ಸಿಕ್ಕಿಂ: (ಅ.20) ಎಸ್ಟಿಎನ್‌ಎಂ ಆಸ್ಪತ್ರೆಯ ವೈದ್ಯರು 12 ವರ್ಷಗಳ ಬಳಿಕ ಮಹಿಳೆಯ ಹೊಟ್ಟೆಯಲ್ಲಿದ್ದ ಕತ್ತರಿಯನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇದನ್ನೂ ಓದಿ: ⭕ಸ್ಯಾಂಡಲ್ ವುಡ್ ನಟ ಮಯೂರ್ ವಿರುದ್ಧ ಎಫ್ ಐ ಆರ್ ದಾಖಲು
12 ವರ್ಷಗಳ ಹಿಂದೆ ಎಸ್ಟಿಎನ್‌ಎಂ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಉಳಿದಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಉಳಿದಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಎಸ್ಟಿಎನ್‌ಎಂ ವೈದ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಎಸ್ಟಿಎನ್‌ಎಂ ಆಸ್ಪತ್ರೆಯ ವಕ್ತಾರ ಡಾ.ಸುರೇಶ್ ಮದನ್ ರೈ ತಿಳಿಸಿದ್ದಾರೆ.


ಮಹಿಳೆಯ ಹೊಟ್ಟೆಯಿಂದ ಕತ್ತರಿ ಹೊರತೆಗೆದ ವೈದ್ಯರು:
ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯ ನಂತರವೂ ಮಹಿಳೆಗೆ ನೋವು ಕಾಣಿಸಿಕೊಂಡಿತ್ತು. ಆಕೆಯ ಕುಟುಂಬವು ಅವಳನ್ನು ಎಸ್ ಟಿಎನ್ ಎಂ ಆಸ್ಪತ್ರೆಗೆ ಕರೆತಂದಿತು. ಎಕ್ಸ್-ರೇಯಲ್ಲಿ, ಅವಳ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಯ ಕತ್ತರಿ ಕಂಡುಬಂದಿದೆ. ಮಹಿಳೆಯ ಹೊಟ್ಟೆಯಿಂದ ಕತ್ತರಿಯನ್ನು ತೆಗೆದುಹಾಕಲು ವೈದ್ಯರು ಗುರುವಾರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಅವರು ಹೇಳಿದರು.
