ಬೆಳ್ತಂಗಡಿ:(ಅ.26) ಸಾಮಾಜಿಕ ಜಾಲತಾಣದಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಕೆ ಮಾಡುವ ನೆಪದಲ್ಲಿ ಹಿಂದುಳಿದ ವರ್ಗದ ಹಿಂದೂ ಸಮುದಾಯದ ಮಹಿಳೆಯರನ್ನು ಅಸಹ್ಯವಾಗಿ ಅವಹೇಳನಕಾರಿಯಾಗಿ ಹೀಯಾಳಿಸಿದ ಅರಣ್ಯಾಧಿಕಾರಿ ಸಂಜೀವ್ ಪೂಜಾರಿ ಕಾಣಿಯೂರು ರವರ ವರ್ತನೆ ಖಂಡನೀಯವೆಂದು ಬೆಳ್ತಂಗಡಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಧೀರ್ ಆರ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರಕಾರದ ಅರಣ್ಯ ಇಲಾಖೆಯಲ್ಲಿ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಜೀವ್ ಪೂಜಾರಿ ಅವರ ಈ ಹೇಳಿಕೆ ಗಮನಿಸಿದಾಗ ಅವರ ಮನಸ್ಥಿತಿಯೂ ಅವರ ವೃತ್ತಿ ಜೀವನದ ಪಾವಿತ್ರತೆಯನ್ನು ಉಲ್ಲಂಘಿಸಿ ಅವರ ಸೇವಾ ಅವಧಿ ಆ ರೀತಿಯಯಾಗುತ್ತೆಎಂಬುದನ್ನು ಸೂಚಿಸುತ್ತದೆ.
ಸಮಾಜದಲ್ಲಿ ಹೆಣ್ಣನ್ನು ದೇವತೆಯಾಗಿ ಗೌರವಿಸಿ ಪೂಜಿಸುವ ಸಂಸ್ಕೃತಿ ನಮ್ಮದು. ನವರಾತ್ರಿ ಶುಭ ಗಳಿಗೆಯಲ್ಲಿ ಸಂಜೀವ ಪೂಜಾರಿಯವರ ಬಾಯಲ್ಲಿ ಇಂತಹ ಅಸಹ್ಯ ನುಡಿಮುತ್ತುಗಳು ಉದುರಬಾರದಿತ್ತು.
ಅವರು ಇಡೀ ಹಿಂದೂ ಸಮಾಜಕ್ಕೆ ಸಾರ್ವತ್ರಿಕ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಚುನಾವಣೆಯ ಸಂದರ್ಭದಲ್ಲಿ ಕ್ಷುಲ್ಲಕ ಜಾತಿ ರಾಜಕಾರಣ ಮಾಡುವ ಜಾತಿ ಸಂಘಗಳು ಇಂತಹ ಗಂಭೀರ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ತೀವ್ರ ಬೇಸರದ ಸಂಗತಿ ಎಂದು ಹೇಳಿದ್ದಾರೆ.