Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ಮೇಷ ರಾಶಿ : ಪ್ರಭಾವೀ ವ್ಯಕ್ತಿಗಳ ಪರಿಣಾಮವು ನಿಮ್ಮ ಮೇಲೆ ಗಾಢವಾಗಿರುವುದು. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಇಂದಿನ ಕೆಲಸಗಳು ಅಡೆತಡೆ ಇಲ್ಲದೇ ಸಾಗುವುದು. ವಾಹನ ಖರೀದಿಗೆ ಹಣವನ್ನು ಹೊಂದಿಸುವಿರಿ. ಅಪಘಾತ ಭೀತಿಯು ನಿಮ್ಮನ್ನು ಹೆಚ್ಚು ಕಾಡುವುದು. ಎಂತಹ ನಷ್ಟವನ್ನೂ ನೀವು ಆತ್ಮಸ್ಥೈರ್ಯದಿಂದ ಎದುರಿಸಬಲ್ಲಿರಿ. ನಿಮಗೆ ಸಂಬಂಧವಿಲ್ಲದೇ ಇರುವ ವಿಚಾರಕ್ಕೆ ಯೋಚಿಸುವಿರಿ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಚಾರಗಳಿಗೆ ಹೆಚ್ಚು ಸ್ಪಂದಿಸುವುದು. ಸ್ನೇಹಕ್ಕೆ ನೀವು ಬೆಲೆಯನ್ನು ಕೊಡುವಿರಿ.

ವೃಷಭ ರಾಶಿ :ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ ಇರದು. ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ನಿಮ್ಮವರು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಲು ಬಿಡರು. ನಿಮ್ಮ ಮಾತು ಇನ್ನೊಬ್ಬರಿಗೆ ಬೇಸರವನ್ನು ತರಿಸೀತು. ಮಕ್ಕಳ ವಿಚಾರದಲ್ಲಿ ನೀವು ಸಹಕಾರ ಕೊಡುವಿರಿ. ನಿಮ್ಮನ್ನು ನಿಮಗಿಂತ‌ ಮೇಲಿನವರು ಪರೀಕ್ಷಿಸಬಹುದು. ಏಕಾಂತಕ್ಕೆ ನೀವು ಹೆಚ್ಚಿನ ಒತ್ತನ್ನು ಕೊಡುವಿರಿ.

ಮಿಥುನ ರಾಶಿ :ನಿಮ್ಮ ಬಲವನ್ನು ಯಾರದೋ ಮೂಲಕ ಕಂಡುಕೊಳ್ಳುವ ಬದಲು, ನೀವೇ ಅರಿತುಕೊಂಡರೆ ಸುಖ. ನಿಮ್ಮಲ್ಲಿರುವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳಿ. ಬಹಳ ಜಾಣ್ಮೆಯಿಂದ ಕಾರ್ಯವನ್ನು ಸಾಧಿಸುವಿರಿ. ನಿರೀಕ್ಷಿತ ಸ್ಥಾನವನ್ನು ನೀವು ಪಡೆದುಕೊಳ್ಳುವಿರಿ. ನಿಮಗೆ ಇಷ್ಟವಾದ ಸ್ಥಳಗಳಿಗೆ ಹೋಗುವಿರಿ. ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗುವುದು.

