ಬೆಳ್ತಂಗಡಿ(ಅ.18) (ಯು ಪ್ಲಸ್ ಟಿವಿ): ಬೆಳ್ತಂಗಡಿಯಿಂದ ಉಜಿರೆ ಮತ್ತು ಉಜಿರೆಯಿಂದ ಧರ್ಮಸ್ಥಳ ಸೇರಿದಂತೆ ಇನ್ನಿತರ ಹಲವು ಕಡೆಗಳಿಗೆ ಸಂಚಾರ ಮಾಡುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳ ಪರಿಸ್ಥಿತಿಯನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇದನ್ನೂ ಓದಿ: 🟠ಕಲ್ಲಡ್ಕ : ಇದಲ್ವೇ ಮಾನವೀಯತೆ ಅಂದ್ರೆ
ಯಾಕಂದ್ರೆ ಈ ರಸ್ತೆಗಳಿಂದಾಗಿ ಮಂಗಳೂರು -ಉಡುಪಿ ಕಡೆ ಇರಬಹುದು ಅಥವಾ ಇನ್ನಿತರ ಕಡೆಗಳಿಗೆ ಸಂಚಾರ ಮಾಡುವರಿಗೆ ರಸ್ತೆಯ ಇಲ್ಲಿನ ರಸ್ತೆಯ ಸ್ಥಿತಿ ಯಾವ ರೀತಿ ಇದೆ ಅನ್ನುವುದು ಗೊತ್ತೇ ಇರುತ್ತೆ. ಈ ಭಾಗದಲ್ಲಿ ಸಂಚಾರ ಮಾಡಬೇಕು ಅಂದ್ರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕಾಗಿದೆ.
ಅದರಲ್ಲೂ ಬೆಳ್ತಂಗಡಿಯಲ್ಲಿರುವಂತಹ ಪ್ರಖ್ಯಾತ ವಾಣಿ ಕಾಲೇಜ್ ಗೆ ಹಲವಾರು ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಾರೆ. ಆ ವಿದ್ಯಾರ್ಥಿಗಳು ಕಾಲೇಜ್ ಗಾಗಿ ರಸ್ತೆ ದಾಟುವಂತಹ ಸಂದರ್ಭದಲ್ಲಿ ರಸ್ತೆಯ
ಹೊಂಡ -ಗುಂಡಿಗಳನ್ನು ತಪ್ಪಿಸಲು ಹೋಗಿ ಎಲ್ಲಾದರೂ ವಾಹನ ಸವಾರರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದರೆ ಅಥವಾ ಗುಂಡಿಯನ್ನು ತಪ್ಪಿಸಲು ಹೋಗಿ ವಾಹನ ಸವಾರರು ಗುಂಡಿಗೆ ಬಿದ್ದರೆ, ವಾಹನದಲ್ಲಿರುವಂತಹ ಪ್ರಯಾಣಿಕರ ಜೀವಕ್ಕೆ ತೊಂದರೆ ಆದ್ರೆ ಅವರ ಪ್ರಾಣಕ್ಕೆ ಹೊಣೆ ಯಾರು..?
ಅನ್ನುವ ಪ್ರಶ್ನೆಯನ್ನು ಅಲ್ಲಿನ ಸ್ಥಳೀಯರು ಮಾಧ್ಯಮದ ಮುಂದೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿ ಮತ್ತು ರಸ್ತೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಸುಸಜ್ಜಿತವಾದ ರಸ್ತೆಯನ್ನು ನಿರ್ಮಾಣವನ್ನು ಮಾಡಿ ಕೊಡಿ ಎಂದು ಮಾಧ್ಯಮಗಳ ಮೂಲಕ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟರು ಈ ಬಗ್ಗೆ ಗಮನ ಹರಿಸಿದರೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಗುತ್ತೆ. ಸಮಸ್ಯೆ ಹೀಗೆ ಮುಂದುವರಿಯುತ್ತಾ ಹೋದರೆ ರಸ್ತೆಗುಂಡಿಗಳು ಜನರ ಜೀವಗಳನ್ನು ಬಲಿ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ…!!