ಮೇಷ ರಾಶಿ: ನಿಮ್ಮ ವಸ್ತುವಿನ ಕಳ್ಳತನವಾಗಲಿದೆ. ಇಂದು ದೈವಭಕ್ತಿಗೆ ನಿಮಗೆ ಅನುಕೂಲಕರ ವಾತಾವರಣವು ಸಿಗಲಿದೆ. ಮನಃಕ್ಲೇಶವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗುವುದು. ಕಳ್ಳತನದ ಭೀತಿಯು ಇರಬಹುದು. ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡುವುದಿಲ್ಲ. ಸೇವಾಮನೋಭಾವದ ಕಾರ್ಯಕ್ಕೆ ತೃಪ್ತಿ ಇರುವುದು. ಇದರಿಂದ ಸ್ವಲ್ಪ ನಷ್ಟವೂ ಆದೀತು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಅಶುಭವಾರ್ತೆಯು ಬರಬಹುದು.
ವೃಷಭ ರಾಶಿ: ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಭಾವ ಬರಬಹುದು. ಇಂದು ದುರಭ್ಯಾಸದಿಂದ ಸಿಗುವ ಉನ್ನತ ಸ್ಥಾನವು ತಪ್ಪಬಹುದು. ಸುಲಭವಾಗಿ ಸಿಗುವ ಸಂಪತ್ತು ನಿಮಗೆ ಧಕ್ಕದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದು. ನಿಮ್ಮ ನೆಚ್ಚಿನ ವ್ಯಕ್ತಿಗಳನ್ನು ಆಕಸ್ಮಾತ್ತಾಗಿ ಭೇಟಿಯಾಗುವಿರಿ. ಭೂ ವ್ಯವಹಾರಕ್ಕೆ ರಾಜಕೀಯದ ನಂಟು ಬರುವುದು.
ಮಿಥುನ ರಾಶಿ: ನಿಮ್ಮ ಬಳಿ ಮಾತನಾಡಲು ಇಷ್ಟಪಡದೇ ಇರಬಹುದು. ನಿಮ್ಮ ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ಎಷ್ಟೇ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಿಂದ ಕೂಡಿರಬಹುದು. ಸಾಮಾಜಿಕ ಕಾರ್ಯಗಳತ್ತ ಮನಸ್ಸು ಮಾಡುವಿರಿ. ಉದ್ಯಮದ ವಿಸ್ತಾರಕ್ಕೆ ಪಾಲುದಾರರಿಂದ ಸಹಕಾರ ಸಿಗದು. ಸಹೋದ್ಯೋಗಿಗಳು ಕಿರಿಕಿರಿಯನ್ನು ನೀಡಬಹುದು.
ಕರ್ಕಾಟಕ ರಾಶಿ: ಇಂದು ನೀವು ಶತ್ರುಗಳನ್ನು ತಂತ್ರದಿಂದ ಸೋಲಿಸಬಹುದು. ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸುವಿರಿ. ಗೆಲುವಿಗೆ ಬಹಳ ಪ್ರಯತ್ನಪಡುವಿರಿ. ವ್ಯಕ್ತಿಗಳನ್ನು ನೋಡಿ ನಿಮ್ಮ ಮಾತು ಇರಲಿ. ನಿಮ್ಮ ಸಾಧನೆಗೆ ಗೌರವವು ಸಿಗಬಹುದು. ನಿಮ್ಮ ಸ್ಥಾನದ ಬಗ್ಗೆ ನಿಮಗೆ ಭಯವಿರುವುದು. ಹಳೆಯ ಪ್ರೇಯಸಿಯಿಂದ ಪೀಡಿತರಾಗಬಹುದು.
ಸಿಂಹ ರಾಶಿ: ಮಹಿಳೆಯರಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಕರೆಬರುವುದು. ಎಲ್ಲರಿಂದ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಕ್ಕರೂ ನಿಮಗೆ ಕಾರ್ಯದಲ್ಲಿ ಸಮಾಧಾನ ಸಿಗದು. ಬಂದ ಹಣವು ಸಾಲವನ್ನು ತೀರಿಸಲಿಕ್ಕೇ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಪರೀಕ್ಷೆಯ ಫಲಿತಾಂಶದಿಂದ ನಿಮಗೆ ಸಂತೋಷವಾಗಲಿದೆ. ವ್ಯರ್ಥ ಎಂದುಕೊಂಡ ವಿದ್ಯೆಯು ಇಂದು ಪ್ರಯೋಜನಕ್ಕೆ ಬರಲಿದೆ.
ಕನ್ಯಾ ರಾಶಿ: ನೀವು ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆ ಬಿಟ್ಟು ಬೇರೆಯವರ ಮಾತನ್ನೂ ಕೇಳಿ. ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಸಮಾಧಾನಚಿತ್ತವು ನಿಮಗೆ ಅನೇಕ ಸುಂದರ ಸಮಯವನ್ನು ಅನುಭವಿಸುವಿರಿ. ಮಕ್ಕಳಿಗೆ ಏನನ್ನೂ ಕೊಡಬಾರದು ಎಂಬ ನಿಶ್ಚಯ ಮಾಡುವಿರಿ. ಭೂಮಿಯ ವ್ಯವಹಾರದಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ಮನೆಯ ವಾತಾವರಣವು ನಿಮಗೆ ಹಿತವೆನಿಸುವುದು. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸಾಗುವುದು. ಮಾನಸಿಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಅನ್ಯ ಮಾರ್ಗವನ್ನು ಆಶ್ರಯಿಸಿವಿರಿ. ಸ್ವಾಭಿಮಾನವು ನಿಮ್ಮ ಪ್ರತಿಷ್ಠೆಯಾಗಲಿದೆ.
ತುಲಾ ರಾಶಿ: ಸ್ನೇಹಿತರಿಂದ ಸಾಲಕ್ಕೆ ಬೇಡಿಕೆ ಬರಬಹುದು. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಿರಿ. ಸಂಗಾತಿಯ ಮಾತಿಗೆ ಮರುಳಾಗುವ ಸಾಧ್ಯತೆ ಹೆಚ್ಚು. ಮಾನಸಿಕ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳಿ. ಸಣ್ಣ ವಿಚಾರವೂ ದೊಡ್ಡದಾಗಬಹುದು. ಕ್ರೀಡೆಯಲ್ಲಿ ನೀವು ಭಾಗವಹಿಸುವಿರಿ. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ನಿಮ್ಮಸಾಮಾಜಿಕ ಕೆಲಸದಿಂದ ಸಾಧಿಸಿ ಪ್ರಶಂಸೆಯನ್ನು ಗಳಿಸುವಿರಿ.
ವೃಶ್ಚಿಕ ರಾಶಿ: ಮಕ್ಕಳಿಂದ ನಿಮಗೆ ಶುಭ ವಾರ್ತೆ ಇರುವುದು. ಇಂದು ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಕೃಷಿಯಲ್ಲಿ ನೀವು ಬಹಳ ಆಯ್ಕೆ ಸ್ವಭಾವವುಳ್ಳವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಸದಾ ಯಾವುದೋ ಆಲೋಚನೆಯಲ್ಲಿ ಇರುವಿರಿ. ಹುಂಬುತನದಿಂದ ಮುನ್ನುಗ್ಗುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕಾದೀತು. ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಹೆದರಿಸಬಹುದು. ಅಶುಭವಾರ್ತೆಯು ಬರಬಹುದು.
ಧನು ರಾಶಿ: ಸ್ವಂತ ಉದ್ಯಮವು ಹೆಚ್ಚು ಸಮಯವನ್ನು ಕೇಳುವುದು. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗೆ ನೀವು ಮಾನಸಿಕವಾಗಿ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ನಿಮಗೆ ಧೈರ್ಯವು ಕಡಿಮೆ ಇರುವುದು. ಏನಾದರೂ ಒಂದು ಅಸಂಬದ್ಧವನ್ನು ಮಾಡುವರು ಎಂಬ ಹಣೆಪಟ್ಟಿ ಬೀಳಬಹುದು. ಮೋಸಗಾರಿಕೆಯಿಂದ ಆಟವನ್ನು ಗೆಲ್ಲುವಿರಿ.
ಮಕರ ರಾಶಿ: ನಿಮ್ಮ ಕೆಲಸವನ್ಮು ಯಾರಾದರೂ ಆಡಿಕೊಳ್ಳಬಹುದು. ನೀವು ಆಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ವಿದ್ಯಾರ್ಥಿಗಳು ಅನಗತ್ಯ ವ್ಯವಹಾರಗಳತ್ತ ಗಮನ ಹರಿಸುತ್ತಿದ್ದು ಪೋಷಕರು ಇದರ ಬಗ್ಗೆ ವಿಚಾರಿಸುವ ಅಗತ್ಯವೂ ಬರಬಹುದು. ಕೆಟ್ಟ ಆಹಾರವನ್ನು ಬಿಡುವುದು ಸೂಕ್ತ. ಕೆಲವರ ಮಾತುಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಆರ್ಥಿಕಸ್ಥಿತಿಯು ಏರದೇ ಇಳಿಯದೇ ಒಂದೇ ರೀತಿಯಲ್ಲಿ ಇರಲಿದೆ. ಪ್ರಾಮಾಣಿಕ ಪ್ರಯತ್ನವು ನಿಮ್ಮ ಕಾರ್ಯಸಾಧನೆಯ ಗುಟ್ಟಾಗಲಿದೆ.
ಕುಂಭ ರಾಶಿ: ಮಾರಾಟಗಾರರಿಗೆ ವಸ್ತುಗಳ ಲಭ್ಯತೆ ಕಷ್ಟವಾಗುವುದು. ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಸಂಕೀರ್ಣವಾದ ಕೆಲಸವನ್ನು ಸುಲಭ ಮಾಡಿಕೊಳ್ಳುವ ಕಲೆಯಿಂದ ಪ್ರಶಂಸೆಯು ಸಿಗಲಿದೆ. ಹಿರಿಯರ ಜೊತೆ ಮಾತಿನ ಚಕಮಕಿ ಆಗಬಹುದು. ಸರಿಯಾದ ಆಹಾರವನ್ನು ಸಕಾಲದಲ್ಲಿ ಸೇವಿಸಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಸ್ನೇಹಿತರ ಜೊತೆ ಬೇರೆ ಪ್ರದೇಶಗಳಿಗೆ ಹೋಗುವಿರಿ. ಇಂದು ನಿಮ್ಮ ವಿದ್ಯೆಯ ಪರೀಕ್ಷೆಯೂ ಆಗುವುದು.
ಮೀನ ರಾಶಿ: ಮನೆಯಲ್ಲಿ ಮಿತ್ರರ ಬಂಧುಗಳ ಸಮಾಗಮವಾಗಲಿದೆ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ನಿಮ್ಮ ಅಭಿಮಾನಕ್ಕೆ ಘಾಸಿಯಾಗುವ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲ ಮಾತುಗಳೂ ಇಂದು ನಿಮಗೆ ನಕಾರಾತ್ಮಕವಾಗಿಯೇ ಕೇಳಿಸುವುದು. ಅತಿಥಿ ಸತ್ಕಾರಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಇಂದು ಮಕ್ಕಳ ವಿವಾಹದ ಚಿಂತೆ ಕಾಡಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಇರಲಿದೆ. ಸಂಗಾತಿಯ ಪ್ರೀತಿಯು ಇಂದು ಲಭಿಸುವುದು.