ಮೇಷ ರಾಶಿ: ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಸೋಲಾಗಬಹುದು. ಇಂದು ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದುಬಿಡುವುದು. ಶತ್ರುಗಳ ಬಗ್ಗೆ ನೀವು ಸರಿಯಾದ ಮಾಹಿತಿಯನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಗಳು ನಿಮ್ಮ ಮನಸ್ಸನ್ನು ಖಿನ್ನಗೊಳಿಸುವುದು. ಬಂಧುಗಳ ಪ್ರೀತಿಯು ನಿಮಗೆ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ಸಂಗಾತಿಯ ಆರೋಗ್ಯದ ಹದವು ತಪ್ಪುವುದು.
ವೃಷಭ ರಾಶಿ: ಇಂದು ಬರುವ ಅಪರೂಪದ ಸಂದರ್ಭವನ್ನು ಬಳಸಿದರೆ ಉತ್ತಮ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ.ಯಾರ ಮೇಲಾದರೂ ನಿಮ್ಮ ತಪ್ಪನ್ನು ಹಾಕುವಿರಿ. ಬರುವ ಆದಾಯಕ್ಕೆ ಅಡೆತಡೆಗಳು ಬರಬಹುದು. ಸ್ನೇಹವು ಶಿಥಿಲವಾಗುವುದು. ನಿಮಗೆ ಬೇಕಾದುದನ್ನು ಮಾತ್ರ ಇಟ್ಟುಕೊಂಡು ಬೇಡದ್ದನ್ನು ಕೊಡಿ. ಬಹಳ ದಿನಗಳಿಂದ ನಿಮ್ಮ ಕೆಲಸವು ವೇಗವಾಗಿ ಸಾಗುತ್ತಿದ್ದು ಅನಿರೀಕ್ಷತವಾಗಿ ಮಂದಗತಿಯಲ್ಲಿ ಸಾಗುವುದು.
ಮಿಥುನ ರಾಶಿ: ಭರವಸೆಯ ಮಾತುಗಳೇ ನಿಮಗೆ ಧೈರ್ಯವನ್ನು ಕೊಡಬಹುದು. ಉದ್ಯೋಗದಲ್ಲಿ ಆಗದ ಸಣ್ಣ ತಪ್ಪಿನಿಂದ ನಷ್ಟವಾಗಲಿದ್ದು ಅದು ನಿಮ್ಮ ಮೇಲೆ ಬರಬಹುದು. ಭೂಮಿಯ ವ್ಯವಹಾರದಲ್ಲಿ ಲಾಭವಾಗದೇ ಕೇವಲ ಓಡಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಹೆದರಿಕೆ ಆಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮವನ್ನು ತೆಗೆದುಕೊಳ್ಳುವಿರಿ. ಪ್ರಸಿದ್ಧ ವ್ಯಕ್ತಿಗಳ ಭೇಟಿಯಾಗುವುದು. ಸರಿಯಾದ ಕಡೆ ಹೂಡಿಕೆ ಮಾಡದೇ ಹಣವನ್ನು ಕಳೆದುಕೊಳ್ಳಬಹುದು.
ಕರ್ಕಾಟಕ ರಾಶಿ: ದುರಸ್ತಿ ಕಾರ್ಯಗಳಿಗೆ ಸಂಪತ್ತನ್ನು ಖಾಲಿಮಾಡಬೇಕಾಗಬಹುದು. ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಹಠದ ಸ್ವಭಾವದಿಂದ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಇಂದು ವ್ಯವಹಾರವನ್ನು ಮಾಡಲು ನಿಮಗೆ ಧೈರ್ಯವು ಸಾಕಾಗದು. ವಾಹನದಿಂದ ಇಂದು ಆದಾಯವು ಬರಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ. ನಿಮ್ಮ ಇಷ್ಟವಾದ ವಸ್ತುವನ್ನು ಕಳೆದುಕೊಳ್ಳುವಿರಿ.
ಸಿಂಹ ರಾಶಿ; ಅಧಿಕಾರಿಗಳಿಗೆ ಸಮಸ್ಯೆ ಎದುರಾಗುವುದು. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಗೃಹ ಬಳಕೆಗೆ ಬೇಕಾದ ಸಾಮಾನುಗಳನ್ನು ನೀವು ಖರೀದಿಸುವ ಭರದಲ್ಲಿ ಖರ್ಚಿನ ಬಗ್ಗೆಯೂ ಸೂಕ್ತ ಆಲೋಚನೆಯನ್ನು ಮಾಡಿ. ಶತ್ರುಗಳ ವಿರುದ್ಧ ಸಮರಸಾರದೇ ತಾಳ್ಮೆಯಿಂದ ನಿರ್ವಹಿಸುವಿರಿ. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವು ಚೆನ್ನಾಗಿರುವುದು. ನಿಮ್ಮ ಗುರಿಯ ಬಗ್ಗೆ ಕೆಲವರು ಆಡಿಕೊಂಡಾರು. ಅದನ್ನು ಕೇಳಿಸಿಕೊಳ್ಳದೇ ಮುಂದಡಿ ಇಡಿ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಕಾರ್ಯದಲ್ಲಿ ಇಂದು ನಿಮ್ಮಿಂದಲೇ ತಪ್ಪಾಗುವುದು. ಇದರಿಂದ ಉತ್ತಮ ಕಲಿಕೆಯೂ ನಿಮಗೇ ಆಗುವುದು. ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಉದ್ಯಮದಲ್ಲಿ ಆಗುವ ಒತ್ತಡವನ್ನು ನಿವಾರಿಸಿಕೊಳ್ಳಲು ಅನ್ಯ ಮಾರ್ಗವನ್ನು ಕಂಡುಕೊಳ್ಳಿ. ಮರೆವು ನಿಮಗೆ ಉತ್ತಮ ಎನಿಸಬಹುದು. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ನಿಲ್ಲದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉತ್ಸಾಹವನ್ನು ಕೊಡುವುದು.
ತುಲಾ ರಾಶಿ; ಮಾನಸಿಕವಾದ ನೋವನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುವಿರಿ. ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯ ಕೊರತೆಯು ಕಾಣುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಹೆಚ್ಚುಕೊಡಬೇಕಾದೀತು. ಪ್ರಯೋಜನವಿಲ್ಲದೆ ಯಾವ ಕಾರ್ಯವನ್ನೂ ಮಾಡಲು ಇಷ್ಟಪಡುವುದಿಲ್ಲ. ಜನರ ಜೊತೆ ಬೆರೆಯುವುದು ಕಷ್ಟವಾದೀತು.
ವೃಶ್ಚಿಕ ರಾಶಿ: ನಿಮ್ಮ ಸ್ಥಗಿತಗೊಂಡ ಕಾರ್ಯಗಳಿಗೆ ಅನ್ಯರಿಂದ ಪ್ರೇರಣೆ ಸಿಗುವುದು. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಇಂದಿನ ದೀರ್ಘ ಪ್ರಯಾಣವು ಹಲವು ತೊಡಕುಗಳಿಂದ ಇರಬಹುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಸಂಗಾತಿಯ ಮಾತಿಗೆ ನಿಮ್ಮ ಪ್ರತಿಕ್ರಿಯೆಯು ಇಲ್ಲದಿರುವುದು ಬೇಸರವನ್ನು ತರಿಸಬಹುದು. ಮಹಿಳಾ ಉದ್ಯೋಗಿಗಳಿಗೆ ಭಡ್ತಿ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆಹಾರದಲ್ಲಿ ನಿಯಮಿತಿ ಇರಲಿ. ಪಿತ್ತಸಂಬಂಧಿ ರೋಗವು ಕಾಣಿಸಿಕೊಳ್ಳಬಹುದು.
ಧನು ರಾಶಿ; ಒಳ್ಳೆಯ ಸುದ್ದಿಯನ್ನು ನಾಲ್ಕು ಜನರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಮಾತು ಯಾರನ್ನಾದರೂ ಘಾಸಿ ಮಾಡೀತು. ಜಲಮೂಲದ ವ್ಯಾಪಾರದಿಂದ ಲಾಭವನ್ನು ಕಾಣಬಹುದು. ಆದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಮನೆಯ ನಿರ್ಮಾಣದಲ್ಲಿ ಹಿನ್ನಡೆಯಾಗುವುದು. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ.
ಮಕರ ರಾಶಿ; ನಿಮ್ಮ ವೈಯಕ್ತಿಕ ತೊಂದರೆಯನ್ನು ಎಲ್ಲಿಯೂ ಹೇಳಿಕೊಳ್ಳುವ ಮನಸ್ಸಾಗದು. ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ಇಂದು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ನೀವು ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದ ಕೆಲಸಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರವು ಲಾಭದಾಯಕವಲ್ಲದಿದ್ದರೂ ಅದನ್ನೇ ನಡೆಸಲು ಬಯಸುವಿರಿ.
ಕುಂಭ ರಾಶಿ: ಕೆಲವು ಕ್ಷಣಗಳನ್ನು ನೀವು ಕಳೆದುಕೊಳ್ಳುವ ಬೇಸರವಿರುವುದು. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ವಿಪರೀತ ಓಡಾಟದಿಂದ ನಿಮಗೆ ದಣಿವಾಗಲಿದೆ. ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹವು ಸಿಗಲಿದೆ. ಮುಖವಾಡವನ್ನು ಹಾಕಿಕೊಂಡು ವರ್ತಿಸುವ ಜನರ ಜೊತೆ ಮೈಯೆಲ್ಲ ಕಣ್ಣಾಗಿ ಇರಬೇಕಾಗುವುದು. ಅಪರಿಚಿತರ ಸಹವಾಸವನ್ನು ಮಾಡುವಿರಿ. ಓಡಾಡುವಾಗ ಎಚ್ಚರ ಇರಲಿ.
ಮೀನ ರಾಶಿ: ನೆಮ್ಮದಿ ಬೇಕಾದರೆ ಕೆಲವನ್ನು ಬಿಡುವುದು ಅನಿವಾರ್ಯವಾಗಬಹುದು. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಬೇಕೆಂದೇ ನಿಮ್ಮ ಮೇಲೆ ಯಾರಾದರೂ ಎರಗಿ ಬರಬಹುದು.