Kiccha Sudeep Tweet :(ಅ.21) ಅಮ್ಮ ಮಗನ ಸಂಬಂಧ ತುಂಬಾ ವಿಶೇಷವಾದದ್ದು. ಮಗನಿಗೆ ಅಮ್ಮನೆಂದರೆ ಬಲು ಪ್ರೀತಿ. ತನಗೆ ಕಮ್ಮಿ ಆದರೂ ತನ್ನ ಮಗನಿಗೆ ಯಾವುದ್ರಲ್ಲೂ ಕಮ್ಮಿ ಆಗಬಾರದು ಅಂತ ಆಸೆ ಪಡೋ ಏಕೈಕ ವ್ಯಕ್ತಿಯೇ ಅಮ್ಮ.
ಇದನ್ನೂ ಓದಿ: ⭕ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡ?!
ಅಮ್ಮ ಆಸೆ ಪಡೋ ತರ ಮಗ ಏನಾದ್ರೂ ಸಾಧನೆ ಮಾಡಿದ್ರೆ ಅಮ್ಮನಿಗೆ ಹೆಮ್ಮೆ!! ಅಮ್ಮನ ಪ್ರೀತಿಗಿಂತ ಮಿಗಿಲಾದದ್ದು ಯಾವುದೇ ಇಲ್ಲ.
ಅಕ್ಟೋಬರ್.20 ರಂದು ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನ ಹೊಂದಿದ್ದಾರೆ. ಅಮ್ಮನ ಜೊತೆ ಕಳೆದ ಕ್ಷಣಗಳನ್ನು ಸುದೀಪ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಏನಿದೆ ಟ್ವೀಟ್ ನಲ್ಲಿ!!
ಅಮ್ಮ ಆಸ್ಪತ್ರೆ ಸೇರಿದ ದಿನ ಕಿಚ್ಚ ಬಿಗ್ ಬಾಸ್ ನ ಶೂಟಿಂಗ್ ಮಾಡ್ತಿದ್ದರು. ಅಮ್ಮನ ಬಗ್ಗೆ ವಿಚಾರಿಸಿಕೊಂಡೇ ಕಿಚ್ಚ ಸುದೀಪ್ ಅಂದು ವೇದಿಕೆ ಹತ್ತಿದ್ದರು. ಅಮ್ಮನ ಸ್ಥಿತಿ ಗಂಭೀರ ಅನ್ನೋ ಸಂದೇಶ ಅವರಿಗೆ ಬರ್ತಾನೇ ಇತ್ತು. ಆದರೂ, ಅಮ್ಮ ಕಲಿಸಿದ ಆ ಪಾಠ ನೆನಪಿತ್ತು. ಅದನ್ನು ಮರೆಯದೇ ಕೆಲಸ ಮುಂದುವರೆಸಿದೆ.
ಶೂಟಿಂಗ್ ಮಧ್ಯೆ ಅಮ್ಮನ ಬಗ್ಗೆ ಮನದಲ್ಲಿ ನೋವು ಸುಳಿಯುತ್ತಲೇ ಇತ್ತು. ಆದರೂ ಶೂಟಿಂಗ್ ಮುಗಿಸಬೇಕಿತ್ತು. ಶನಿವಾರದ ಎಪಿಸೋಡ್ ಮುಗಿಸಿದೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋದೆ. ಆದರೆ, ನಾನು ಹೋಗೋ ಕೆಲವು ಗಂಟೆ ಮೊದಲು ಅಮ್ಮ ವೆಂಟಿಲೇಷನ್‌ನಲ್ಲಿ ಇದ್ದಳು. ಆದರೆ, ಅಮ್ಮನನ್ನು ನಾನು ಹೀಗೆ ಎಂದೂ ನೋಡಿಯೇ ಇರಲಿಲ್ಲ.
ಅಮ್ಮ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದಳು. ಪ್ರತಿ ದಿನ ನನ್ನ ಫೋನ್‌ಗೆ ಒಂದು ಸಂದೇಶ ಬರ್ತಾ ಇತ್ತು ಗುಡ್ ಮಾರ್ನಿಂಗ್ ಕಂದ ಅನ್ನೋ ಸಂದೇಶ ಅದಾಗ್ತಿತ್ತು. ಆದರೆ, ಅಕ್ಟೋಬರ್ 18 ರಂದು ಒಂದು ಸಂದೇಶ ಬಂತು. ಅದೇ ಕೊನೆ ಸಂದೇಶ ಎಂದು ಹೇಳಿ ಕಿಚ್ಚ ಭಾವುಕರಾಗಿದ್ದಾರೆ.
ಅಮ್ಮನನ್ನು ಎಂದೂ ಆ ಸ್ಥಿತಿಯಲ್ಲಿ ನೋಡಿಯೇ ಇಲ್ಲ. ಆದರೆ, ಈಗೀನ ಸ್ಥಿತಿ ನನಗೆ ನಿಜಕ್ಕೂ ಹೊಸದೇ ಆಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಮನಸು ಕಷ್ಟಪಡುತ್ತಿದೆ. ಅಮ್ಮ ನನ್ನ ಜೀವನದಲ್ಲಿ ಒಂದು ಅಮೂಲ್ಯ ರತ್ನವೇ ಆಗಿದ್ದಳು. ಆಕೆ ಇಲ್ಲದೇ ಜೀವನ ಹೇಗೆ ಅನ್ನೋ ಸಣ್ಣ ನೋವು ಕಾಡುತ್ತಿದೆ.
ಪ್ರತಿ ದಿನ ಶೂಟಿಂಗ್ ಹೋಗೋ ಮೊದಲು ಅಮ್ಮ ಒಂದು ಟೈಟ್ ಹಗ್ ಕೊಡ್ತಿದ್ದಳು. ಆ ಟೈಟ್ ಹಗ್ ಇನ್ಮುಂದೆ ಇರೋದೇ ಇಲ್ಲ. ಅಮ್ಮ ಹೋಗಿಬಿಟ್ಳು….ಅಮ್ಮ ಇಲ್ಲದ ನೋವು ಕಾಡುತ್ತಲೇ ಇದೆ.
ಅಮ್ಮನ ಬಗ್ಗೆ ಹೇಳೋಕೆ ಸಾಕಷ್ಟು ವಿಷಯ ಇದೆ. ಅಮ್ಮ ನನ್ನ ಜೀವನದ ಮೊಟ್ಟ ಮೊದಲ ಅಭಿಮಾನಿ ಆಗಿದ್ದಳು. ಅಮ್ಮ ಇಲ್ಲದೇ ಏನೂ ಇಲ್ಲ ಅನ್ನೋ ನೋವು ಈಗ ಮನಸನ್ನು ಹೆಚ್ಚು ಆವರಿಸಿಕೊಳ್ಳುತ್ತಿದೆ.
ಅಮ್ಮ ನನಗೆ ಎಲ್ಲವೂ ಆಗಿದ್ದಳು. ಈಕೆ ಇಲ್ಲದ ನೋವು ಕಾಡುತ್ತಿದೆ ಅಂತಲೇ ಸುದೀಪ್ ಸುದೀರ್ಘ ಪತ್ರ ಬರೆದಿದ್ದಾರೆ. ಅದನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.