ಮೇಷ ರಾಶಿ: ಗಟ್ಟಿಯಾದ ನಿಮ್ಮ ಮನಸ್ಸು ಇಂದು ಕರಗುವ ಸಂದರ್ಭವು ಬರುವುದು. ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಆಕಸ್ಮಿಕವಾಗಿ ಅಲ್ಪ ಸಂಪತ್ತು ಬಂದರೂ ಅದು ನಷ್ಟವಾಗಿ ಹೋಗುವುದು. ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ತಾಳ್ಮೆಯನ್ನು ಕಳೆದುಕೊಳ್ಳುವಷ್ಟು ಕೋಪವು ಬೇಡ. ಹಲವು ಆದಾಯ ಮೂಲಗಳಲ್ಲಿ ಇಂದು ಒಂದು ಮಾತ್ರ ಉಳಿದುಕೊಳ್ಳುವುದು.
ವೃಷಭ ರಾಶಿ: ಏನಾದರೂ ಹೊಸ ಉತ್ಪನ್ನಗಳನ್ನು ನಿರ್ಮಾಣಮಾಡುವ ಆಸೆ ಬರುವುದು. ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ನಿಮ್ಮ ಮನಸ್ಸು ಕಿರಿಕಿರಿಯಿಂದ ಹೊರಬರಲು ಸಮಯವನ್ನು ತೆಗೆದುಕೊಳ್ಳುವುದು. ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು.
ಮಿಥುನ ರಾಶಿ: ಸಹೋದರ ಭಾವವನ್ನು ಇಟ್ಟುಕೊಂಡು ವರ್ತಿಸಿ. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಹೂಡಿಕೆಯನ್ನು ಮಾಡುವ ವಿಚಾರವು ನಿಮ್ಮಲ್ಲಿ ಬಲವಾಗಿ ಇರುವುದು. ಅದೃಷ್ಟವು ಇಂದು ಕೈಕೊಡಬಹುದು. ಅಧಿಕ ಶ್ರಮವಿದ್ದರೂ ಫಲವು ಮಾತ್ರ ಅಲ್ಪವೇ ಸಿಗುವುದು. ದೂರ ಪ್ರಯಾಣದಿಂದ ಪ್ರಯಾಸವಾಗುವುದು.
ಕರ್ಕಾಟಕ ರಾಶಿ: ಆಕಸ್ಮಿಕ ತೊಂದರೆಗಳನ್ನು ಎದುರಿಸುವ ಎದೆಗಾರಿಕೆ ಬೇಕು. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಹಣದ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ನಿಮ್ಮವರನ್ನು ಅವಶ್ಯಕತೆಗಷ್ಟೇ ಬಳಸಿಕೊಳ್ಳುವಿರಿ. ರಮಣೀಯತೆಯು ನಿಮಗೆ ಇಷ್ಟವಾಗುವುದು. ನಿಮ್ಮ ಬಗ್ಗೆ ತಪ್ಪು ಕಲ್ಪನೆಗಳು ಮೂಡಲಿದ್ದು ಅದನ್ನು ಸರಿ ಮಾಡಿಕೊಳ್ಳಲು ಬಯಸುವಿರಿ.
ಸಿಂಹ ರಾಶಿ: ಇಂದಿನ ದಿನವನ್ನು ಒಳ್ಳೆಯ ದಿನವನ್ನಾಗಿ ಮಾಡಿಕೊಳ್ಳಬಹುದು. ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುತ್ತ ಇರುವುದು ಬೇಡ. ನಿಮ್ಮ ತನವನ್ನು ಬಿಟ್ಟು ನೀವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾರಿರಿ. ಯಾರ ಸಹಾಯವನ್ನೂ ಪಡೆಯದೆ ನೀವು ನಿಮ್ಮ ಕಾರ್ಯವನ್ನು ನಿಧಾನವಾಗಿಯೇ ಮಾಡುವಿರಿ. ಶುಭ ಸಮಾರಂಭಗಳಿಗೆ ಭೇಟಿ ಮಾಡುವ ಸಂದರ್ಭವು ಬರಬಹುದು. ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ಆಸಕ್ತಿಯು ಇರದು. ನಿರುದ್ಯೋಗಿಗಳು ಉದ್ಯೋಗದ ಅನ್ವೇಷಣೆಯನ್ನು ಮಾಡುವರು.
ಕನ್ಯಾ ರಾಶಿ: ಸಕಾರಾತ್ಮಕ ಯೋಚನೆಯೇ ಬಂಧನವನ್ನು ಗಟ್ಟಿಯಾಗಿಸುವುದು. ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ಮಾನಸಿಕವಾಗಿ ಸಬಲರಾಗುವ ಅವಶ್ಯಕತೆ ಇರಲಿದೆ. ಸ್ತ್ರೀಯರ ಜೊತೆ ನಿಮ್ಮ ವ್ಯವಹಾರವು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಸಂಸಾರದ ಹೊಣೆಗಾರಿಕೆಯನ್ನು ಕಷ್ಟದಿಂದ ನಿರ್ವಹಿಸುವಿರಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಬೇಸರ ತರಿಸುವ ಸಂಗತಿಗಳು ನಡೆಯಬಹುದು. ಪಿತ್ರಾರ್ಜಿತ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ತಾಳ್ಮೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಬಹುದು.
ತುಲಾ ರಾಶಿ: ನಿಮ್ಮ ಸಹಾಯವು ಕೆಲವರ ಸಂತೋಷಕ್ಕೆ ಕಾರಣವಾಗುವುದು. ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಇಂದು ಕಸಿದುಕೊಳ್ಳಬಹುದು. ನಿಮ್ಮ ಕಡೆಗಣಿಸುತ್ತಿರುವುದು ನಿಮಗೆ ಗೊತ್ತಾಗಿ ಬೇಸರವಾಗುವುದು. ಸ್ನೇಹಿತರಿಂದ ನೀವು ಸಹಾಯವನ್ನು ಬಯಸುವಿರಿ. ಕಛೇರಿಯ ಕೆಲಸಕ್ಕಾಗಿ ಓಡಾಟವು ಇರಲಿದೆ. ದಾಂಪತ್ಯದ ಸಾಮರಸ್ಯವನ್ನು ನೀವು ಉಳಿಸಿಕೊಳ್ಳಿ. ನಿಮ್ಮದಲ್ಲದ ಕೆಲಸವು ನಿಮಗೇ ಬರಬಹುದು.
ವೃಶ್ಚಿಕ ರಾಶಿ: ಒಳ್ಳೆಯ ಕಾರ್ಯಗಳು ನಿಮ್ಮನ್ನು ಕಾಪಾಡಬಹುದು. ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಅಧಿಕಾರದಿಂದ ನಿಮ್ಮ ವರ್ತನೆಯು ಬದಲಾಗಬಹುದು. ನೌಕರರ ಬಗ್ಗೆ ನಿಮಗೆ ಅಸಮಾಧಾನ ಇರುವುದು. ಸಂತೋಷವನ್ನು ನೀವು ಹಂಚಿಕೊಳ್ಳುವಿರಿ. ನಿಮ್ಮ ಕಾರ್ಯಸಾಧನೆಗೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮ ಕೆಲಸಗಳಿಗೆ ನಿಗದಿತ ಸಮಯವನ್ನು ಕೊಡುವುದು ಮುಖ್ಯವಾಗಬಹುದು.
ಧನು ರಾಶಿ: ಹಿರಿತನವನ್ನು ಉಳಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ನಿಮ್ಮ ಉದ್ಯೋಗವು ಗೋಡೆಯ ಮೇಲಿರುವ ದೀಪದಂತೆ ಇರುವುದು. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ತೊಡಕುಗಳು ಬರಬಹುದು. ಆರೋಗ್ಯದ ಸಮಸ್ಯೆಯು ಗಂಭೀರವಾಗಿ ಇರಲಿದೆ.
ಮಕರ ರಾಶಿ; ಇಂದಿನ ನಿಮ್ಮ ತೀರ್ಮಾನವು ಯೋಗ್ಯವಾಗಿ ಇರುವುದು. ನಿಮಗೆ ಅಸಾಧ್ಯ ಎಂದು ಗೊತ್ತಿದ್ದರೂ ಬೇರೆಯವರ ಒತ್ತಾಯಕ್ಕೆ ಕೆಲಸವನ್ನು ಮಾಡುವಿರಿ. ನಿಮ್ಮ ನೈಜಸ್ವಭಾವವು ನಿಮಗೆ ತಿಳಿಯಲಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ ಅಡ್ಡಿಯೂ ಇರುವುದಿಲ್ಲ. ಕುಟುಂಬದ ಜೊತೆ ಸಮಯವನ್ನು ಕಳೆಯಲು ಇಚ್ಛಿಸಿದರೂ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಇರುವುದು.
ಕುಂಭ ರಾಶಿ: ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಇಂದು ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ಭವಿಷ್ಯದ ಬಗ್ಗೆ ನಿಮಗೆ ಕೆಲವರು ಮಾರ್ಗದರ್ಶನ ಮಾಡಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉದ್ಯೋಗಕ್ಕೆ ಹತ್ತಾರು ಅವಕಾಶಗಳು ತೆರೆದುಕೊಳ್ಳಬಹುದು. ಅವಶ್ಯಕತೆ ಇರುವ ವಸ್ತುಗಳನ್ನು ಯಾರಿಂದಲೂ ಕೇಳಿ ಪಡೆಯಲಾರಿರಿ. ಮಕ್ಕಳ ಮಾತುಗಳು ನಿಮಗೆ ಹಾಸ್ಯದಂತೆ ಕಾಣಿಸುವುದು. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ.
ಮೀನ ರಾಶಿ: ನಿಮ್ಮ ದಕ್ಷತೆಗೆ ಗೌರವ ಸಿಗಲಿದೆ. ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಕಲೆಯಲ್ಲಿ ಅಭಿರುಚಿಯು ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೂ ನೆಮ್ಮದಿಯು ಸರಿಯಾಗಿರದು. ನಿಮ್ಮ ವರ್ತನೆಯನ್ನು ಕೈ ಮಾಡಿ ತೋರಿಸಬಹುದು. ಅತಿಯಾದ ಮಾತು ಇತರರಿಗೆ ತೊಂದರೆ ಕೊಡಬಹುದು.