Wed. Nov 20th, 2024

Mangalore: ಎಮ್.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ಪರ ನಿಂತ ಎಬಿವಿಪಿ

ಮಂಗಳೂರು:(ಅ.23) ಮಂಗಳೂರು ಯೂನಿವರ್ಸಿಟಿ ಅದೀನದಲ್ಲಿ ಬರುವ ಕಾರ್ ಸ್ಟ್ರೀಟ್, ತೆಂಕನಿಡಿಯೂರು, ಬೆಳ್ಳಾರೆ ಮತ್ತು ವಿಟ್ಲ ಸರಕಾರಿ ಕಾಲೇಜುಗಳಲ್ಲಿ ಎಂಎಸ್ ಡಬ್ಲ್ಯು ಪದವಿ ಇದೆ.

ಇದನ್ನೂ ಓದಿ: 🟣ಧಾರವಾಡ: ಧಾರವಾಡ ಜಿಲ್ಲೆ ಆರ್ ಡಿ ಪಿ ಆರ್ ನ ಸಮಾಲೋಚನಾ ಸಭೆ

ಸುಮಾರು 60ರಿಂದ 70 ವಿದ್ಯಾರ್ಥಿಗಳು ಪದವಿ ಓದುತ್ತಿದ್ದು, ಈ ಬಾರಿಯ ಶೈಕ್ಷಣಿಕ ವರ್ಷ ಆರಂಭ ಆಗಿದ್ದರೂ ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಗೊಂದಲದಲ್ಲಿದ್ದಾರೆ. ಎರಡನೇ ವರ್ಷದ ಪದವಿಯಲ್ಲಿ ಇಲೆಕ್ಟಿವ್ ಪೇಪರ್ ಆಗಿ ಮೆಡಿಕಲ್ ಸೈಕಾಲಜಿ, ಎಚ್.ಆ‌ರ್ ಕಮ್ಯುನಿಕೇಶನ್, ಕಮ್ಯುನಿಟಿ ಡೆವಲಪ್ಮೆಂಟ್ ವಿಷಯದಲ್ಲಿ ಕಲಿಯುವುದಕ್ಕೆ ಅವಕಾಶ ಇದೆ.

ಆದರೆ ಈಗ ಕಾಲೇಜಿನಲ್ಲಿ ಇದರಲ್ಲೊಂದನ್ನು ಕಲಿಯುವುದಕ್ಕೆ ಅವಕಾಶ ಕೊಡದೆ, ಮೆಡಿಕಲ್ ಮಾತ್ರ ಆಯ್ದುಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದರು.


ಮಂಗಳೂರು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕರ ಆದೇಶದ ಮೇರೆಗೆ ಈ ನಿಲುವನ್ನು ತೆಗೆದು ಕೊಳ್ಳಲಾಗಿದೆ ಎಂದು ಉಡಾಫೆ ಉತ್ತರ ನೀಡುತ್ತಿರುವುದನ್ನು ಖಂಡಿಸಿ ಇವತ್ತು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ ಸೂಚಿಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕಾರದ ಸುವಿತ್ ಶೆಟ್ಟಿ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾದರೂ ಅದರ ವಿರುದ್ಧ ಎಬಿವಿಪಿ ಹೋರಾಡಲಿದೆ, ಎಮ್ ಎಸ್. ಡಬ್ಲ್ಯೂ ವಿದ್ಯಾರ್ಥಿಗಳ ಸಮಸ್ಯೆ 2ದಿನಗಳ ಒಳಗಾಗಿ ಬಗೆಹರಿಯಬೇಕು ಇಲ್ಲವಾದರೆ ಎಬಿವಿಪಿ ನೇತೃತ್ವದಲ್ಲಿ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ವಿಶ್ವವಿದ್ಯಾಲಯದ ಅಧಿಕಾರಿಗಳಾದ ದೇವಿ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮರಾಠಿ, ಪ್ರತೀಕ್ ಬಂಟ್ವಾಳ್, ಶಶಾಂಕ್, ನಿಖಿಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *