Wed. Nov 20th, 2024

kalladka: ನೃತ್ಯ ಕಲಾವಿದರ ಒಕ್ಕೂಟ 2024-2025ರ ಉದ್ಘಾಟನಾ ಸಮಾರಂಭ

ಕಲ್ಲಡ್ಕ:(ಅ.17) ನೃತ್ಯ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ 2024-2025ರ ಉದ್ಘಾಟನಾ ಸಮಾರಂಭ ಕಲ್ಲಡ್ಕ ಲಕ್ಷ್ಮಿ ನಿವಾಸ ಸಭಾ ಭವನದಲ್ಲಿ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಯಕ್ಷ ಬೊಳ್ಳಿ ದಿನೇಶ್ ರೈ ಕಡಬ ಹಾಗೂ ಉದ್ಯಮಿ ಕಿಶೋರ್ ಕುಮಾರ್ ಕಟ್ಟೆಮಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದನ್ನೂ ಓದಿ: 🟣ಪೆರ್ನಾಜೆ : ಅಡ್ಯನಡ್ಕದಲ್ಲಿ ರಂಜಿಸಿದ ಸ್ಯಾಕ್ಸೋಫೋನ್ ಜೊತೆ ಭಕ್ತಿ ಗಾನ ರಸಮಂಜರಿ ಕಾರ್ಯಕ್ರಮ

ಬಳಿಕ ದಿನೇಶ್ ರೈ ಕಡಬ ಮಾತನಾಡಿ, ಎಲ್ಲಾ ಕಲಾವಿದರಿಗೆ ಐಡಿಯ ಸೌಲಭ್ಯ ಸರಕಾರದಿಂದ ಇದೆ. ನೃತ್ಯ ಕಲಾವಿದರಿಗೆ ಇದರ ಸೌಲಭ್ಯ ಸಿಗುವಂತಾಗಲಿ ಎಂದರು.


ಮುಖ್ಯ ಅತಿಥಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಯಿದೆ ದೆವುಸ್ ಮುಖ್ಯೋಪಾಧ್ಯಾಯಿನಿ ಜಾನೆಟ್ ಡಿಸೋಜ ಮಾತನಾಡಿ, ನೃತ್ಯ ಕಲಾವಿದರ ಒಕ್ಕೂಟ ನಮ್ಮ ಶಾಲೆಯಿಂದಲೇ ಆರಂಭಗೊಂಡಿದೆ ಎಂದು ಹೇಳೋದಕ್ಕೆ ನಮಗೆ ಹೆಮ್ಮೆಯ ವಿಷಯ. ಈ ಒಕ್ಕೂಟ ಎಲ್ಲಾ ಕಲಾವಿದರಿಗೂ ತಲುಪುವಂತಾಗಾಲಿ ಎಂದರು.

ಮತ್ತೊರ್ವ ಅತಿಥಿ ಹಾಗೂ ನೃತ್ಯ ಕಲಾವಿದ ಗೌರವಾಧ್ಯಕ್ಷ ರಾಜೇಶ್ ವಿಟ್ಲ, ಒಕ್ಕೂಟಕ್ಕೆ ಎಲ್ಲಾ ಕಲಾವಿದರು ಒಗ್ಗಟ್ಟಾಗಿ ಕೈ ಜೋಡಿಸಬೇಕು ಎಂದರು. ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು ಇದೊಂದು ಉತ್ತಮವಾದ ನೃತ್ಯ ಕಲಾವಿದರ ಒಕ್ಕೂಟ ಇದರ ಸದುಪಯೋಗ ಪಡೆದುಕೊಳ್ಳಿ ಹಾಗೂ ನನ್ನ ಸಂಪೂರ್ಣ ಸಹಕಾರ ಇದೆ ಅಂತ ಹೇಳಿದರು.


ವೇದಿಕೆಯಲ್ಲಿ ಚಲನಚಿತ್ರ ಚಿತ್ರ ನಟಿ ಶೈಲ ಶ್ರೀ ಮೂಲ್ಕಿ, ಮಾಡೆಲ್ ಕುಮಾರಿ ಅಖಿಲ ಪೂಜಾರಿ ಉಪಸ್ಥಿತರಿದ್ದರು. ಗೊಂಬೆ ಬಳಗ ಒಕ್ಕೂಟದ ಕೋಶಾಧಿಕಾರಿ ನವೀನ್ ಕಲ್ಲಡ್ಕ, ಸಂಗಮ್ ಡ್ಯಾನ್ಸ್, ಬೋಳ್ವರ್ ಪ್ರಶಾಂತ್, ನಿಶಾನಿ ಡ್ಯಾನ್ಸ್ ಗ್ರೂಪ್, ದಿನೇಶ್ ಅಮೀನ್ ನರಿಕೊಂಬು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *