ಸುಬ್ರಹ್ಮಣ್ಯ (ಅ.21): ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಅಕ್ಟೋಬರ್.20 ರಂದು ಮೇಘಸ್ಪೋಟ ರೀತಿಯಲ್ಲಿ ಮಳೆಯಾಗಿದ್ದು, ಕೇವಲ ಅರ್ಧ ತಾಸು ಸುರಿದ ಮಳೆಗೆ ದರ್ಪಣ ತೀರ್ಥ ನದಿ ತುಂಬಿ ಹರಿದಿದ್ದು, ಆದಿ ಸುಬ್ರಹ್ಮಣ್ಯದ ಕೆಲ ಅಂಗಡಿಗೆ ನೀರು ನುಗ್ಗಿದೆ.
ಇದನ್ನೂ ಓದಿ: ⭕ಬಂಟ್ವಾಳ: ಯಕ್ಷರಂಗದ ಹಾಸ್ಯ ದಿಗ್ಗಜ ಜಯರಾಮ ಆಚಾರ್ಯ ಇನ್ನಿಲ್ಲ
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಧ್ಯಾಹ್ನ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯಿತು.
ಕೇವಲ ಅರ್ಧ ತಾಸು ಸುರಿದ ಮಳೆಗೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ತುಂಬಿ ಹರಿದಿದ್ದು, ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣ ಪ್ರವೇಶಿಸಿತು, ಅಲ್ಲದೆ ಪರಿಸರದ ಅಂಗಡಿಗಳಿಗೂ ಮಳೆ ನೀರು ನುಗ್ಗಿದೆ.
ಜೊತೆಗೆ ಸುತ್ತಮುತ್ತಲಿನ ತೋಟಕ್ಕೂ ನೀರು ನುಗ್ಗಿ ಹಾನಿ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಳೆಗೆ ಕುಮಾರಧಾರಾ ನದಿಯಲ್ಲಿ ನೀರಿನಮಟ್ಟ ಏರಿಕೆಯಾಗಿಲ್ಲ. ದರ್ಪಣ ತೀರ್ಥದಲ್ಲಿ ಮಾತ್ರ ದಿಢೀರ್ ನೀರು ಏರಿಕೆಯಾಗಿತ್ತು.