Fri. Apr 11th, 2025

Abhishek and Aishwarya: ಅಭಿಷೇಕ್ ಹಾಗೂ ಐಶ್ವರ್ಯಾ ದಂಪತಿ ಸಂಬಂಧದಲ್ಲಿ ಬಿರುಕು ಮೂಡಲು ಆ ಮೂರನೇ ವ್ಯಕ್ತಿ ಕಾರಣವಂತೇ!!

Abhishek and Aishwarya:(ಅ.21) ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಲೇ ಇದೆ.

ಇದನ್ನೂ ಓದಿ: ಕಿರಾತಕ ನಟಿ ಓವಿಯಾಳ ಖಾಸಗಿ ವಿಡಿಯೋ ಲೀಕ್

ಇವರು ಈವೆಂಟ್​ಗಳಿಗೆ ಪ್ರತ್ಯೇಕವಾಗಿಯೇ ತೆರಳುತ್ತಿದ್ದಾರೆ ಎನ್ನಲಾಗಿದೆ. ಈಗ ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಲು ಬಾಲಿವುಡ್​ನ ನಟಿಯೊಬ್ಬರು ಕಾರಣ ಎಂದು ಹೇಳಲಾಗುತ್ತಿದೆ.

ಐಶ್ವರ್ಯಾ ಅವರು ಅಭಿಷೇಕ್ ಬಚ್ಚನ್ ಅವರಿಂದ ದೂರವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಐಶ್ವರ್ಯಾ ಮಗಳು ಆರಾಧ್ಯ ಜೊತೆ ತಮ್ಮ ತಾಯಿ ಮನೆಯಲ್ಲಿ ಇದ್ದಾರೆ ಎನ್ನಲಾಗಿದೆ. ಆದರೆ, ಇವರು ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯೋ ಆಲೋಚನೆಯಲ್ಲಿ ಇಲ್ಲವಂತೆ. ಐಶ್ವರ್ಯಾಗೆ ಸಮಸ್ಯೆ ಆಗುತ್ತಿರುವುದು ಪತಿಯಿಂದಲೇ ಎನ್ನಲಾಗಿದೆ.

ಅಭಿಷೇಕ್ ಬಚ್ಚನ್​ಗೆ ತಮ್ಮ ನಟನಾ ವೃತ್ತಿಯ ಬಗ್ಗೆ ಅಭದ್ರತೆ ಕಾಡುತ್ತಿದೆ. ಇದೇ ವೇಳೆ ಅವರು ನಟಿ ನಮೃತ್ ಕೌರ್ ಜೊತೆ ರಿಲೇಶನ್​ಶಿಪ್ ಹೊಂದಿದ್ದಾರೆ ಎಂದು ಕೂಡ ವರದಿ ಆಗಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ಇದು ನಿಜ ಆಗದೇ ಇರಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.

ಅಭಿಷೇಕ್ ಬಚ್ಚನ್ ಅವರು ತಮ್ಮ ಫೇಲ್ಯೂವರ್​ಗಳ ಬಗ್ಗೆ ಬೇಸರದಲ್ಲಿ ಇದ್ದಾರೆ. ಅವರ ಯಾವ ಸಿನಿಮಾಗಳೂ ಹಿಟ್ ಆಗುತ್ತಿಲ್ಲ. ‘ದಾಸ್ವಿ’ ಸಿನಿಮಾದ ಶೂಟ್ ವೇಳೆ ಅವರು ನಮೃತ್​ ಕೌರ್ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ನಮೃತಾ ಅವರು ಅಭಿಷೇಕ್ ವಿಚಾರದಲ್ಲಿ ಗಂಭೀರವಾಗಿದ್ದರು. ಆ ಬಳಿಕ ತಪ್ಪು ಅರಿತ ಅಭಿಷೇಕ್ ಅವರು ನಮೃತಾರನ್ನು ಕೈಬಿಟ್ಟರು.

ಈ ಬಗ್ಗೆ ಕುಟುಂಬದ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಇದು ಸಂಪೂರ್ಣವಾಗಿ ಸತ್ಯ ಎಂದು ಒಪ್ಪಿಕೊಳ್ಳಲೂ ಆಗುತ್ತಿಲ್ಲ. ಇದು ಸದ್ಯಕ್ಕೆ ಹರಿದಾಡುತ್ತಿರುವ ಅಂತೆ-ಕಂತೆ ಅಷ್ಟೇ. ಈ ಬಗ್ಗೆ ದಂಪತಿ ಅಧಿಕೃತವಾಗಿ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು