Wed. Nov 20th, 2024

ಮೇಷ ರಾಶಿ: ಇನ್ನೊನ್ಬರ ಮಾತಿಗೆ ಮಣಿದು ಏನನ್ನಾದರೂ ಮಾಡಿ ತೊಂದರೆಪಡುವುದು ಬೇಡ. ಸರಿ ಎನಿಸಿದರೆ ಒಪ್ಪಿ, ಇಲ್ಲವಾದರೆ ಮುನ್ನಡೆಯಿರಿ. ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ನಿಮಗೆ ಇಂದು ನೀವು ಮಾಡುವ ಕೆಲಸದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯೂ ನಿಮಗೆ ಲಭ್ಯವಾಗುವುದು. ಅಮೂಲ್ಯ ಸಂಪತ್ತನ್ನು ಪ್ರದರ್ಶಿಸುವುದು ಬೇಡ. ನೀವು ಅಧ್ಯಾತ್ಮದಿಂದ ಹೆಚ್ಚು ಪ್ರಭಾವಿತರಾಗಲಿದ್ದೀರಿ. ನಿಮ್ಮ ಚಂಚಲ ಮನಸ್ಸಿನಿಂದ ಮಾಡಿದ ನಿರ್ಧಾರವು ಕುಟುಂಬಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು.

ವೃಷಭ ರಾಶಿ; ನಿಮ್ಮ ತಾಳ್ಮೆಯು ದೌರ್ಬಲ್ಯದ ಸಂಕೇತವಾಗಬಹುದು. ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ನೀವಾಡುವ ಮಾತುಗಳಿಗೆ ಕುಟುಂಬವು ಉತ್ತರಿಸಬೇಕಾದೀತು. ಕೆಲವು ತೀರ್ಮಾನಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನೀವು ಇಂದು ನಿಮ್ಮ ಬಳಿ ಇರುವ ಸಂಪತ್ತನ್ನು ತೋರಿಸುವುದು ಬೇಡ. ದೇಹವನ್ನು ಹೆಚ್ಚು ದಂಡಿಸಬೇಕಾಗುವುದು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ.

ಮಿಥುನ ರಾಶಿ: ಕೆಲವು ಅವಕಾಶಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು. ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ಆರ್ಥಿಕತೆಯ ಕಾರಣಕ್ಕಾಗಿ ನೀವು ಹೆಚ್ಚು ಆತಂಕ ಪಡುವಿರಿ. ಯಂತ್ರೋಪಕರಣಗಳ ದುರಸ್ತಿಯನ್ನು ಮಾಡಿಸುವಿರಿ. ದಾಯಾದಿಗಳ ಕಲಹವೂ ನಿಮ್ಮ ಅನಾರೋಗ್ಯಕ್ಕೆ ಪೂರಕವಾಗಿರುವುದು. ನಿಮ್ಮ ಉತ್ಸಾಹಕ್ಕೆ ಭಂಗವಾಗುವ ಸನ್ನಿವೇಶವು ನಿಮ್ಮ ಕಣ್ಣೆದುರಿಗೆ ನಡೆಯುವುದು.

ಕರ್ಕಾಟಕ ರಾಶಿ; ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆಯು ನಿಮಗೆ ಧೈರ್ಯವನ್ನು ಕೊಡುವುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ‌. ದುರಭ್ಯಾಸದ ಕಾರಣದಿಂದ ಎಲ್ಲರ ಎದುರು ಮಾನವನ್ನು ಕಳೆದುಕೊಳ್ಳಬೇಕಾಗುವುದು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದವು ಬರಬಹುದು. ನಿಮ್ಮ ನಿರುದ್ಯೋಗದ ಸಮಸ್ಯೆಯನ್ನು ಸರಿ ಮಾಡಿಕೊಳ್ಳುವಿರಿ. ಈಗಾಗಲೇ ವೃತ್ತಿಯಲ್ಲಿ ತೊಡಗಿದವರು ಬಡ್ತಿಯನ್ನು ನೀಡುವಂತೆ ಒತ್ತಾಯಿಸಬಹುದು. ನಿಮ್ಮದೇ ಆದ ವ್ಯಕ್ತಿತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು.

ಸಿಂಹ ರಾಶಿ; ಜಡಕನ್ನು ಬಿಡಿಸಲು ತಾಳ್ಮೆ ಬೇಕು, ಇಲ್ಲವೋ ಅದನ್ನು ಬಿಡುವುದೇ ಒಳ್ಳೆಯದು. ಯಾರಾದರೂ ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸಿ ಮಾಡುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳುವಿರಿ. ಸಾಲವಾಗಿ ನೀಡಿದ ಹಣವನ್ನು ಹಿಂಪಡೆಯಲು ಕಷ್ಟವಾದೀತು. ಸಂಗಾತಿಯನ್ನು ನೀವು ಅಲಕ್ಷಿಸುವಿರಿ. ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಲಾಗದು.

ಕನ್ಯಾ ರಾಶಿ: ನಿಮ್ಮ ಸಮಯಪಾಲನೆಗೆ ಪ್ರಶಂಸೆ ಸಿಗುವುದು. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ನಿಮ್ಮ ಉದ್ಯಮದ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಲಿದೆ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಕುಟ್ಟಲಾಗದು. ನಿಮ್ಮ ತಾಳ್ಮೆಯು ಕಡಿಮೆ ಆದಂತೆ ತೋರುವುದು. ನಿಮ್ಮ ಗುಣಗಳನ್ನು ದುರುಪಯೋಗ‌ ಮಾಡಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ಅವರು ಬೇಸರಿಸುವರು.

ತುಲಾ ರಾಶಿ: ಸ್ವಾವಲಂಬನೆಯು ಮನಸ್ಸಿನಲ್ಲಿ ಎಣಿಸಿದಕೂಡಲೇ ಬರುವುದಲ್ಲ. ಹಂತಹಂತವಾಗಿ ಅತ್ತ ಸಾಗಬೇಕು. ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಮಾನಸಿಕ ಸ್ಥಿತಿಯು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಪ್ರೇಮವನ್ನು ನಿಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ನೀವು ಕರ್ತವ್ಯವನ್ನು ಬಿಡದೇ ಕೈಯ್ಯಲ್ಲಿ ಆಗುವ ಕೆಲಸವನ್ನು ಮಾಡಿ. ಎಲ್ಲವೂ ಅನುಕೂಲಕರವಾಗಿದೆ ಎಂದು ಅನ್ನಿಸಬಹುದು.

ವೃಶ್ಚಿಕ ರಾಶಿ: ಬೇರೆಯವರ ಮುಖಾಂತರ ಪುಣ್ಯಸ್ಥಳಗಳಿಗೆ ಹೋಗಿಬರುವಿರಿ.ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿಯು ಇರುವುದು. ವಿದೇಶದ ವ್ಯಾಪಾರವು ಹದತಪ್ಪುವ ಸಾಧ್ಯತೆ ಇದೆ. ಸಂಸ್ಥೆಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವರು. ಹಣದ ಉಳಿಕೆಗೆ ಸಂಬಂಧಿಸಿದಂತೆ ನೀವು ಕಾನೂನು ರೀತಿಯ ಕ್ರಮವನ್ನು ಅನುಸರಿಸಬೇಕಾಗಬಹುದು. ಹಣದ ಕಾರಣಕ್ಕೆ ವಂಚನೆಯಲ್ಲಿ ಬೀಳುವಿರಿ. ಕ್ರಯ ಹಾಗೂ ವಿಕ್ರಯಗಳ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು.

