Bigg Boss Kannada:(.19) ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್ ಶೋನ ನಿರೂಪಕರಾಗಿ ಅಭಿಮಾನಿಗಳ, ವೀಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್ ಇದೀಗ ಬಿಗ್ ಬಾಸ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಕಾಡುವ ಯಕ್ಷ ಪ್ರಶ್ನೆ ಎಂದರೆ ಕಿಚ್ಚನ ಸ್ಥಾನ ತುಂಬುವ ವ್ಯಕ್ತಿ ಯಾರು ಎಂಬುದು. ಆದರೀಗ ಆ ವ್ಯಕ್ತಿಯ ಹೆಸರು ಬಯಲಾಗಿದೆ.
ಇದನ್ನೂ ಓದಿ: ⭕ಹಿರಿಯ ರಾಜಕಾರಣಿ ಎಸ್ ಎಮ್.ಕೃಷ್ಣ ಆರೋಗ್ಯದಲ್ಲಿ ಏರುಪೇರು
ಇದುವರೆಗೂ ರಿಷಬ್ ಶೆಟ್ಟಿ ಹೆಸರು ಕಿಚ್ಚನ ಬದಲಿಗೆ ಕೇಳಿ ಬರುತ್ತಿತ್ತು. ಶೆಟ್ರನ್ನ ಹೊರತು ಪಡಿಸಿದರೆ ರಮೇಶ್ ಅರವಿಂದ್ ಬಿಗ್ ಬಾಸ್ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಪ್ರೀತಿಯಿಂದ ರಮೇಶ್, ವೀಕೆಂಡ್ ವಿತ್ ರಮೇಶ್ ಸೇರಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇವರದ್ದು. ಈ ಕಾರಣಕ್ಕೆ ಸುದೀಪ್ ಸ್ಥಾನಕ್ಕೆ ರಮೇಶ್ ಅರವಿಂದ್ ಸೂಕ್ತವಾದ ವ್ಯಕ್ತಿ ಎನ್ನುವ ಮಾತು ಸದ್ಯ ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೀಗ ಅಚ್ಚರಿ ಎಂಬಂತೆ ಇಲ್ಲಿ ಬೇರೆ ಹೆಸರು ಮಧ್ಯ ಪ್ರವೇಶಿಸಿದೆ.
ಕಿಚ್ಚ ಸುದೀಪ್ ಸ್ಥಾನ ತುಂಬಬೇಕೆಂದರೆ ಬಿಗ್ ಬಾಸ್ ನಿರೂಪಣೆಗೆ ಶಿವರಾಜ್ ಕುಮಾರ್ ಅವರೇ ಸರಿ ಎನ್ನುತ್ತಿದ್ದಾರೆ. ಕಿಚ್ಚ ಸುದೀಪ್ ರಂತೆ ಶಿವಣ್ಣ ಎದುರು ನಿಂತು ಘರ್ಜಿಸಿದರೆ ಎದುರಾಳಿಗಳು ಸೈಲೆಂಟ್ ಆಗಲೇಬೇಕು. ಇಡೀ ಕನ್ನಡ ಇಂಡಸ್ಟ್ರಿಗೇ ಅಣ್ಣನಂತಿರುವ ಶಿವಣ್ಣನೇ ಬಿಗ್ ಬಾಸ್ ನಿರೂಪಣೆಗೆ ಸರಿಯಾದ ವ್ಯಕ್ತಿ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.
ಶಿವಣ್ಣ ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡಿಕೆಡಿ ಶೋ ತೀರ್ಪುಗಾರರಾಗಿದ್ದಾರೆ. ಕಿರುತೆರೆಯಲ್ಲಿ ಕೆಲವೊಂದು ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕಿರುತೆರೆ ಹೊಸದೇನಲ್ಲ. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರೇ ಮುಂದಿನ ಆವೃತ್ತಿಯಿಂದ ಬಿಗ್ ಬಾಸ್ ನಿರೂಪಣೆ ಮಾಡಿದರೂ ಅಚ್ಚರಿಯಿಲ್ಲ.