Nisha Yogeshwar:(ಅ.23) ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕಾವು ಜೋರಾಗಿದೆ. ಈ ವಿಚಾರವಾಗಿ ಈಗ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಬಂಡಾಯವೆದ್ದಿದ್ದು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: 🟣ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬೇರೆ ಆಗಲು ಆ ಹಿರಿಯ ನಟ ಕಾರಣ!?
ಅಲ್ಲದೆ ಚನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಇಂಗಿತ ಹೊರಹಾಕಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಯೋಗೇಶ್ವರ್ ಪುತ್ರಿ ನಿಶಾ ತಮ್ಮ ತಂದೆಯ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಒಂದೆಡೆ ಚನ್ನಪಟ್ಟಣದಲ್ಲಿ ಟಿಕೆಟ್ ಪಡೆಯಲು ಸಿಪಿವೈ ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಅಪ್ಪನಿಂದ ಅಂತರ ಕಾಯ್ದುಕೊಂಡಿರುವ ಪುತ್ರಿ ನಿಶಾ ಮತ್ತೆ ಟಾಂಗ್ ನೀಡಿದ್ದಾರೆ.
ಹೀಗಾಗಿ ಈಗ ಅಪ್ಪ – ಮಗಳ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ. ‘ಕೆಲವರು ಒಳ್ಳೆಯವರಂತೆ ಸಮಾಜಕ್ಕೆ ಬಿಂಬಿಸಿ ತೋರಿಸಿದ್ದಾರೆ. ಅಂಥವರ ಸತ್ಯವನ್ನು ಹೊರ ತರುತ್ತೇನೆ” ಇದು ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸದ್ಯ ನಿಶಾ ಅವರು ಯಾರ ಹೆಸರು ಬಳಸದೇ ಮಾರ್ಮಿಕವಾಗಿ ನಿಶಾ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ “ನಾನು ನನ್ನ ಜೀವನದಲ್ಲಿ ನೆಮ್ಮದಿಯಾಗಿ ಇರಲು ಪ್ರಯತ್ನಿಸಿದೆ. ಆದರೆ ಏನನ್ನೂ ಮಾಡದ ಪರಿಸ್ಥಿತಿಯಿದೆ. ಯಾವ ಕ್ಷೇತ್ರದಲ್ಲೂ ಮುಂದೆ ಬರದಂತೆ ಮಾಡಿದ್ದಾರೆ. ವಿದ್ಯಾಭ್ಯಾಸ, ಸಿನಿಮಾ ಕ್ಷೇತ್ರದಿಂದಲೂ ನನಗೆ ಸಕ್ಸಸ್ ಆಗದಂತೆ ನೋಡಿಕೊಂಡರು. ಪದವಿ ಮಾಡದಂತೆ ಒತ್ತಡ ಹಾಕಿದರು. ಕಷ್ಟಪಟ್ಟು ಕಾಲೇಜಿಗೆ ಟಾಪರ್ ಆದೆ.
ಉದ್ಯೋಗ ಮಾಡದಂತೆ ಒತ್ತಡ ಹಾಕಿದರು. ರಾಜಕೀಯದಲ್ಲಿ ಬರುವುದಕ್ಕೆ ಪ್ರಯತ್ನ ಪಟ್ಟೆ. ಅಲ್ಲೂ ನಾನೂ ರಾಜಕೀಯಕ್ಕೆ ಬರದಂತೆ ನೋಡಿಕೊಂಡರು. ಈಗ ಸಮಾಜ ಸೇವೆ ಮಾಡುವುದಕ್ಕೆಂದು ಹೊರಟರೂ ಬಿಡುತ್ತಿಲ್ಲ” ಎಂದು ವಿಡಿಯೋದಲ್ಲಿ ನಿಶಾ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.