Wed. Nov 20th, 2024

Viral News: ಮೂರು ಮಕ್ಕಳ ತಾಯಿ , ಲವ್ವರ್‌ ಜೊತೆ ಪರಾರಿ – ಕೈ ಕೊಟ್ಟ ಬಾಯ್ ಫ್ರೆಂಡ್‌ – ಕೊನೆಗೆ ಕಟ್ಟಿಕೊಂಡವನೇ ಗತಿ ಎಂದು ಬಂದ ಹೆಂಡ್ತಿ!!! – ಹೆಂಡ್ತಿಯನ್ನು ಕಂಡು ಗಂಡ ಮಾಡಿದ್ದೇನು ಗೊತ್ತಾ?

Viral News: (ಅ.18) ಮದುವೆಯ ಬಳಿಕವೂ ಪರ ಪುರುಷ ಅಥವಾ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧವನ್ನು ಇಟ್ಟುಕೊಂಡು ತಮ್ಮ ಸುಂದರ ಸಂಸಾರವನ್ನು ಹಾಳು ಮಾಡಿಕೊಂಡವರು, ಅದರಲ್ಲಿ ಇನ್ನೂ ಕೆಲವರು ಗೆಳೆಯ/ಗೆಳತಿಗಾಗಿ ಮನೆ, ಮಕ್ಕಳು, ಸಂಸಾರವನ್ನೇ ಬಿಟ್ಟು ಓಡಿ ಹೋದವರಿದ್ದಾರೆ.

ಇದನ್ನೂ ಓದಿ: ⭕ಪುತ್ತೂರು: ಭಜನೆ ಮತ್ತು ಬಿಲ್ಲವ ಮಹಿಳೆಯರ ವಿರುದ್ಧ ನಾಲಗೆ ಹರಿಬಿಟ್ಟ ಅರಣ್ಯಾಧಿಕಾರಿ

ಇದೀಗ ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಬಾಯ್‌ಫ್ರೆಂಡ್‌ಗಾಗಿ ಗಂಡ ಮತ್ತು ತನ್ನ ಮೂರು ಮಕ್ಕಳನ್ನೇ ಬಿಟ್ಟು ಓಡಿ ಹೋಗಿದ್ದಾಳೆ. ಇನ್ಸ್ಟೆಂಟ್‌ ಕರ್ಮ ಎನ್ನುವ ಹಾಗೆ ಇದೀಗ ಆಕೆಯ ಬಾಯ್‌ ಫ್ರೆಂಡ್‌ ಅವಳು ನನಗೆ ಬೇಡ್ವೇ ಬೇಡ ಎಂದು ಪಟ್ಟು ಹಿಡಿದಿದ್ದಾನೆ. ಬಾಯ್‌ಫ್ರೆಂಡ್‌ನಿಂದ ಮೋಸ ಹೋದ ಈ ಮಹಿಳೆ ದಿಕ್ಕು ತೋಚದೆ ಅಳುತ್ತಾ ಕೂತಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ಕೆಲ ದಿನಗಳ ಹಿಂದೆ ಗಂಡ-ಮಕ್ಕಳನ್ನು ಬಿಟ್ಟು ಬಾಯ್‌ಫ್ರೆಂಡ್‌ ಜೊತೆ ಓಡಿ ಹೋಗಿದ್ದಳು. ಇದೀಗ ಆಕೆಯ ಬಾಯ್‌ಫ್ರೆಂಡ್‌ ನನಗೆ ಆಕೆ ಬೇಡ ಎಂದು ಹೇಳಿದ್ದು, ಗೆಳೆಯನಿಂದಾದ ಮೋಸಕ್ಕೆ ಆ ಮಹಿಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಆದರೆ ಇಟ್ಟುಕೊಂಡವನು ಕಡೆ ತನಕ ಎನ್ನುವ ಮಾತಿನಂತೆ ಆಕೆಯ ಗಂಡ ಮಾತ್ರ ಅವಳು ಮನೆಗೆ ಬಂದರೆ ನಾನು ಅವಳನ್ನು ಸ್ವೀಕರಿಸುವೆ ಎಂದು ಮನಸಾರೆ ಹೇಳಿಕೊಂಡಿದ್ದಾನೆ.

gherkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮೂರು ಮಕ್ಕಳ ತಾಯಿ ತನ್ನ ಬಾಯ್‌ ಫ್ರೆಂಡ್‌ ತನಗೆ ಮೋಸ ಮಾಡಿದ ಎಂದು ಜೋರಾಗಿ ಅಳುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಹೀಗೆ ದೊಡ್ಡವರೆಲ್ಲಾ ಸೇರಿ ಮಾತುಕತೆ ನಡೆಸುವ ಸಂದರ್ಭದಲ್ಲಿ ಪತಿರಾಯ “ಹಿಂದೆ ಏನೇ ತಪ್ಪು ನಡೆದಿರಬಹುದು, ಆದ್ರೆ ಆಕೆ ಮನೆಗೆ ಬರುತ್ತಾಳೆ ಎಂದಾದರೇ ಖಂಡಿತವಾಗಿಯೂ ನಾನು ಅವಳನ್ನು ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾನೆ.

Leave a Reply

Your email address will not be published. Required fields are marked *