ಮೇಷ ರಾಶಿ: ನಿಮ್ಮ ಕಾರ್ಯವೇ ಇಂದು ಎಲ್ಲವನ್ನು ಹೇಳುವುದು. ನೀವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕಾಗುವುದು. ನಿಮ್ಮ ಕಾರ್ಯವು ಆಗಬೇಕಾದರೆ ತಿರುಗಾಟವನ್ನು ಮಾಡುವುದು ಅನಿವಾರ್ಯ. ಸಂಗಾತಿಗೆ ಯಾವುದಾದರೂ ರೀತಿಯಲ್ಲಿ ಸಂತೋಷವಾಗುವಂತೆ ನೋಡಿಕೊಳ್ಳುವಿರಿ. ಇಬ್ಬರ ನಡುವೆ ವಾಗ್ವಾದವೂ ಆಗಲಿದೆ.
ವೃಷಭ ರಾಶಿ: ಎಲ್ಲವನ್ನೂ ಕಳೆದುಕೊಳ್ಳುವ ಬದಲು ಅಲ್ಪವಾದರೂ ಉಳಿದುಕೊಳ್ಳಲಿ ಎಂಬ ನಿರ್ಧಾರವೇ ಸರಿ. ವೃತ್ತಿಯನ್ನು ಹೊರತುಪಡಿಸಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಸಂಕೀರ್ಣತೆಯಿಂದ ಹೊರಬಂದಾಗ ದಾರಿ ಸಿಗುವುದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಇದ್ದರೂ ನಿಮಗೆ ಸಮಾಧಾನ ಇರದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ನೀಡುವಿರಿ.
ಮಿಥುನ ರಾಶಿ: ನಿಮ್ಮ ಹಸ್ತಕ್ಷೇಪವು ಬೇರೆಯವರಿಗೆ ಹಿಡಿಸದು. ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ವೈಯಕ್ತಿಕ ಕೆಲಸಗಳು ಬಹಳಷ್ಟು ಇದ್ದು ಅದನ್ನು ಮಾಡಲು ನಿಮಗೆ ಸಮಯವು ಸಿಗದಾಗುವುದು. ಮಿತ್ರರ ಸಹಾಯದಿಂದ ನಿಮಗೆ ಉತ್ತಮ ಲಾಭವು ಸಿಗಲಿದೆ. ಎಲ್ಲರೆದುರು ನಿಮಗೆ ಅಪಮಾನವಾಗುವ ಸಂದರ್ಭವು ಬರಬಹುದು. ಇನ್ನೊಬ್ಬರ ನೋವನ್ನು ನೋಡಿ ಸುಮ್ಮನೆ ಇರಲಾಗದು.
ಕರ್ಕಾಟಕ ರಾಶಿ: ನಿಮ್ಮ ದೈಹಿಕ ಸಮಸ್ಯೆಯನ್ನು ಮುಚ್ಚಿಟ್ಟು ಪ್ರಯೋಜನವಾಗದು. ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ಸ್ಥಳವು ಸಿಗಬಹುದು. ನಿಮಗೆ ಇಷ್ಟವಾದ ವಿಚಾರವನ್ನು ಬೇಗ ಗ್ರಹಿಸುವಿರಿ. ಮತ್ತೇನನ್ನೂ ವಿಚಾರಿಸದೇ ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ.
ಸಿಂಹ ರಾಶಿ: ನಿಮ್ಮ ಪೂರ್ವನಿರ್ಧಾರಗಳು ಬದಲಾಗಬಹುದು. ನಿಮ್ಮ ಬಂಧುಗಳ ಕಡೆಯಿಂದ ವಿವಾಹವು ಏರ್ಪಡಬಹುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸುವಿರಿ. ನೀವು ಮಾಡುವ ಕಾರ್ಯದಲ್ಲಿ ಗೊಂದಲವಿದ್ದರೆ ಯಾರನ್ನಾದರೂ ಕೇಳಿ. ನಿಮ್ಮ ಅನುಕೂಲತೆಯನ್ನು ನೋಡಿಯೇ ಹೆಜ್ಜೆ ಇಡುವುದು ಉತ್ತಮ. ಮುಂದೂಡುತ್ತ ಕುಳಿತರೆ ಇನ್ನಷ್ಟು ಗೊಂದಲಗಳು ಹೆಚ್ಚಾದೀತು. ಸಂಗಾತಿಯ ವಿಷಯಕ್ಕೆ ನಿಮಗೆ ಬೇಸರವಾಗುವುದು.
ಕನ್ಯಾ ರಾಶಿ: ನಿಮ್ಮ ಉತ್ಸಾಹಕ್ಕೆ ಯಾರಾದರೂ ತಣ್ಣೀರು ಹಾಕಬಹುದು. ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಸುಲಭ ಮಾರ್ಗದಲ್ಲಿ ಆದಾಯವನ್ನು ಪಡೆಯುವ ಯೋಜನೆಯು ಯಶಸ್ವಿಯಾಗದು. ಸರ್ಕಾರಿ ಕೆಲಸಗಳು ಒತ್ತಡದಿಂದಾಗಿ ಮುಂದುವರಿಯುವುದು. ನೀವು ಮೌನದಿಂದ ಇದ್ದಷ್ಟು ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ್ದೀರಿ ಎಂದಾಗುವುದು.
ತುಲಾ ರಾಶಿ: ಇಂದು ನಿಮಗೆ ಪೂರೈಕೆಯಲ್ಲಿ ಹಿನ್ನಡೆ ಅಥವಾ ಅಧಿಕ ಒತ್ತಡವಾಗಲಿದೆ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಸ್ವಲ್ಪಮಟ್ಟಿಗೆ ಸಾಲವು ಮುಕ್ತಾಯವಾಗಿದ್ದರಿಂದ ಕುಟುಂಬದಲ್ಲಿ ಸೌಖ್ಯವು ಇರಲಿದೆ. ಎಲ್ಲ ಕೆಲಸಗಳೂ ಅಪೂರ್ಣವಾಗಿರುವುದು ನಿಮಗೆ ಕಿರಿಕಿರಿ ಆಗಲಿದೆ. ನಿಮ್ಮ ಕಾರ್ಯದ ಉದ್ದೇಶವು ಭಂಗವಾಗಬಹುದು. ಯಾವುದನ್ನು ಮುಗಿಸಬೇಕು ಎನ್ನುವ ಗೊಂದಲವೂ ಇರುವುದು. ಮಾನಸಿಕ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ.
ವೃಶ್ಚಿಕ ರಾಶಿ: ನಿಮ್ಮ ಇಂದಿನ ವಾದಕ್ಕೆ ಕೊನೆಮೊದಲಿಲ್ಲದೇ ಹೋಗಬಹುದು. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಇಂದಿನ ಎಲ್ಲ ಕಾರ್ಯವನ್ನೂ ಒತ್ತಡದಿಂದಲೇ ಮಾಡಬೇಕಾದೀತು. ನೀವು ಏನಾದರೂ ಬದಲಾವಣೆಯನ್ನು ನಿಮ್ಮವರಿಂದ ನಿರೀಕ್ಷಿಸುವಿರಿ. ಶರೀರಪೀಡಿಯು ಹೆಚ್ಚಾಗಲಿದ್ದು ಕಛೇರಿಗೆ ಹೋಗುವವರು ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ.
ಧನು ರಾಶಿ: ಯಾರಾದರೂ ತುರ್ತಾಗಿ ನಿಮ್ಮ ಬಳಿ ಸಾಲವನ್ನು ಕೇಳಿಬರಬಹುದು. ಅನುಕಂಪದಿಂದ ಕೊಡುವ ಯೋಚನೆಯನ್ನು ಮಾಡುವಿರಿ. ಆದರೆ ಅವರಿಂದ ಪಡೆಯಬೇಕಾದುದನ್ನು ಪಡೆಯಿರಿ. ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ಸ್ಪರ್ಧೆಯಲ್ಲಿ ಗೆಲುವಿಗಾಗಿ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಬಹುದು.
ಮಕರ ರಾಶಿ: ಎಲ್ಲವೂ ಸರಿ ಇದ್ದರೂ ಏನೂ ಇಲ್ಲವೆಂಬ ಕೊರಗು ಮನವನ್ನು ಚುಚ್ಚುವುದು. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸುವಿರಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು. ಯಾರೋ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬೆನ್ನನ್ನು ನೋಡಲಾಗದಿದ್ದರೂ ಕಲ್ಪಿಸಿಕೊಳ್ಳಬಹುದು.
ಕುಂಭ ರಾಶಿ: ನಿಮ್ಮ ಭಾವನೆಗೇ ಇಂದು ನೇರವಾಗಿ ಪೆಟ್ಟುಬೀಳುವ ಸಾಧ್ಯತೆ ಇದೆ. ಅದನ್ನು ಆ ಸಮಯದಲ್ಲಿ ನಿಭಾಯಿಸುವ ಜಾಣ್ಮೆ ಇರಲಿ. ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಹೇಳಬೇಕಾದ ವಿಚಾರವನ್ನು ನೀವು ಸರಿಯಾಗಿ ಹೇಳಿ. ಬೇರೆಯವರನ್ನು ಗೊಂದಲಕ್ಕೆ ನೀವು ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿ ಮಗ್ನತೆಯು ಎಲ್ಲರಿಗೂ ಇಷ್ಟವಾಗುವುದು. ನೀವು ಹೋದಕಡೆ ನಿಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ.
ಮೀನ ರಾಶಿ: ಇಂದು ನಿಮ್ಮ ಕಾರ್ಯದ ಒತ್ತಡದಿಂದ ಬೇರೆ ಏನನ್ನೂ ಆಲೋಚಿಸಲಾಗದು. ನೌಕರರ ಬಗ್ಗೆ ನಿಮಗೆ ಕಾಳಜಿ ಇರುವುದು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಉದ್ಯಮಿಗಳು ಇಂದು ನಿಮ್ಮನ್ನು ಭೇಟಿಯಾಗಬಹುದು. ಭೂಮಿಯ ಖರೀದಿಗೆ ಸೂಕ್ತ ಸಮಯವು ಇದಾಗಿದೆ. ಸಂಗಾತಿಯ ವಿಚಾರಕ್ಕೆ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ.