ಉಜಿರೆ (ಅ: 25): ಕರಾವಳಿಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ವೇಳೆ ಭಾರೀ ಮಳೆ ಸುರಿದಿದ್ದು ಹಲವು ಕಡೆಗಳಲ್ಲಿ ಅಪಾರ ಹಾನಿ ಉಂಟಾಗಿದೆ.ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿಯೂ ಭಾರೀ ಪ್ರಮಾಣದ ಮಳೆ ಸುರಿದಿದ್ದು ಇಲ್ಲಿನ ಪೆರ್ಲ ನಿವಾಸಿಯಾಗಿರುವ ದರ್ಖಾಸು ಮನೆ ನಿವಾಸಿ ಹೇಮಾವತಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಅಪಾರ ಹಾನಿಯಾಗಿತ್ತು.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಉಜಿರೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾಕಿರಣ್ , ಸ್ಥಳೀಯ ಸದಸ್ಯರಾದ ಶ್ರೀಮತಿ ಲಲಿತಾ, ಮೋಹಿನಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಈ ನಿಟ್ಟಿನಲ್ಲಿ ಇಂದು ಸಂತ್ರಸ್ಥೆ ಹೇಮಾವತಿ ಅವರನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಉಷಾಕಿರಣ್ ಅವರು ಪಂಚಾಯತ್ ಗೆ ಕರೆಸಿಕೊಂಡು ಸದಸ್ಯರು ಸೇರಿದಂತೆ ಇನ್ನಿತರ ಪ್ರಮುಖರ ಸಮ್ಮುಖದಲ್ಲಿ ತುರ್ತು ಪರಿಹಾರವಾಗಿ 10 ಸಾವಿರ ರೂಪಾಯಿಗಳನ್ನು ವಿತರಿಸಿದರು. ಈ ಸಂದರ್ಭ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು.