Sat. Apr 12th, 2025

Bigg Boss: ಬಿಗ್ ಬಾಸ್ ಗೆ ವೈಲ್ಡ್‌‌ ಕಾರ್ಡ್‌ ಎಂಟ್ರಿ ಕೊಟ್ಟ ಸ್ಪರ್ಧಿ ವಿರುದ್ಧ FIR ದಾಖಲು !!?

Bigg Boss:(ಅ.24) ಬಿಗ್‌ಬಾಸ್‌ ಕಾರ್ಯಕ್ರಮವು ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: 🟣ಗೋಲ್ಡನ್‌ ಸ್ಟಾರ್‌ ಪತ್ನಿ ಶಿಲ್ಪಾ ಗಣೇಶ್‌ ತುಳು ಚಿತ್ರರಂಗಕ್ಕೆ ಎಂಟ್ರಿ!!

ಈ ಬಿಗ್ ಬಾಸ್ ಮನೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದ್ದು, ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದ ಸ್ಪರ್ಧಿ ವಿರುದ್ಧ ಕೇಸ್ ದಾಖಲಾಗಿದೆ. ಹಾಗಂತ ಇದು ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಅಲ್ಲ. ತೆಲುಗು ಬಿಗ್ ಬಾಸ್ ನಲ್ಲಿ.

ತೆಲುಗು ಬಿಗ್‌ಬಾಸ್‌ ಇತ್ತೀಚೆಗೆ ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತೆಲುಗು ನಟ ನಾಗಾರ್ಜುನ್ ಹೋಸ್ಟ್‌ ಮಾಡುವ ಈ ಬಾರಿಯ ಬಿಗ್‌ಬಾಸ್ 8 ನಲ್ಲಿ ಹಲವಾರು ಜನಪ್ರಿಯ ಕಲಾವಿದರು ಇದ್ದಾರೆ.

ಅಲ್ಲದೇ ಈ ಬಾರಿ ವೈಲ್ಡ್‌ ಕಾರ್ಡ್‌ ಆಗಿ ಇತ್ತೀಚೆಗೆ ಎಂಟ್ರಿ ಕೊಟ್ಟಿದ್ದರು. ಮಾತ್ರವಲ್ಲ ಸ್ಪರ್ಧಿಗೆ ಹೃದಯಾಘಾತವಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಸ್ಪರ್ಧಿಯ ವಿರುದ್ಧ ಕೇಸ್‌‌ ದಾಖಲಾಗಿದೆ.

ಮೂಲಗಳ ಪ್ರಕಾರ ಜಗಿತ್ತಾಲ ಅರಣ್ಯ ಇಲಾಖೆಗೆ ಬಂದಿರುವ ದೂರಿನ ಆಧಾರದ ಮೇಲೆ ಗಂಗವ್ವ ಸಮೇತ, ಯೂಟ್ಯೂಬರ್ ರಾಜು ವಿರುದ್ಧ ಪ್ರಕರಣ ದಾಖಲಾಗಿದೆಯಂತೆ. ಮೇ 20, 2022 ರಂದು, ಮೈ ವಿಲೇಜ್ ಶೋ ಯೂಟ್ಯೂಬ್ ಚಾನೆಲ್‌ನಲ್ಲಿ ಗಂಗವ್ವ ಗಿಳಿ ಪಂಚಾಂಗ ಹೆಸರಿನ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು.

ಆ ವೀಡಿಯೊದಲ್ಲಿ, ಜ್ಯೋತಿಷ್ಯ ಹೇಳಲು ಗಿಳಿಯನ್ನು ಸೆರೆಹಿಡಿಯಲಾಗಿದೆ. ಗಿಳಿ ಮತ್ತಿತರ ಪಕ್ಷಿಗಳನ್ನು ಮನರಂಜನೆಗೆ ಬಳಸುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರಾಣಿ ದಯಾ ಸಂಘದ ಸದಸ್ಯ ಗೌತಮ್ ಅಧಿಕಾರಿಗಳಿಗೆ ದೂರಿದ್ದಾರೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಗಂಗವ್ವ ಮೇಲೆ ಈ ಪ್ರಕರಣ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಗಂಗವ್ವ ವಿರುದ್ಧದ ಪ್ರಕರಣದ ಹಿಂದೆ ಷಡ್ಯಂತ್ರ ಇರಬಹುದೆಂಬ ಶಂಕೆಯನ್ನೂ ಅವರ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.. ಮುಂದೆನಾಗುತ್ತೆ..? ಕಾದು ನೋಡಬೇಕಿದೆ!!

Leave a Reply

Your email address will not be published. Required fields are marked *