Fri. Apr 11th, 2025

Emraan Hashmi‌ & Mallika Sherawat: ಮಲ್ಲಿಕಾ ಶೆರಾವತ್‌ ಅತೀ “ಕೆಟ್ಟ ಕಿಸ್ಸರ್‌” ಎಂದ ಇಮ್ರಾನ್ ಹಶ್ಮಿ!!! – ಮಲ್ಲಿಕಾ ಹೇಳಿದ್ದೇನು ಗೊತ್ತಾ??!

Emraan Hashmi‌ & Mallika Sherawat: (ಅ.24) ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್ ‘ಮರ್ಡರ್’ ಸಿನಿಮಾದಲ್ಲಿ ನಟಿಸಿ, ರಾತ್ರೋ ರಾತ್ರಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಈ ಚಿತ್ರ ಬಂದಿದ್ದು 2004ರಲ್ಲಿ.

ಇದನ್ನೂ ಓದಿ: 👩🏻‍🎓ಉಜಿರೆ: ಅ. 26ರಂದು ಉಜಿರೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

ಅಂದಿನ ಕಾಲಕ್ಕೆ ಮಡಿವಂತಿಕೆ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದರು. ಆಗಿನ ಕಾಲದಲ್ಲೂ ಜನರು ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದು ಈ ಸಿನಿಮಾ. ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎನ್ನುವ ಖ್ಯಾತಿ ಕೊಟ್ಟಿದ್ದು ಇದೇ ಚಿತ್ರ. ಆದರೆ ಈ ಸಿನಿಮಾ ಬಳಿಕ ಇಮ್ರಾನ್ ಹಾಗೂ ಮಲ್ಲಿಕಾ ಕಿತ್ತಾಡಿಕೊಂಡಿದ್ದರು.

ಇಮ್ರಾನ್ ಹಾಗೂ ಮಲ್ಲಿಕಾ ‘ಮರ್ಡರ್’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡರು. ಇವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆದರು. ಬಾಲಿವುಡ್‌ ನ ಟಾಪ್ ರೇಟೆಡ್ ಜೋಡಿ ಎನ್ನುವ ಖ್ಯಾತಿ ಇವರಿಗೆ ಸಿಕ್ಕಿತು. ಆದರೆ , ಇವರ ಮಧ್ಯೆ ಸಾಕಷ್ಟು ಕಿರಿಕ್ ಆಯಿತು. ಒಬ್ಬರ ಮೇಲೆ ಒಬ್ಬರು ಬೈದುಕೊಳ್ಳೋಕೆ ಆರಂಭಿಸಿದರು.

ಇದನ್ನೂ ಓದಿ: ⭕Bigg Boss: ಬಿಗ್ ಬಾಸ್ ಗೆ ವೈಲ್ಡ್‌‌ ಕಾರ್ಡ್‌ ಎಂಟ್ರಿ ಕೊಟ್ಟ ಸ್ಪರ್ಧಿ ವಿರುದ್ಧ FIR ದಾಖಲು !!?

ಇಮ್ರಾನ್ ಹಶ್ಮಿ ಅವರು ಮಲ್ಲಿಕಾ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಆ ಹೇಳಿಕೆ ಬಗ್ಗೆ ಅವರು ನಂತರ ಮರುಗಿದ್ದರು. “ಕಾಫಿ ವಿತ್ ಕರಣ್” ಶೋನಲ್ಲಿ ಇಮ್ರಾನ್ ಮಾತನಾಡಿದ್ದರು.

“ತೆರೆ ಮೇಲೆ ಮಾಡಿದ ಅತ್ಯುತ್ತಮ ಹಾಗೂ ಅತೀ ಕೆಟ್ಟ ಕಿಸ್ ಬಗ್ಗೆ ಹೇಳಿ” ಎಂದು ಇಮ್ರಾನ್ ಹಶ್ಮಿಗೆ ಕೇಳಲಾಯಿತು. ಈ ವೇಳೆ ಮಲ್ಲಿಕಾ ಶೆರಾವತ್‌ ಅತಿ ಕೆಟ್ಟ ಕಿಸ್ಸರ್ ಎಂದು ಹೇಳಿದರೆ, ಜಾಕ್ವೆಲಿನ್ ಉತ್ತಮ ಕಿಸ್ಸರ್ ಎಂದಿದ್ದರು.

ಇದನ್ನೂ ಓದಿ: 🟣ಗೋಲ್ಡನ್‌ ಸ್ಟಾರ್‌ ಪತ್ನಿ ಶಿಲ್ಪಾ ಗಣೇಶ್‌ ತುಳು ಚಿತ್ರರಂಗಕ್ಕೆ ಎಂಟ್ರಿ!!

ಮಲ್ಲಿಕಾ ಶೆರಾವತ್ ಬೆಡ್ರೂಂನಲ್ಲಿ ಏನು ಕಾಣುತ್ತದೆ ಎಂದು ಕೇಳಿದಾಗ ಇಮ್ರಾನ್ ನಕ್ಕಿದ್ದರು. “ಹಾಲಿವುಡ್‌ನಲ್ಲಿ ಯಶಸ್ವಿಯಾಗಲು ಈಡಿಯಟ್ಸ್ ಗೈಡ್” ಎಂದು ಉತ್ತರಿಸಿದ್ದರು. ಇದು ಮಲ್ಲಿಕಾ ಕೋಪಕ್ಕೆ ಕಾರಣ ಆಯಿತು.

ಇಬ್ಬರ ಮಧ್ಯೆ ಶೀತಲ ಸಮರಕ್ಕೆ ಇದು ಕಾರಣ ಆಯಿತು. “ನಾನು ಹಿಸ್ ಚಿತ್ರದಲ್ಲಿ ಹಾವಿಗೆ ಕಿಸ್ ಮಾಡಿದ್ದೆ. ಅದು ಇಮ್ರಾನ್ ಹಶ್ಮಿ ಜೊತೆ ಮಾಡಿದ ಕಿಸ್ಗಿಂತ ಉತ್ತಮವಾಗಿತ್ತು” ಎಂದು ನಕ್ಕಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು