Wed. Nov 20th, 2024

Puttur: ಮಹಿಳೆಯರ ಕಾಲಿನಡಿ ಹಾಕಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ – ಇಬ್ಬರು ಮಹಿಳೆಯರು ಸಹಿತ ಮೂವರ ಬಂಧನ!!

ಪುತ್ತೂರು:(ಅ.17) ಆಟೋ ರಿಕ್ಷಾವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಟ ಮಾಡುತ್ತಿದ್ದ ಆರೋಪದ ಮೇಲೆ ರಿಕ್ಷಾ ಚಾಲಕ ಮತ್ತು ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ ಘಟನೆ ಪುತ್ತೂರಿನ ದರ್ಬೆ ಬೈಪಾಸ್‌ ರಸ್ತೆಯಲ್ಲಿ ಅ.16 ರಂದು ನಡೆದಿದೆ. ಅದಕ್ಕೂ ಮೊದಲು ಬಜರಂಗದಳದ ಕಾರ್ಯಕರ್ತರು ಗೋ ಸಾಗಿಸುತ್ತಿದ್ದ ವಾಹನವನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದರು.

ಇದನ್ನೂ ಓದಿ: ⭕ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಪೂಜಾರಿ ಹುಡುಗಿಯರು ಸೂ# ಯರಿದ್ದಾರೆ – ಸಂಜೀವ ಪೂಜಾರಿ

ಬನ್ನೂರು ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ಇಬ್ರಾಹಿಂ, ಜೊತೆಯಲ್ಲಿದ್ದ ರೆಹಮತ್, ಸಫಿಯಾ ಬಂಧಿತ ಆರೋಪಿಗಳು. ಪ್ರಯಾಣಿಕರ ಸೀಟಿನಲ್ಲಿ ಮಹಿಳೆಯರಿಬ್ಬರು ಕೂತಿದ್ದು, ಅವರ ಕಾಲಿನ ಅಡಿಯಲ್ಲಿ ಗೋವು ಅನ್ನು ಮಲಗಿಸಿ ದರ್ಬೆಯಿಂದ ಬೈಪಾಸ್‌ ರಸ್ತೆಯ ಮೂಲಕ ನೆಹರೂ ನಗರದತ್ತ ಅಕ್ರಮವಾಗಿ ಸಾಗಿಸಲಾಗುತಿತ್ತು. ಈ ಗೋ ಸಾಗಾಟಕ್ಕೆ ಯಾವುದೇ ಪರವಾನಿಗೆ ಪಡೆದಿರಲಿಲ್ಲ ಎನ್ನಲಾಗಿದೆ.

ಈ ಕುರಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ದರ್ಬೆ ಬೈಪಾಸ್ ರಸ್ತೆ ಸರ್ವಿಸ್‌ಸ್ಟೇಷನ್‌ ಬಳಿ ಆಟೋ ರಿಕ್ಷಾವನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ. ಆಗ ಮಹಿಳೆಯರಿಬ್ಬರು ಕುಳಿತಿದ್ದ ಕಾಲಿನಡಿ ಗೋವು ಪತ್ತೆಯಾಗಿದೆ. ತಕ್ಷಣ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಮಹಿಳೆಯರಿಬ್ಬರನ್ನು ರಿಕ್ಷಾದಿಂದ ಇಳಿಸಿ ಗೋವಿನ ರಕ್ಷಣೆಗೆ ಮುಂದಾಗಿದ್ದಾರೆ.

ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು ಈ ವೇಳೆ ಅವರು ಗೋವನ್ನು ಮುಂಡೂರಿನಿಂದ ಬನ್ನೂರಿಗೆ ವಯಾ ನೆಹರೂ ನಗರವಾಗಿ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಗೋ ಸಾಗಾಟಕ್ಕೆ ಯಾವುದೆ ಅನುಮತಿ ಇರದಿರುವುದು ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಗೋವನ್ನು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಇಬ್ರಾಹಿಂ ಮತ್ತು ರಿಕ್ಷಾದಲ್ಲಿದ್ದ ರೆಹಮತ್ ಮತ್ತು ಸಫಿಯಾ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಅಕ್ರಮ ಮತ್ತು ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋವನ್ನು ಠಾಣೆಯ ಬಳಿ ಕಟ್ಟಿ ಹಾಕಲಾಗಿದೆ. ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಗೋ ಸಾಗಾಟದ ಆರೋಪಿಗಳಾದ ಇಬ್ರಾಹಿಂ ಮತ್ತು ರೆಹಮತ್ ಸಫಿಯಾ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *