Lawrence Bishnoi:(ಅ.19) ಮುಂಬೈನಲ್ಲಿ ಎನ್ ಸಿ ಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಅಂದಹಾಗೆ ಆ ಸಂದರ್ಭದಲ್ಲಿ ಲಾರೆನ್ಸ್ ಸದ್ಯ ಗುಜರಾತ್‌ನ ಸಬರಮತಿ ಜೈಲಿನಲ್ಲಿ ಇರಿಸಲಾಗಿತ್ತು. ಮತ್ತೊಂದೆಡೆ ಸಲ್ಮಾನ್ ಖಾನ್ ಮತ್ತು ದಾವೂದ್ ಗ್ಯಾಂಗ್‌ಗೆ ಯಾರೆಲ್ಲಾ ಸಹಾಯ ಮಾಡುತ್ತಾರೋ ಅವರೇ ನಮ್ಮ ಟಾರ್ಗೆಟ್ ಎಂದು ಲಾರೆನ್ಸ್ ಬೆದರಿಕೆ ಹಾಕಿದ್ದಾರೆ. ಜೊತೆಗೆ ಬಾಬಾ ಸಿದ್ದಿಕಿಗೆ ಸಲ್ಮಾನ್ ಖಾನ್ ಜೊತೆ ಆಪ್ತತೆ ಇತ್ತು. ಈ ಕಾರಣದಿಂದಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: 🟠Anushree: ಮದುವೆ ಡೇಟ್ ರಿವೀಲ್ ಮಾಡಿದ ಅನುಶ್ರೀ!
ಬಿಷ್ಣೋಯ್ ಗ್ಯಾಂಗ್ ಕೊಲೆಗೈದ ಘಟನೆ ಇದೇ ಮೊದಲಲ್ಲ, ಇದಕ್ಕೂ ಮುನ್ನ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮತ್ತು ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಪ್ರಕರಣದಲ್ಲೂ ಸುದ್ದಿಯಾಗಿದ್ದರು. ಇನ್ನು ಈ ಗ್ಯಾಂಗ್‌ನಲ್ಲಿ ದೇಶ ಮತ್ತು ವಿದೇಶಗಳಲ್ಲಿ 700 ಕ್ಕೂ ಹೆಚ್ಚು ಶೂಟರ್‌ಗಳು ಇದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಕಾಲೇಜು ವಿದ್ಯಾರ್ಥಿಯಾಗಿದ್ದ ಲಾರೆನ್ಸ್ ರೌಡಿಗಳ ಲೋಕಕ್ಕೆ ಕಾಲಿಟ್ಟಿದ್ದು ಯಾಕೆ? ಇವರ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ.
ಲಾರೆನ್ಸ್ ಬಿಷ್ಣೋಯ್ ಅವರು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಸ್ಟೆಬಲ್ ಆಗಿದ್ದರು. ಆದರೆ, ಬಳಿಕ ಪೊಲೀಸ್ ನೌಕರಿ ತೊರೆದು ಕೃಷಿ ಆರಂಭಿಸಿದರು. ಇನ್ನು ಲಾರೆನ್ಸ್ ಅಬೋಹರ್ ಜಿಲ್ಲೆಯಿಂದ 12 ನೇ ವರೆಗೆ ಅಧ್ಯಯನ ಮಾಡಿದ್ದಾರೆ. ಆ ನಂತರ ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಹೆಚ್ಚಿನ ಅಧ್ಯಯನ ಮಾಡಿದ್ದ ಅವರು, ರಾಜಕೀಯದಲ್ಲಿ ಆಸಕ್ತಿ ಹೊಂದಿ ವಿದ್ಯಾರ್ಥಿ ರಾಜಕೀಯಕ್ಕೆ ಸೇರಿದರು.
ಲಾರೆನ್ಸ್ ಬಿಷ್ಣೋಯ್ ಅವರು ತಮ್ಮ ಸ್ನೇಹಿತ ಗೋಲ್ಡಿ ಬ್ರಾರ್ ಅವರೊಂದಿಗೆ ಸಂಪರ್ಕಕ್ಕೆ ಬಂದ ಸಮಯ. ಲಾರೆನ್ಸ್ ವಿದ್ಯಾರ್ಥಿ ರಾಜಕೀಯಕ್ಕೆ ಸೇರಿದಾಗ, ಗೋಲ್ಡಿ ಬ್ರಾರ್ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಇಬ್ಬರೂ ಜೊತೆಯಾಗಿ ವಿದ್ಯಾರ್ಥಿ ರಾಜಕೀಯಕ್ಕೆ ಕಾಲಿಟ್ಟರು, ಆದರೆ ಇತರ ಗುಂಪುಗಳೊಂದಿಗೆ ಸಂಘರ್ಷದಿಂದಾಗಿ ಅವರು ಭೂಗತ ಜಗತ್ತಿಗೆ ಪ್ರವೇಶಿಸಿದರು. ಇದನ್ನು ಪ್ರವೇಶಿಸುವ ಮೊದಲು, ಲಾರೆನ್ಸ್ ಬಿಷ್ಣೋಯ್ ಎಲ್ಎಲ್‌ಬಿ ಮಾಡಿದ್ದರು. ಈ ಅವಧಿಯಲ್ಲಿ ಈತನ ವಿರುದ್ಧ ಹಲ್ಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಇಂತಹ ಹಲವು ಪ್ರಕರಣಗಳಲ್ಲಿ ಲಾರೆನ್ಸ್ ಖುಲಾಸೆಗೊಂಡಿದ್ದರೂ ಅವರ ವಿರುದ್ಧ ಇನ್ನೂ ಹಲವು ಪ್ರಕರಣಗಳು ಬಾಕಿ ಇವೆ.