Wed. Nov 20th, 2024

Belthangadi: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಬೇನಾಮಿ ಟ್ರಸ್ಟ್ ಗೆ ಅಕ್ರಮ ವರ್ಗಾವಣೆ – ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾದ ವಿವಾದ – ಮರು ಹಸ್ತಾಂತರಕ್ಕೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಧರಣಿಗೆ ನಿರ್ಧಾರ

ಬೆಳ್ತಂಗಡಿ :(ಅ.27) ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಸೌತಡ್ಕ ಕ್ಷೇತ್ರದ ಭಕ್ತಾದಿಗಳಿಂದ , ದಾನಿಗಳಿಂದ, ಹಿತೈಷಿಗಳಿಂದ ಸಂಗ್ರಹಿಸಲ್ಪಟ್ಟ ಹಣದಲ್ಲಿ ಖರೀದಿಸಲಾಗಿದ್ದ, ಸ್ಥಿರಾಸ್ತಿಗಳನ್ನು ಮಹಾಗಣಪತಿ ಸೇವಾ ಟ್ರಸ್ಟ್ ಎಂಬ ಬೇನಾಮಿ ಟ್ರಸ್ಟ್ ಗೆ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಹೆಸರಿಗೆ ಅಕ್ರಮವಾಗಿ ವರ್ಗಾವಣೆಗೊಳಿಸಿದ ವಿವಾದವು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿದೆ.

ಇದನ್ನೂ ಓದಿ: 🟣ಬಂದಾರು : ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕುರಿತು ಪೂರ್ವಭಾವಿ ಸಭೆ

ಕೊಕ್ಕಡ ಸೌತಡ್ಕ ದೇವಳದ ಭಕ್ತಾದಿಗಳು ಇದೀಗ ಪಕ್ಷ ಬೇಧ ಮರೆತು ದೇವಸ್ಥಾನದ ಸ್ಥಿರಾಸ್ತಿ ರಕ್ಷಣೆಗಾಗಿ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಈ ಬಗ್ಗೆ ಕೊಕ್ಕಡದ ಅಪೇಕ್ಷಾ ಸಭಾ ಭವನದಲ್ಲಿ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಕೊಕ್ಕಡ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ ಶಬರಾಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಳದ ಭಕ್ತಾಧಿಗಳು ಈ ಬಗ್ಗೆ “ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ, ಕೊಕ್ಕಡ” ಎಂಬ ಹೆಸರಿನಲ್ಲಿ ವೇದಿಕೆ ರಚಿಸಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ವೇದಿಕೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ, ಉಪಾಧ್ಯಕ್ಷರುಗಳಾಗಿ ಶ್ರೀಕೃಷ್ಣ ಭಟ್ ಕುಡ್ತಲಾಜೆ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ ಶೆಟ್ಟಿ ನೆಲ್ಯಾಡಿ, ತುಕ್ರಪ್ಪ ಶೆಟ್ಟಿ, ನೂಜಿ, ಮೋಹನ ರೈ ಕುಂಟಾಲಪಲ್ಕೆ, ಕಾರ್ಯದರ್ಶಿಯಾಗಿ ಶ್ಯಾಮರಾಜ್ ಪಟ್ರಮೆ,
ಜೊತೆ ಕಾರ್ಯದರ್ಶಿಗಳಾಗಿ ಸುನೀಶ್ ನಾಯ್ಕ್, ಗಣೇಶ್ , ಕಾಶಿ, ಹರಿಶ್ಚಂದ್ರ ಜೋಡುಮಾರ್ಗ, ದಯಾನೀಶ್ ಕೊಕ್ಕಡ, ಖಜಾಂಚಿ ಯಾಗಿ ವಿಶ್ವನಾಥ ಕೊಲ್ಲಾಜೆ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರುಗಳಾಗಿ ಲಕ್ಷ್ಮೀ ನಾರಾಯಣ ಉಪಾರ್ಣ, ಗೋಪಾಲಕೃಷ್ಣ ಭಟ್ ಮುನ್ನಡ್ಕ, ಎ. ಎನ್. ಶಬರಾಯ, ಪದ್ಮನಾಭ ಆಚಾರ್ಯ, ಚರಣ್ ಕೊಕ್ಕಡ, ಗಣೇಶ್ ಪಿ ಕೆ, ಧನಂಜಯ ಪಟ್ರಮೆ, ಕೃಷ್ಣಪ್ಪ ಗೌಡ ಪೂವಾಜೆ, ಧರ್ಮರಾಜ್ ಅಡ್ಕಡಿ, ಜಯಂತ ಗೌಡ ಮಾಸ್ತಿಕಲ್ಲು, ಜಾರಪ್ಪ ಗೌಡ, ಸಂಕೇಶ, ಲಕ್ಷ್ಮೀನಾರಾಯಣ, ವಿಶ್ವನಾಥ ಮೀಯಾಳ, ಗಣೇಶ ಪೂಜಾರಿ, ಶೀನ ನಾಯ್ಕ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಬಿ.ಎಂ. ಭಟ್, ಪ್ರಶಾಂತ್, ವೆಂಕಟ್ರಮಣ ಡೆಂಜ ಇವರನ್ನು ಆಯ್ಕೆ ಮಾಡಲಾಯಿತು.

ಶ್ರೀ ಕ್ಷೇತ್ರದ ಜಮೀನು ಉಳಿಸಿಕೊಳ್ಳುವ ಸಲುವಾಗಿ ಸದ್ರಿ ವೇದಿಕೆ ಮೂಲಕ ಸರಕಾರವನ್ನು ಸಂಪರ್ಕಿಸುವುದು, ಧರಣಿ, ಕಾನೂನು ಹೋರಾಟ, ಆಂದೋಲನಗಳನ್ನು ಕೈಗೊಳ್ಳುವ ತೀರ್ಮಾನಿಸಲಾಯಿತು.

ಇದೇ ನವೆಂಬರ್ 5 ರಂದು ಮಂಗಳೂರಿನಲ್ಲಿ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.
ನವೆಂಬರ್ 11ನೇ ಸೋಮವಾರದಿಂದ ಸೌತಡ್ಕದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಣಯಿಸಲಾಯಿತು.

Leave a Reply

Your email address will not be published. Required fields are marked *