ಉಜಿರೆ:(ಅ.24) ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ “Ignite Science Exhibition”ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಹೊಸ ಅನ್ವೇಷಣೆಗಳು ಮಕ್ಕಳಿಂದ ಮೂಡಿ ಬರಬೇಕು, ಮಕ್ಕಳು ಕಲಿಕೆ ಜೊತೆಗೆ ಅದ್ಭುತ ಪ್ರತಿಭೆಗಳನ್ನು ಪ್ರಸ್ತುತ ಪಡಿಸಬೇಕು ಎಂಬ ಕಾರಣಕ್ಕಾಗಿ ಈ ಎಕ್ಸಿಬಿಷನ್ ನಡೆಯಿತು.
ಇದನ್ನೂ ಓದಿ: ⭕ಬೆಂಗಳೂರು: ಬೆಂಗಳೂರಿನ ಬಾಬುಸಾ ಪಾಳ್ಯ ದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ
ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟನೆ ಮಾಡಿದರು. ಇಗ್ನೈಟ್ ಸೈನ್ಸ್ ಎಕ್ಸಿಬಿಷನ್ ವಿದ್ಯಾರ್ಥಿಗಳ ಹೊಸ ಆಲೋಚನೆಗೆ ಸ್ಪೂರ್ತಿ. ಅನುಗ್ರಹ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬೇರೆ ಬೇರೆ ವಿಜ್ಞಾನ ಮಾದರಿಗಳನ್ನು ತಯಾರು ಮಾಡಿದ್ದಾರೆ.
ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತಿನಂತೆ ವಿಜ್ಞಾನ ಯಾವತ್ತೂ ಸತ್ಯಾಸತ್ಯತೆಯನ್ನು ಪ್ರಚಾರಪಡಿಸುತ್ತದೆ. ಅದೇ ವಿಜ್ಞಾನದ ಮಾದರಿಯನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ಕುತೂಹಲದ ಜೊತೆಗೆ ಕಲಿಕೆಯನ್ನು ಮಾಡುತ್ತಿದ್ದಾರೆ ಎಂದು ಅತಿಥಿಯಾಗಿ ಆಗಮಿಸಿದ, ಜೊತೆಗೆ ಇಂದಿನ ಕಾರ್ಯಕ್ರಮದಲ್ಲಿ ಸನ್ಮಾನಿತರೂ ಆಗಿರುವಂತಹ ಆಸ್ಮಂಡ್ ಡಿಸೋಜ ಅವರು ತಿಳಿಸಿದರು.
ಚಿಕ್ಕ ಚಿಕ್ಕ ವಿಷಯಗಳಲ್ಲಿ ಇರುವ ಕುತೂಹಲ ಮತ್ತಷ್ಟು ಬೆಳೆದು ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದಾಗ ಹೊಸತನದ ಸೃಷ್ಟಿಯಾಗುತ್ತದೆ. ಆ ಪ್ರಯತ್ನವನ್ನು ಎಲ್ಲಾ ವಿದ್ಯಾರ್ಥಿಗಳು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ವಿಜಯ್ ಲೋಬೋ ತಿಳಿಸಿದರು.
ದೇವರು ಭೂಮಿಯನ್ನು ಸೃಷ್ಟಿ ಮಾಡುವಾಗ ನಮಗೆಲ್ಲರಿಗೂ ಅದ್ಭುತ ವನ್ನು ಸೃಷ್ಟಿಸುವ ಮಾರ್ಗವನ್ನು ತಿಳಿಸಿಕೊಟ್ಟಿರುತ್ತಾನೆ. ಆದರೆ ಅದನ್ನು ಹುಡುಕುವ ಪ್ರಯತ್ನವನ್ನು ನಾವು ಮಾಡಬೇಕು ಎಂದು ಕರೆಸ್ಪಾಡೆಂಟ್ ಆಗಿರುವ ರೆವರೆಂಡ್ ಫಾದರ್ ಅಬೆಲ್ ಲೋಬೋ ತಿಳಿಸಿದರು.
ಕಾರ್ಯಕ್ರಮವನ್ನು ಪ್ರಾರ್ಥನೆ ಮಾಡುವ ಮೂಲಕ ಅನುಗ್ರಹ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರಂಭಿಸಿದರು. ವೇದಿಕೆಯಲ್ಲಿ ಕರೆಸ್ಪಾಡೆಂಟ್ ರೆವರೆಂಡ್ ಫಾದರ್ ಅಬೆಲ್ ಲೋಬೋ , ಪ್ರಿನ್ಸಿಪಾಲ್ ರೆವರೆಂಡ್ ಫಾದರ್ ವಿಜಯ್ ಲೋಬೋ , ಡಾ. ಆಸ್ಮಂಡ್ ಡಿಸೋಜ,
ಚರ್ಚ್ ನ ಉಪಾಧ್ಯಕ್ಷರಾದ ಆ್ಯಂಟನಿ, ಸಿ ಆರ್ ಪಿ ಪ್ರತಿಮಾ ಉಜಿರೆ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಅನುಗ್ರಹ ಶಿಕ್ಷಣ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.