Sun. Apr 13th, 2025

Kalladka: ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನಗೈದ ವಿದ್ಯಾರ್ಥಿನಿ ಚಿರಣ್ಯ.ಆರ್ ಪೂಜಾರಿ

ಕಲ್ಲಡ್ಕ :(ಅ.18) ಬಂಟ್ವಾಳ ತಾಲೂಕಿನ ವೀರಕಂಭ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಚಿರಣ್ಯ. ಆರ್ ಪೂಜಾರಿ ಟೀಂ ಸೇವಾಪಥದ ಮೂಲಕ ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶದಾನಗೈದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಇದನ್ನೂ ಓದಿ: 🛑ಸುಖಾಂತ್ಯಗೊಂಡ ಮುತ್ತಪ್ಪ ರೈ ಆಸ್ತಿ ತಕರಾರು

ಚಿರಣ್ಯ. ಆರ್ ಪೂಜಾರಿ ವೀರಕಂಭ ಗ್ರಾಮದ ಗಣೇಶಕೋಡಿಯ ರಾಮಚಂದ್ರ ರೇಖಾ ದಂಪತಿಗಳ ಪುತ್ರಿಯಾಗಿದ್ದು, ತನ್ನ ಮಗಳನ್ನು ಕೇಶದಾನಗೈಯಲು ಪ್ರೇರಣೆ ನೀಡಿದ ರಾಮಚಂದ್ರರವರು ಆತ್ಮೀಯ ಮಿತ್ರರೆಲ್ಲರ ಸಹಕಾರದೊಂದಿಗೆ ಓಂ ಶ್ರೀ ಸಾಯಿ ಗಣೇಶ ಸೇವಾ ಸಂಘದ ಸಾರಥಿಯಾಗಿ ಅಶಕ್ತರಿಗೆ ನೆರವು ನೀಡುತ್ತಾ ಯುವಶಕ್ತಿ ಸೇವಾಪಥ, ಯುವಶಕ್ತಿ ರಕ್ತನಿಧಿಯ ಮೂಲಕ ಸಮಾಜ ಸೇವೆಗೆ ಸದಾ ಕೈ ಜೋಡಿಸುವ ಓರ್ವ ನಿಷ್ಠಾವಂತ ಕಾರ್ಯಕರ್ತರಾಗಿರುತ್ತಾರೆ. ಇವರ ಈ ಸೇವಾಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ.

ವಿದ್ಯಾರ್ಥಿನಿಯ ಈ ಸೇವಾ ಕಾರ್ಯಕ್ಕೆ ವಿದ್ಯಾರ್ಥಿನಿಯ ಕುಟುಂಬಸ್ಥರು, ಗ್ರಾಮಸ್ಥರು ಶಾಲಾ ಶಿಕ್ಷಕರು, ಸಹಪಾಠಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *