ಉಜಿರೆ:(ಅ.19) ಇಚಿಲಂಪಾಡಿ ರಸ್ತೆಯಿಂದ ಬರುವ ಬಸ್ ನಿಲ್ಲಿಸುತ್ತಿಲ್ಲ ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳು ಅದೇ ಬಸ್ ಅನ್ನು ಎಸ್ ಡಿ ಎಮ್ ಡಿಗ್ರಿ ಕಾಲೇಜಿನ ಎದುರುಗಡೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ.
ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ಈ ಪ್ರತಿಭಟನೆಯನ್ನು ನಡೆಸಿದ್ದಾರೆ. ಬಸ್ ಗೆ ಅಡ್ಡ ನಿಂತು ಘೋಷಣೆ ಕೂಗುವುದರ ಮುಖೇನ ಪ್ರತಿಭಟನೆಯನ್ನು ಮುಂದುವರಿಸಿದರು.
ಇಚಿಲಂಪಾಡಿಯ ಸಮಸ್ಯೆ ಒಂದು ವರ್ಷದಿಂದ ನಡೆಯುತ್ತಿದೆ. ಪ್ರತೀ ದಿನ ಲೇಟಾಗಿ ತರಗತಿಗೆ ಹೋಗಬೇಕಾದ ಪರಿಸ್ಥಿತಿ, ಹಾಜರಾತಿಯೂ ಇಲ್ಲದೆ ಪರದಾಟ ನಡೆಸಬೇಕಾಗಿದೆ. ಬಸ್ ಮಿಸ್ ಆದರೆ ಬೇರೆ ಬೇರೆ ವಾಹನಗಳಿಗೆ ಕಾಯಬೇಕಾದ ಸ್ಥಿತಿ, ಇಚಿಲಂಪಾಡಿ ಎನ್ನುವ ಸ್ಥಳದಲ್ಲಿ ಬಸ್ ನಿಲ್ಲಿಸಲು ತಕರಾರು ಮಾಡುತ್ತಿದ್ದಾರೆ.
ಎಷ್ಟು ಬಾರಿ ದೂರು ನೀಡಿದರೂ ಉಪಯೋಗವಿಲ್ಲ, ಹಾರಿಕೆಯ ಉತ್ತರ ಕೊಡುತ್ತಿರುವ ಕಂಡಕ್ಟರ್, ಡ್ರೈವರ್ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಬಳಿ ಮಾತನಾಡಿದ ಬಸ್ ಡ್ರೈವರ್ ಇನ್ನು ಮುಂದೆ ಇಂತಹ ಸಮಸ್ಯೆ ಆಗುವುದಿಲ್ಲ, ಬಸ್ಸು ನಿಲ್ಲಿಸುತ್ತೇವೆ ಎಂದು ಯು ಪ್ಲಸ್ ವಾಹಿನಿಯಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.