Wed. Nov 20th, 2024

Deepavali 2024: ದೀಪಾವಳಿ ಹಬ್ಬ ಆಚರಿಸಲು ಅಕ್ಟೋಬರ್ 31 ಅಥವಾ ನವೆಂಬರ್ 1 ರಲ್ಲಿ ಯಾವುದು ಶುಭ ದಿನ? -ಜೋತಿಷ್ಯಿಗಳು ಹೇಳೋದೇನು?

eepvli 2024:(ಅ.20) “ದೀಪಾವಳಿ” ಇಡೀ ದೇಶದ ಜನರೇ ಸಂಭ್ರಮದಿಂದ ಆಚರಿಸುವ ಅತೀ ದೊಡ್ಡ ಹಬ್ಬ. ಆದರೆ ಈ ವರ್ಷ ಈ ಹಬ್ಬ ಕೊಂಚ ಕನ್‌ಫ್ಯೂಸ್‌ನಿಂದ ಕೂಡಿದೆ. ಹಬ್ಬವನ್ನು ಅಕ್ಟೋಬರ್‌ 31 ರಂದು ಆಚರಿಸಬೇಕಾ ಅಥವಾ ನವೆಂಬರ್‌ 1 ರಂದು ಆಚರಿಸಬೇಕಾ ಎಂದು ಗೊಂದಲವಿದೆ.

ಇದನ್ನೂ ಓದಿ: 🛑ಪಾಕಿಸ್ತಾನದ ಯುವತಿಯನ್ನು ಮದುವೆಯಾದ ಬಿಜೆಪಿ ನಾಯಕನ ಮಗ!!

ದೀಪಾವಳಿ ಆಚರಣೆ ಯಾವಾಗ? ಜೋತಿಷ್ಯಿಗಳು ಹೇಳೋದೇನು?
ಜ್ಯೋತಿಷಿಗಳ ಪ್ರಕಾರ, ದೀಪಾವಳಿಯನ್ನು ಅಕ್ಟೋಬರ್ 31, ಗುರುವಾರದಂದು ಸರ್ವಾನುಮತದಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಈ ವರ್ಷದ ಅಮಾವಾಸ್ಯೆ ತಿಥಿಯು ಅಕ್ಟೋಬರ್ 31 ರಂದು ಮಧ್ಯಾಹ್ನ 3:11 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 1 ರ ಸಂಜೆ 05:12 ರವರೆಗೆ ಇರುತ್ತದೆ. ಅಂದರೆ ಅಕ್ಟೋಬರ್ 31 ರಾತ್ರಿ ಅಮಾವಾಸ್ಯೆಯ ತಿಥಿ ಇರುತ್ತದೆ. ಆದ್ದರಿಂದ ಅಕ್ಟೋಬರ್ 31 ರ ರಾತ್ರಿ ದೀಪಾವಳಿಯನ್ನು ಆಚರಿಸುವುದು ಮಂಗಳಕರವಾಗಿದೆ.

ವಾಸ್ತವವಾಗಿ ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಪ್ರದೋಷ ಕಾಲದ ನಂತರ ದೀಪಾವಳಿಯನ್ನು ಪೂಜಿಸಲಾಗುತ್ತದೆ. ಅಂದು ರಾತ್ರಿ ಲಕ್ಷ್ಮೀಪೂಜೆ, ಕಾಳಿಪೂಜೆ ಹಾಗೂ ನಿಶಿತ ಕಾಲಪೂಜೆ ನೆರವೇರಲಿದೆ. ಅಕ್ಟೋಬರ್ 31 ರ ರಾತ್ರಿ ಮಾತ್ರ ಮಧ್ಯರಾತ್ರಿಯ ಪೂಜೆಯನ್ನು ಮಾಡಲು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಅಮವಾಸ್ಯೆಗೆ ಸಂಬಂಧಿಸಿದ ದಾನ, ಪೂರ್ವಜರ ವಿಧಿಗಳನ್ನು ನವೆಂಬರ್ 01 ರಂದು ನಡೆಸಲಾಗುತ್ತದೆ. ಕೆಲವೊಂದು ಪಂಚಾಗದ ಪ್ರಕಾರ, ಬಲಿಪಾಡ್ಯಮಿಯ ದಿನ ಅಂದರೆ ಅಕ್ಟೋಬರ್ 2 ರಂದು ದೀಪಾವಳಿಯನ್ನು ಆಚರಿಸಬೇಕೆಂದು ಹೇಳಿವೆ.

ಅಂದಹಾಗೆ ದೀಪಾವಳಿಯ ದಿನಾಂಕದ ಗೊಂದಲವನ್ನು ಬಗೆಹರಿಸಲು ಭಾರತದ 100ಕ್ಕೂ ಹೆಚ್ಚು ಜ್ಯೋತಿಷಿಗಳು, ವಿದ್ವಾಂಸರು ಮತ್ತು ಸಂಸ್ಕೃತ ವಿದ್ವಾಂಸರು ಜೈಪುರದ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ದೀಪಾವಳಿ ನಿರ್ಣಯ ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ ದೀಪಾವಳಿಯನ್ನು ಅಕ್ಟೋಬರ್‌ 31 ರಂದು ಆಚರಿಸಲು ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಜೈಪುರದ ಮಹಾರಾಜ್ ಆಚಾರ್ಯ ಸಂಸ್ಕೃತ ಕಾಲೇಜಿನ ಜ್ಯೋತಿಷ್ಯ ವಿಭಾಗದ ಮಾಜಿ ಮುಖ್ಯಸ್ಥ ಪ್ರೊಫೆಸರ್ ರಾಮ್‌ಪಾಲ್ ಶಾಸ್ತ್ರಿ ಮತ್ತು ಗುಜರಾತ್‌ನ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊಫೆಸರ್ ಅರ್ಕನಾಥ್ ಚೌಧರಿ ಮುಂತಾದವರು ಇದ್ದರು.

ಸಭೆಯಲ್ಲಿ ದೀಪಾವಳಿಯನ್ನು ಅಕ್ಟೋಬರ್‌ 31 ರಂದು ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಕಾರಣ ಅಮಾವಾಸ್ಯೆಯ ತಿಥಿಯು ಈ ದಿನಾಂಕದಂದು ಸಂಪೂರ್ಣ ಪ್ರದೋಷ ಕಾಲ ಮಾತ್ರವಲ್ಲದೆ ಇಡೀ ರಾತ್ರಿ ಇರಲಿದೆ. ಮತ್ತು ಇದೇ ದಿನ ಲಕ್ಷ್ಮಿ ಪೂಜೆಗೆ ವೃಷಭ ಮತ್ತು ಸಿಂಹ ಲಗ್ನದ ಶುಭ ಸಮಯ ಲಭ್ಯವಾಗಲಿದೆ. ನವೆಂಬರ್‌ 1 ರಂದು ಅಮಾವಾಸ್ಯೆಯ ತಿಥಿಯು ಸಂಜೆ 6.16ಕ್ಕೆ ಕೊನೆಯಾಗುತ್ತದೆ. ಅಂದರೆ ಸೂರ್ಯಾಸ್ತದ ನಂತರ ಕೆಲವೇ ನಿಮಿಷಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಲಕ್ಷ್ಮಿ ಪೂಜೆಯನ್ನು ನಡೆಸಲು ಕಡಿಮೆ ಸಮಯ ಇರುತ್ತದೆ.

Leave a Reply

Your email address will not be published. Required fields are marked *