ಧನು ರಾಶಿ: ಸಾಲವನ್ನು ವಸೂಲಿ ಮಾಡಲು ಯಾರನ್ನಾದರೂ ಸಾಲ ಕೊಟ್ಟವರು ಕಳುಹಿಸಬಹುದು. ಬೇರೆಯವರ ಮೇಲೆ ದೋಷಗಳ ಪಟ್ಟಿಯನ್ನೇ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಪುನಃ ಬರಲಿದೆ. ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಮನೆಯ ಬಾಗಿಲಿಗೆ ಅಪರಿಚಿತರ ಹಾವಳಿ ಹೆಚ್ಚಾಗುವುದು. ಸಂಗಾತಿಯ ಮಾತು ನಿಮ್ಮೊಳಗೆ ನಾಟಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಂದೆಯಿಂದ ಸಹಾಯವನ್ನು ಪಡೆಯುವಿರಿ. ಸಾಲದ ವಿಚಾರದಲ್ಲಿ ಹೆಚ್ಚಿನ ತಿಳಿವಳಿಕೆ ಅಗತ್ಯ. ದೂರ‌ಪ್ರಯಾಣವು ಸುಖ ಎನಿಸಬಹುದು. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು.

ಮಕರ ರಾಶಿ: ನಿಮ್ಮ‌ದೇಹದ ಸೂಕ್ಷ್ಮಪ್ರದೇಶಗಳ ಬಗ್ಗೆ ಎಚ್ವರಿಕೆ ಇರಲಿ.‌ ಶಸ್ತ್ರಗಳಿಂದ ಘಾಸಿಯಾಗುವ ಸಾಧ್ಯತೆ ಇರಲಿದೆ. ಪ್ರೇಮಕ್ಕೆ ಮಿತ್ರರಿಂದ‌ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳಿಂದಲೂ ಸಾಲವನ್ನು ಪಡೆಯಬೇಕಾಗಬಹುದು.ಏಕಾಂಗಿ ಇರುವುದು ನಿಮಗೆ ಇಷ್ಟವಾಗದೇ ಇರಬಹುದು. ಸಮಾರಂಭಗಳಿಗೆ ಭಾಗವಹಿಸುವಿರಿ. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು.

ಕುಂಭ ರಾಶಿ: ಎಲ್ಲೇ ಇದ್ದರೂ ಕಾರ್ಯದ ಪ್ರಗತಿಯನ್ನು ಪಡೆದುಕೊಳ್ಳಿ.‌ ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಕಛೇರಿಯ ಕೆಲಸವು ನಿಮಗೆ ಸಾಕೆನಿಸಬಹುದು. ಸಮಾಧಾನದ ಚಿತ್ತವು‌ ಅನೇಕ ಸಂಗತಿಗಳಿಗೆ ಪೂರಕವಾಗಲಿದೆ. ಕಾರ್ಯಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಸಡಿಲಿಕೆ ಬೇಡ. ನಿಮ್ಮ ಗುರಿಯು ಬದಲಾಗಬಹುದು. ‌ಪ್ರಾಣಿಗಳಿಂದ ನಿಮಗೆ ಭೀತಿಯು ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬೇಕಾಗಬಹುದು.

ಮೀನ ರಾಶಿ: ನಿಮ್ಮನ್ನು ಕಂಡರೆ ಆಗದವರ ಎದುರೇ ನೀವು ಗರ್ವದಿಂದ ಇರುವಿರಿ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗೆ ಇರಬೇಕಾಗುವುದು. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸುವರು. ಸೌಂದರ್ಯಕ್ಕೆ ಇಂದು ಬೆಲೆಕೊಡಲಿದ್ದೀರಿ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ನಿಮ್ಮ ಕಾರ್ಯಕ್ಕೆ‌ ಅಡ್ಡಿಬಂದರೆ ಆ ಕಾರ್ಯವನ್ನು ಮುಂದೂಡಿ. ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಂಗತಿಗಳು ಬರಬಹುದು. ಸ್ವಂತ ವಾಹನದಿಂದ ದೂರ ಪ್ರಯಾಣವನ್ನು ಮಾಡುವಿರಿ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಇಷ್ಟ ವಾಗದು. ಮಾತು ನೇರವಾಗಿದ್ದರೂ ಮೃದುವಾಗಿರಲಿ.

Leave a Reply

Your email address will not be published. Required fields are marked *