ಉಜಿರೆ :(ಅ.22) ದೀಪಾವಳಿ ಬಂತು ಅಂದ್ರೆ ಸಾಕು ಹೊಸ ಹೊಸ ಬಟ್ಟೆಗಳನ್ನು ಜನರು ಖರೀದಿಸುತ್ತಾರೆ. ನೂತನ ಉಡುಗೆ ತೊಡುಗೆ ಮೂಲಕ ಬೆಳಕಿನ ಹಬ್ಬವನ್ನು ಆಚರಿಸುವುದು ಸಾಮಾನ್ಯ. ನಿಮ್ಮ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲು ಉಜಿರೆಯ ಹೃದಯಭಾಗದಲ್ಲಿರುವ ಅಮೃತ್ ಸಿಲ್ಕ್ಸ್ ಸಜ್ಜಾಗಿದೆ.
ಇದನ್ನೂ ಓದಿ: 😱ಮಹಾರಾಷ್ಟ್ರ: ಮೋರಿಯಲ್ಲಿ ಹಣದ ಹೊಳೆ!!
ಹೌದು, ಉಜಿರೆಯ ಅಮೃತ್ ಸಿಲ್ಕ್ಸ್ ನಲ್ಲಿ ದೀಪಾವಳಿಗೆ ಹೊಸ ಕಲೆಕ್ಷನ್ಸ್ ಬಂದಿದ್ದು, ಎಲ್ಲಾ ವೆರೈಟಿಯ ಬಟ್ಟೆಗಳು ಲಭ್ಯವಿದೆ. ಅಲ್ಲದೆ ಭರ್ಜರಿ ಆಫರ್ ಗಳನ್ನು ಅಮೃತ್ ಸಿಲ್ಕ್ಸ್ ಈ ಬಾರಿ ನೀಡುತ್ತಿದೆ. ಇವೆಲ್ಲದಕ್ಕೂ ಮುಖ್ಯವಾಗಿ ರಾಜ್ಯದ ನಂ.1 ದಿನಪತ್ರಿಕೆಯಾಗಿರುವ ವಿಜಯವಾಣಿಯ ಅದೃಷ್ಟ ನಿಮ್ಮದು ಕೊಡುಗೆ ನಮ್ಮದು- ವಿಜಯೋತ್ಸವ 2024ರ ಭಾಗವಾಗಿ ಅಮೃತ್ ಸಿಲ್ಕ್ಸ್ ನಲ್ಲಿ ಲಕ್ಕಿ ಡ್ರಾ ಕೂಪನ್ ಬಿಡುಗಡೆ ಸಮಾರಂಭವು ಅ.22 ರಂದು ನಡೆಯಿತು.
ಕಾರ್ಯಕ್ರಮವನ್ನು ಸೋನಿಯಾ ಯಶೋವರ್ಮ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಮೃತ್ ಸಿಲ್ಕ್ಸ್ ಉಜಿರೆಯಲ್ಲಿ ಮನೆ ಮಾತಾಗಿರುವ ಸಂಸ್ಥೆಯಾಗಿದೆ. ನಾವು ಇಲ್ಲಿನ ಗ್ರಾಹಕರಾಗಿದ್ದು, ಕಡಿಮೆ ಬೆಲೆಗೂ ಉತ್ತಮ ಗುಣಮಟ್ಟದ ಬಟ್ಟೆಗಳು ಇಲ್ಲಿ ಸಿಗುತ್ತಿವೆ ಎಂದರು. ಅಲ್ಲದೇ ಅಮೃತ್ ಸಿಲ್ಕ್ಸ್ ನ ಮಾಲೀಕರಾಗಿರುವ ಪ್ರಶಾಂತ್ ಮತ್ತು ಸ್ಮಿತಾ ಅವರು ನಗುಮುಖದಿಂದಲೇ ಸೇವೆಯನ್ನು ನೀಡುತ್ತಿದ್ದಾರೆ. ಅಮೃತ್ ಸಿಲ್ಕ್ಸ್ ನಲ್ಲಿ ಎಲ್ಲಾ ಬಟ್ಟೆಗಳು ಸಿಗುತ್ತವೆ.
ಇಲ್ಲಿ ಸಿಗಲ್ಲ ಅನ್ನೋ ಮಾತು ಇಲ್ಲ ಎಂದು ತಿಳಿಸಿದರು. ಇನ್ನು ವಿಜಯವಾಣಿ ಪತ್ರಿಕೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ್ ಅವರು ಯಶೋವರ್ಮ ಅವರು ಗೆಳೆಯರಾಗಿದ್ದರು. ಲಕ್ಕಿ ಕೂಪನ್ ಮೂಲಕ ಜನರಿಗೆ ಭರ್ಜರಿ ಗಿಫ್ಟ್ ನೀಡುತ್ತಿರುವ ವಿಜಯವಾಣಿಗೂ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಉಜಿರೆಯಲ್ಲಿ ಬಟ್ಟೆಗಳನ್ನು ಉತ್ತಮ ಬೆಲೆ ಮತ್ತು ಉತ್ತಮ ಗುಣಮಟ್ಟದಲ್ಲಿ ನೀಡುವ ಏಕೈಕ ಅಂಗಡಿ ಅಂದ್ರೆ ಅದು ಅಮೃತ್ ಸಿಲ್ಕ್ಸ್. ಅವರು ಗ್ರಾಹಕರನ್ನು ಆತ್ಮೀಯವಾಗಿ ಕಾಣುತ್ತಾರೆ ಎಂದರು.
ವಿಜಯವಾಣಿಯೊಂದಿಗೆ ಸೇರಿಕೊಂಡು ಮಾಡುತ್ತಿರುವ ಈ ಕಾರ್ಯ ಜನ ಸ್ನೇಹಿಯಾಗಿದೆ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ದೀಪಾಲಿ ಡೋಂಗ್ರೆ, ಗೀತಾ ಎಂಬ್ರೋಸ್ ಫೆರ್ನಾಂಡಿಸ್, ಗಾಯತ್ರಿ ಶೀಧರ್, ಪ್ರಮೋದ್ ಕುಮಾರ್ ಬಳೆಂಜ, ರತ್ನರಾಜ್ ಜೈನ್ ಬಳೆಂಜ, ವಿನು ಬಳೆಂಜ, ನವೀನ್ ಕುಮಾರ್ , ಪದ್ಮನಾಭ ಶೆಟ್ಟಿಗಾರ್, ಅಮೃತಾವತಿ, ವಿಜಯವಾಣಿಯ ಮನೋಹರ್ ಬಳೆಂಜ, ಅಮೃತ್ ಸಿಲ್ಕ್ಸ್ ಮಾಲೀಕ ಪ್ರಶಾಂತ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸೋಮಶೇಖರ ಶೆಟ್ಟಿ ನಿರೂಪಿಸಿದರು. ಸ್ಮಿತಾ ಪ್ರಶಾಂತ್ ಧನ್ಯವಾದ ಸಮರ್ಪಿಸಿದರು.
ಹೇಗಿರುತ್ತೆ ಲಕ್ಕಿ ಡ್ರಾ ಕೂಪನ್ ಸೇವೆ..?
ಅಮೃತ್ ಸಿಲ್ಕ್ಸ್ ನಲ್ಲಿ ನೀವು 2000 ರೂ. ಗಿಂತ ಹೆಚ್ಚು ಶಾಪಿಂಗ್ ಮಾಡಿದರೆ ಅಮೃತ್ ಸಿಲ್ಕ್ಸ್ ನಿಮಗೆ ವಿಜಯವಾಣಿಯ ಕೂಪನ್ ಅನ್ನು ನೀಡುತ್ತದೆ. ರಾಜ್ಯಾದ್ಯಂತ 2500 ಕ್ಕೂ ಹೆಚ್ಚು ಬಹುಮಾನಗಳನ್ನು ಈ ಕೂಪನ್ ಡ್ರಾ ಮೂಲಕ ನೀಡಲಾಗುತ್ತದೆ. ಪ್ರಥಮ ಬಹುಮಾನ ಕಾರು ಸಿಗಲಿದೆ. ಬೈಕು ಸೇರಿ ಹಲವಾರು ಬೆಲೆಬಾಳುವ ವಸ್ತುಗಳು ಗ್ರಾಹಕರ ಪಾಲಾಗಲಿದೆ. ನವೆಂಬರ್ 16ರ ವರೆಗೆ ಈ ಲಕ್ಕಿ ಕೂಪನ್ ಚಾಲ್ತಿಯಲ್ಲಿರಲಿದೆ. ನಂತರ ಡ್ರಾ ನಡೆದು ಬಹುಮಾನ ಅದೃಷ್ಟ ಶಾಲಿಗಳ ಪಾಲಾಗಲಿದೆ. ಈ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.