ಕರ್ಕಾಟಕ ರಾಶಿ :ಸಂದೇಹದಿಂದ ಮನಸ್ಸು ಹಾಳಾಗುತ್ತದೆ. ಹಾಳಾದ ಮನಸ್ಸಿನಿಂದ ಕೆಲಸವೂ ಹಾಳು. ಸಹೋದರಿಯ ಸಹಾಯವು ನಿಮಗೆ ಸಿಗಲಿದ್ದು ನಿಮ್ಮ‌ ಜವಾಬ್ದಾರಿಯೂ ಹೆಚ್ಚಾಗಲಿದೆ. ಭೂಮಿಯ ವ್ಯವಹಾರವು ಸುಗಮವಾಗಿ ಸಾಗುವುದು. ಆರ್ಥಿಕ ಸಮಸ್ಯೆಯನ್ನು ನೀವು ದೂರ ಮಾಡಿಕೊಳ್ಳುವಿರಿ. ಬೆಚ್ಚಗಿನ ವಾತಾವರಣದಿಂದ ಹೊರಬಂದಾಗಲೇ ಗೊತ್ತಾಗುವುದು. ಬಂಧುಗಳು ನಿಮ್ಮಿಂದ ಆರ್ಥಿಕ ಸಹಾಯವನ್ನು ಬಯಸಿದ್ದರೂ ಕೇಳಲು ಹಿಂದೇಟು ಹಾಕುವರು.

ಸಿಂಹ ರಾಶಿ :ಸಿಟ್ಟನ್ನು ಮಾಡಿಕೊಳ್ಳುವುದು ಸರಿ ಎನಿಸಿದರೂ ಇದರಿಂದ ಆಗುವ ತೊಂದರೆಯಿಂದ ಸುಮ್ಮನಿರುವುದೇ ಒಳ್ಳೆಯದು. ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ವಾಸಸ್ಥಳದ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಜಾಣತನ. ಸ್ತ್ರೀಯರ ಒಡನಾಟ ಅತಿಯಾಗಿ ಬೇಡ.

ಕನ್ಯಾ ರಾಶಿ :ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣಬಹುದು. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಂಗಾತಿಗೆ ನಿಮ್ಮ ಕಾರಣದಿಂದ ಉತ್ತಮ ಕೆಲಸವು ಸಿಗಲಿದೆ. ಕಛೇರಿಯಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ.

ತುಲಾ ರಾಶಿ :ನ್ಯಾಯಾಲಯದ ಹೋರಾಟಕ್ಕೆ ಸ್ನೇಹಿತರ ಬೆಂಬಲ ಸಿಗುವುದು. ಮನಸ್ಸಿನಲ್ಲಿ ಹತಾಶೆ, ಗೊಂದಲ, ಸಿಟ್ಟು ಎಲ್ಲವೂ ಕೂಡಿಕೊಂಡು ಯಾವುದನ್ನೂ ಮಾಡಲಾಗದ ಸ್ಥಿತಿಯು ನಿಮ್ಮದಾಗಲಿದೆ. ಅನ್ಯಾಯಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮದಲ್ಲದ ಕೆಲಸಕ್ಕೂ ನೀವೇ ಜವಾಬ್ದಾರರಾಗಬೇಕಾಗಬಹುದು. ವೈವಾಹಿಕ ವಿಚಾರದ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟವಾದೀತು. ದೈವದ ಮೊರೆ ಬಿಟ್ಟರೆ ಮತ್ತಾವುದೂ ಕಾಣಸಿಗದು.

ವೃಶ್ಚಿಕ ರಾಶಿ :ಎಲ್ಲವನ್ನೂ ಬಿಟ್ಟು ಸುಮ್ಮನಿದ್ದರೂ ಜೊತೆಗಾರರು ಸುಮ್ಮನಿರಲಾರರು. ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಸಾಲದಿಂದ ನೀವು ತಲೆ ಮರೆಸಿಕೊಳ್ಳುವ ಸ್ಥಿತಿಯೂ ಬರಬಹುದು.‌ ಅದಕ್ಕೆ ಬೇಕಾದ ಸಿದ್ಧತೆಯನ್ನು ಇಂದೇ ಮಾಡಿಕೊಳ್ಳುವುದು ಉತ್ತಮ. ಸ್ಥಿರಾಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಸಾಹಸಮಾಡಬೇಕಾದೀತು.

ಧನು ರಾಶಿ :ಹಿತಶತ್ರುಗಳಿಂದ ನಿಮಗೆ ನೆಮ್ಮದಿ ಕಡಿಮೆಯಾಗಬಹುದು. ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ವಿದ್ಯಾರ್ಥಿಗಳ ಪ್ರಗತಿಯ ವಿಷಯವು ಮಂದಗತಿಯಲ್ಲಿಯೇ ಇರುವುದು. ಸಕಾರಾತ್ಮಕ ಚಿಂತನೆಯನ್ನೇ ಮಾಡಿಕೊಳ್ಳಿ. ನಂಬಿಕೆಯನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕಷ್ಟವಾದೀತು. ಕಾರ್ಯದ ಸ್ಥಳದಲ್ಲಿ ಅಪವಾದ ಬರಬಹುದು. ಕಛೇರಿಯಲ್ಲಿ ನಿಮಗೆ ಆಗದವರ ಸಂಗವು ನಿರ್ಮಾಣವಾಗಲಿದೆ.

ಮಕರ ರಾಶಿ :ನಿಮ್ಮ ಹಳೆಯ ನೌಕರರನ್ನು ಕೈಬಿಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿಮ್ಮ ಕುಶಲ ಕಾರ್ಯಗಳು ಇತರರಿಗೂ ಗೊತ್ತಾದೀತು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ನಿಮ್ಮ ಕಡೆಯಿಂದ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಸಭ್ಯತೆಯನ್ನು ಇತರರು ಬಳಸಿಕೊಳ್ಳುವರು. ಸಂಗಾತಿಯ ಜೊತೆ ಸಂತೋಷದಿಂದ ಇರುವಿರಿ. ಸಂಪತ್ತಿನ ಉಳಿತಾಯದ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ.

ಕುಂಭ ರಾಶಿ :ಒತ್ತಡದ ಕಾರಣ ಕೆಲವನ್ನು ನೀವು ಬಿಡಬೇಕಾಗುವುದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಬರುವ ಅಲ್ಪ ಆದಾಯವನ್ನು ನೀವು ರಕ್ಷಿಸಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬಕ್ಕೆ ನಿಮ್ಮ ಮೇಲೆ ಪ್ರೀತಿಯು ಅಧಿಕವಾಗಲಿದೆ. ಓಡಾಟದಿಂದ ಆಯಾಸಗೊಳ್ಳುವಿರಿ. ಬಂಧುಗಳಿಂದ ಸಲ್ಲದ ಮಾತುಗಳು ಕೇಳಿಬರಬಹುದು. ಆಸ್ತಿಯ ವಿಚಾರದಲ್ಲಿ ವಾದಗಳು ಆಗಬಹುದು. ಆಲಸ್ಯದಿಂದ ನಿಮ್ಮ ಎಲ್ಲ ಕೆಲಸಗಳೂ ಹಾಗೆಯೇ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಇಷ್ಟಪಡದೇ ಇರುವುದು ಉತ್ತಮ.

ಮೀನ ರಾಶಿ :ನಿಮ್ಮ ಜೀವನಕ್ಕೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸುವಿರಿ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಸಾಮಾಜಿಕ ಕಾರ್ಯಗಳು ನಿಮಗೆ ಪ್ರಶಂಸೆಯನ್ನು ತಂದುಕೊಡುವುದು. ಅಂದುಕೊಂಡ ಕಾರ್ಯವು ಪೂರ್ಣವಾಗಿ ಆಗುವುದಿಲ್ಲ. ಮಾತುಗಳನ್ನು ಇಂದು ಕಡಿಮೆ ಮಾಡಿಕೊಳ್ಳುವಿರಿ. ಎಂದೋ ಆಗುವ ತೊಂದರೆಯನ್ನು ಇಂದು ನೆನೆಯುವುದು ಬೇಡ. ಸಂಪತ್ತಿನ‌ ನಿರ್ವಹಣೆಯನ್ನು ಮಾಡಲು ನೀವು ಸಮರ್ಥರಾಗುವಿರಿ. ಅಪರಿಚಿತರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ.

Leave a Reply

Your email address will not be published. Required fields are marked *