ಹಾಸನ: (ಅ.19) ಮಲಗಿದ್ದ ವೇಳೆ ಹಾವು ಕಚ್ಚಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನ ಹೊರ ವಲಯದ ಬೂವನಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: 🟣ಮಂಗಳೂರು: ನಾಪತ್ತೆಯಾದ ಅಮ್ಮನಿಗಾಗಿ 14 ವರ್ಷ ಹುಡುಕಾಟದ ವನವಾಸ
ಮೂಲತಃ ಚನ್ನರಾಯಪಟ್ಟಣ ತಾಲ್ಲೂಕು ಮೂಲದ ಗುರು(40) ಮೃತ ವ್ಯಕ್ತಿ.
ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಮೊದಲ ಮಹಡಿಯ ಕೊಠಡಿಯಲ್ಲಿ ಗುರು ಮಲಗಿದ್ದರು. ಮೊದಲ ಮಹಡಿಗೆ ಹತ್ತಿ ಗುರು ಕಾಲಿಗೆ ನಾಗರ ಹಾವು ಕಚ್ಚಿದೆ. ಆದರೆ ಮನೆಯವರಿಗೆ ಯಾರಿಗೂ ಈ ವಿಷಯ ತಿಳಿದಿರಲಿಲ್ಲ.
ಪತಿ ಬೆಳಿಗ್ಗೆ 8 ಗಂಟೆ ಆದರೂ ಕೊಠಡಿ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಪತ್ನಿ, ಕೊಠಡಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಕಾಲಿಗೆ ಕಚ್ಚಿ ನಾಗರಹಾವು ಕೊಠಡಿಯಲ್ಲೇ ಅಡಗಿ ಕೂತಿದೆ. ಕೊಠಡಿಯೊಳಗೆ ಇದ್ದ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ.
ಮನೆಯ ಯಜಮಾನನ ಹಠಾತ್ ಸಾವಿನಿಂದ ಕುಟುಂಬದವರು ಕಂಗಾಲಾಗಿದ್ದಾರೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.