Wed. Nov 20th, 2024

Bigg Boss Aishwarya – Shishir: ಬಿಗ್‌ ಬಾಸ್‌ ಮನೆಯಲ್ಲಿ ಐಶ್ವರ್ಯ , ಶಿಶಿರ್‌ ರೊಮ್ಯಾನ್ಸ್ – ಇವರ ಮಧ್ಯೆ ಪ್ರೀತಿ ಏನಾದ್ರೂ ಹುಟ್ಟಿಕೊಂಡಿತಾ?

Bigg Boss Aishwarya — Shishir:(ಅ.19) ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಮೊದಲ ದಿನದಿಂದಲೂ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಈಗ ಅವರ ರೊಮ್ಯಾನ್ಸ್ ವಿಚಾರ ಸಾಕಷ್ಟು ಚರ್ಚೆ ಆಗಿದೆ.

ಇದನ್ನೂ ಓದಿ: 🛑ಸರಸದಲ್ಲಿರುವಾಗ ಮನೆಗೆ ಬಂದ ಪೋಷಕರು!

ಐಶ್ವರ್ಯ ಕಾಫಿ ಕುಡಿಯುತ್ತಿರುವಾಗ ಶಿಶಿರ್‌ ಹಿಂದಿನಿಂದ ಬೆಡ್‌ ಶೀಟ್‌ ಹೊದ್ದುಕೊಂಡು ಬರುತ್ತಾನೆ, ನಂತರ ಆಕೆಯನ್ನು ಹಗ್‌ ಮಾಡುತ್ತಾನೆ. ಐಶ್ವರ್ಯಾ ಅವರು ಕುಡಿಯುತ್ತಿದ್ದ ಬಿಸಿ ಕಾಫಿಯನ್ನು ಒಬ್ಬರಾದ ಬಳಿಕ ಒಬ್ಬರು ಹೀರಿದ್ದಾರೆ.

ಐಶ್ವರ್ಯಾ ಅವರಿಗೆ ಶಿಶಿರ್ ಅಂತರ ಇಟ್ಟುಕೊಂಡು ಕಿಸ್ ಕೊಟ್ಟಿದ್ದಾರೆ. ಇದರಿಂದ ಇವರು ಕ್ಲೋಸ್ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ರಿಯಲ್ ಲೈಫ್​ನಲ್ಲಿ ಸಿಂಗಲ್ ಆಗಿದ್ದಾರೆ. ಹೀಗಾಗಿ, ಬಿಗ್ ಬಾಸ್​ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಹೈಲೈಟ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವೊಮ್ಮೆ ಲವ್ ನಾಟಕ ಆಡೋದು ಇದೆ. “ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿರೋದು ಈಗ ಅಂಥದ್ದೇ ಪ್ರೀತಿಯೇ” ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.

Leave a Reply

Your email address will not be published. Required fields are marked *