Wed. Nov 20th, 2024

Puttur: ಬಿಲ್ಲವ ಹೆಣ್ಮಕ್ಕಳ ಬಗ್ಗೆ ನಾಲಗೆ ಹರಿಬಿಟ್ಟ ಅರಣ್ಯಾಧಿಕಾರಿ ವಿರುದ್ಧ ಹಿಂದೂ ಸಂಘಟನೆಯಿಂದ ಭಜನೆ ಮೂಲಕ ಪ್ರತಿಭಟನೆ!!

ಪುತ್ತೂರು:(ಅ.18) ಬಿಲ್ಲವ ಯುವತಿ ಮತ್ತು ಭಜನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅರಣ್ಯ ಇಲಾಖೆ ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹಿಂದೂಪರ ಸಂಘಟನೆಯಿಂದ ಭಜನೆ ಮಾಡುವ ಮೂಲಕ ಪ್ರತಿಭಟನೆಯು ಪುತ್ತೂರು ಡಿವೈಎಸ್ಪಿ ಕಛೇರಿಯ ಮುಂಭಾಗದಲ್ಲಿ ನಡೆದಿದೆ.

ಇದನ್ನೂ ಓದಿ: 🟠ಮಂಗಳೂರು: ದೀಪಾವಳಿ ಹಬ್ಬಕ್ಕೆ ಕರಾವಳಿಗರಿಗೆ ಗುಡ್‌ ನ್ಯೂಸ್‌!!

ಸಂಜೀವ ಪೂಜಾರಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹ ಮಾಡಿದ್ದಾರೆ. ಬಂಧಿಸುವವರೆಗೂ ಡಿವೈಎಸ್ಪಿ ಕಛೇರಿ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದಾರೆ.

ಸಂಜೀವ ಪೂಜಾರಿ ವಿರುದ್ಧ ಈಗಾಗಲೇ ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ , ಆದರೆ ಎಫ್ಐಆರ್ ನಲ್ಲಿ ಕ್ಷುಲ್ಲಕ ಸೆಕ್ಷನ್ ಹಾಕಿದ್ದಾರೆಂದು ಹಿಂದೂ ಸಂಘಟನೆಗಳ ಆರೋಪ ಮಾಡುತ್ತಿದ್ದಾರೆ.

ಏನಿದು ಪ್ರಕರಣ?:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಲಕ್ಷ ಪೂಜಾರಿ ಹುಡುಗಿಯರು ಸೂಳೆಯರಿದ್ದಾರೆ. ನನ್ನ ಬಳಿ ಇದಕ್ಕೆ ಹತ್ತು ಸಾವಿರ ದಾಖಲೆ ಇದೆ. ಹಿಂದುತ್ವದ ಹುಡುಗರು ಇವರನ್ನು ಸೂಳೆಯರಾಗಿ ಮಾಡಿದ್ದಾರೆ. ಭಜನೆ ಮಾಡಿ ರಾತ್ರಿ ವೇಳೆ ಅವರನ್ನು ಮರದಡಿಯಲ್ಲಿ ಮಲಗಿಸುತ್ತಾರೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಅಪಘಾತವಾದಲ್ಲಿ ಮುಸ್ಲಿಂ ಯುವಕರು ಸಹಾಯಕ್ಕೆ ಬರುತ್ತಾರೆ. ಹಿಂದು ಹುಡುಗರು ಫೋಟೊ ತೆಗೆದು ಹಂಚುತ್ತಾರೆ ಇತ್ಯಾದಿಯಾಗಿ ಹಿಂದು ಧರ್ಮದವರನ್ನು ಅವಾಚ್ಯವಾಗಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *