಯಶ್ವಿನ್ ಕಲ್ಲಡ್ಕ, ಪ್ರವೀಣ್ ರಾಯಪ್ಪಕೋಡಿ, ಜಗದೀಶ್ ರಾಯಪ್ಪಕೋಡಿ, ಸೋಹನ್ ಕಲ್ಲಡ್ಕ ಭಾಗವಹಿಸಿದ್ದರು.

ಕಳೆದ ವರ್ಷ ಕೂಡ ಪ್ರಥಮ ಕಾರ್ಯವಾಗಿ 23000/-ನಿಧಿ ಸಂಗ್ರಹ ಮಾಡಿ ಕಾವ್ಯ ವೆಂಬ 11 ವರ್ಷ ದ ಬಾಲಕಿಗೆ ನೀಡಲಾಗಿತ್ತು. ಈ ಸಮಾಜಸೇವಾ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *