Fri. Apr 18th, 2025

Chamarajanagar: ಬಂಡೀಪುರ ರಸ್ತೆಯಲ್ಲಿ ಆನೆ ದಾಳಿ – ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್‌ ಸವಾರ!!

ಚಾಮರಾಜನಗರ:(ಅ.19) ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶವಾದ ಚಾಮರಾಜನಗರನ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರನೊಬ್ಬ ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ಇದನ್ನೂ ಓದಿ: 🛑ಮುಂದಿನ ವರ್ಷದಿಂದ ಬಿಗ್ ಬಾಸ್ ಹೋಸ್ಟ್ ಮಾಡೋದು ಇವರೇ‌ ಅಂತೇ!!

ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದೆ. ಊಟಿ ಕಡೆಯಿಂದ ಮೈಸೂರಿನತ್ತ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಬೈಕ್ ಸವಾರನಿಗೆ ಆನೆಗಳು ಎದುರಾಗಿವೆ. ಇನ್ನೇನು ಆತನ ಮೇಲೆ ಆನೆ ದಾಳಿ ಮಾಡಲು ಯತ್ನಿಸುತ್ತಿರುವಾಗ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಜೀವವೇ ಬಾಯಿಗೆ ಬರುವ ಈ ದೃಶ್ಯವನ್ನು ಅಲ್ಲೇ ಕಾರಿನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.

ರಸ್ತೆ ಬದಿಯಲ್ಲಿ ಮರಿ ಜೊತೆ ಎರಡು ಆನೆ ನಿಂತಿದ್ದವು. ಅವುಗಳಲ್ಲಿ ಒಂದು ಆನೆ ದಿಢೀರನೇ ದಾಳಿ ಮಾಡಲು ಮುಂದಾಗಿದೆ. ಹೆದರಿದ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ ಮತ್ತೊಂದು ಆನೆ ದಾಳಿ ಮಾಡಲು ಮುಂದಾಗುತ್ತದೆ. ಅಷ್ಟರಲ್ಲೇ, ಆನೆಗಳು ಮರಿಯತ್ತ ಹೆಜ್ಜೆ ಹಾಕಿದ್ದು, ಸ್ವಲ್ಪದರಲ್ಲೇ ಆನೆ ದಾಳಿಯಿಂದ ಬೈಕ್ ಸವಾರ ಜೀವ ಉಳಿಸಿಕೊಂಡಿದ್ದಾನೆ. ಬಂಡೀಪುರದ ಸಿಎಫ್ ಕಚೇರಿ ಸಮೀಪ ಈ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *