ಉಜಿರೆ :(ಅ.22) ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಗಳು ಒಂದು ಬಾರಿ ಮೈಕೊಡವಿ ನಿಲ್ಲುತ್ತೆ. ಯಾಕೆಂದರೆ, ದೀಪಾವಳಿ ಅಂದ್ರೆ ಹೊಸ ವಸ್ತುಗಳನ್ನು ಖರೀದಿಸುವ ಸಮಯ ಕೂಡ ಹೌದು. ಈ ಬಾರಿ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯಲ್ಲಿ ಭರ್ಜರಿ ಗಿಫ್ಟ್ ನೀವು ಪಡೆಯಬಹುದು.
ಇದನ್ನೂ ಓದಿ: ⭕ಉಡುಪಿ : ಸ್ನೇಹಿತನ ಕತ್ತು ಸೀಳಿ ಬರ್ಬರ ಹತ್ಯೆ!!
ಹೇಗೆ ಗೊತ್ತಾ..?. ರಾಜ್ಯದ ನಂ. 1 ದಿನ ಪತ್ರಿಕೆಯಾಗಿರುವ ವಿಜಯವಾಣಿ ಅದೃಷ್ಟ ನಿಮ್ಮದು ಕೊಡುಗೆ ನಮ್ಮದು- ವಿಜಯೋತ್ಸವ 2024ರ ಭಾಗವಾಗಿ, ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಜೊತೆಯಾಗಿ ಲಕ್ಕಿ ಕೂಪನ್ ಅನ್ನು ಲಕ್ಷ್ಮಿ ಇಂಡಸ್ಟ್ರೀಸ್ ನ ಮಳಿಗೆಯಲ್ಲಿ ಅತಿಥಿಗಳು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷರಾದ ಪೂರನ್ ವರ್ಮ ಅವರು, ವಿಜಯವಾಣಿಯ ಈ ಅದೃಷ್ಟದ ಕೂಪನ್ ಸೇವೆ ಲಕ್ಷ್ಮಿ ಇಂಡಸ್ಟ್ರೀಸ್ ನಲ್ಲಿ ದೊರಕುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಯಾಕಂದ್ರೆ ಈ ಇಂಡಸ್ಟ್ರೀನ ಹೆಸರು ಕನಸಿನ ಮನೆ ಅಂತ. ಮೋಹನ್ ಕುಮಾರ್ ಅವರು ಈ ಮಳಿಗೆಯಲ್ಲಿ ಕೂತು ಕಾಣುವ ಕನಸನ್ನು ಬದುಕು ಕಟ್ಟೋಣ ಮೂಲಕ ಬದುಕು ಕಟ್ಟುವ ಕೆಲಸ ಮಾಡುತ್ತಾರೆ.
ಹೀಗೆ ಈ ಉತ್ತಮ ಕಾರ್ಯಕ್ರಮ ಮೋಹನ್ ಕುಮಾರ್ ಅವರ ಈ ಮಳಿಗೆಯಲ್ಲಿ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಅಂದರು. ಈ ವೇಳೆ ಮಾತನಾಡಿದ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯ ಮಾಲೀಕ ಕೆ. ಮೋಹನ್ ಕುಮಾರ್ ಅವರು, ಅದೃಷ್ಟ ಎಲ್ಲರಿಗೂ ಸಿಗಲ್ಲ ಆದರೆ ಮನೆ ಕಟ್ಟುವವರಿಗೆ ಈ ಬಾರಿ ಅದೃಷ್ಟ ಸಿಗಲಿದೆ.
ಕನಸಿನ ಮನೆಗೆ ಬಂದು ಮನೆಗೆ ಸಂಬಂಧಪಟ್ಟ ವಸ್ತುಗಳನ್ನು ಖರೀದಿಸುವವರಿಗೆ ಅದೃಷ್ಟ ಅವರ ಪಾಲಾಗಲಿದೆ. ಇದೊಂದು ವಿಶೇಷ ಕಾರ್ಯಕ್ರಮ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪ್ರಮೋದ್ ಕುಮಾರ್ ಬಳೆಂಜ, ರತ್ನರಾಜ್ ಜೈನ್ ಬಳೆಂಜ, ವಿನು ಬಳೆಂಜ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೇಗಿರುತ್ತೆ ಲಕ್ಕಿ ಡ್ರಾ ಕೂಪನ್ ಸೇವೆ..?
ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯಲ್ಲಿ ನೀವು 2000 ರೂ. ಗಿಂತ ಹೆಚ್ಚು ಶಾಪಿಂಗ್ ಮಾಡಿದರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯಲ್ಲಿ ನಿಮಗೆ ವಿಜಯವಾಣಿಯ ಕೂಪನ್ ಅನ್ನು ನೀಡಲಾಗುತ್ತದೆ. ರಾಜ್ಯಾದ್ಯಂತ 2500 ಕ್ಕೂ ಹೆಚ್ಚು ಬಹುಮಾನಗಳನ್ನು ಈ ಕೂಪನ್ ಡ್ರಾ ಮೂಲಕ ನೀಡಲಾಗುತ್ತದೆ. ಪ್ರಥಮ ಬಹುಮಾನ ಕಾರು ಸಿಗಲಿದೆ. ಬೈಕು ಸೇರಿ ಹಲವಾರು ಬೆಲೆ ಬಾಳುವ ವಸ್ತುಗಳು ಗ್ರಾಹಕರ ಪಾಲಾಗಲಿದೆ. ಇಂದಿನಿಂದ ಆರಂಭವಾಗಿ ನವೆಂಬರ್ 16ರ ವರೆಗೆ ಈ ಲಕ್ಕಿ ಕೂಪನ್ ಚಾಲ್ತಿಯಲ್ಲಿರಲಿದೆ. ನಂತರ ಡ್ರಾ ನಡೆದು ಬಹುಮಾನ ಅದೃಷ್ಟ ಶಾಲಿಗಳ ಪಾಲಾಗಲಿದೆ. ಈ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.