Mon. Jan 5th, 2026

Sandalwood actor Mayur: ಸ್ಯಾಂಡಲ್ ವುಡ್ ನಟ ಮಯೂರ್ ವಿರುದ್ಧ ಎಫ್ ಐ ಆರ್ ದಾಖಲು – ಕಾರಣ ಏನು??!

ಬೆಂಗಳೂರು:(ಅ.20) ಮಣಿ ಸಿನಿಮಾ ಖ್ಯಾತಿಯ ಸ್ಯಾಂಡಲ್ ವುಡ್ ನಟ ಮಯೂರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಾಂಧಲೆ ನಡೆಸಿದ ಬಗ್ಗೆ, ಮಹಿಳೆಯೊಬ್ಬರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ⭕ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ 19 ರ ಯುವತಿ!!

14.5 ಎಕರೆ ಜಮೀನು ವಿಚಾರ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಹೀಗಿರುವಾಗ ಕೋರ್ಟ್ ಆದೇಶ ಮೀರಿ ಆ ಜಮೀನಿಗೆ ನಿರ್ಮಿಸಲಾಗಿದ್ದಂತ ಕಾಂಪೌಂಡ್ ಅನ್ನು ಜೆಸಿಬಿ ಕೊಂಡೊಯ್ದು ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್ ಕೆಡವಿ ದಾಂಧಲೆ ನಡೆಸಿದ್ದರು. ಜೊತೆಗೆ ಅಲ್ಲೇ ಶೆಡ್ ಕೂಡ ನಿರ್ಮಿಸಿದ್ದರು.

ಈ ಹಿನ್ನಲೆಯಲ್ಲಿ ಜಮೀನು ಮಾಲೀಕರಾದ ಶಾಲಿನಿ ಎಂಬುವರು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ನಟ ಮಯೂರ್ ಪಟೇಲ್ ವಿರುದ್ಧ ಕೋರ್ಟ್ ಆದೇಶ ಉಲ್ಲಂಘಿಸಿ ದಾಂಧಲೆ ನಡೆಸಿ, ಜಮೀನಿನ ಕಾಂಪೌಂಡ್ ಕೆಡವಿ ಹಾಕಿದ್ದರ ವಿರುದ್ಧ ದೂರು ನೀಡಿದ್ದರು. ಅವರ ವಿರುದ್ಧ ಕಾನೂನು ಕ್ರಮಕ್ಕೂ ಒತ್ತಾಯಿಸಿದ್ದರು.


ಶಾಲಿನಿ ಎಂಬುವರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್ ವಿರುದ್ಧ ಹೆಚ್ ಎಸ್ ಆರ್ ಲೇಔಟ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *