Wed. Nov 20th, 2024

Mangalore: ಪೊಲೀಸ್ ಕಮಿಷನರ್ ನನ್ನು ಬಿಡದ ಸೈಬರ್‌ ಕ್ರಿಮಿಗಳು – ಸೈಬರ್​ ವಂಚಕರು ಮಾಡಿದ್ದೇನು ಗೊತ್ತಾ?! –

ಮಂಗಳೂರು (ಅ.26) : ಮಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮೆಸೆಂಜರ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ನಡೆದಿದ್ದು, ಈ ಕುರಿತಂತೆ ಮಂಗಳೂರು ಸೆನ್ ಠಾಣೆಯಲ್ಲಿ ಪೊಲೀಸ್ ಆಯುಕ್ತ ​​​​ ಅನುಪಮ್ ಅಗರ್ವಾಲ್ ಅವರು ವಂಚಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ⭕ಗೆಳೆಯನಿಗಾಗಿ ತನ್ನ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್!!

ಸೈಬರ್​ ವಂಚಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಹೆಸರಿನಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿದ್ದಾರೆ. ಬಳಿಕ ಕೆಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಳಿಕ ಮೆಸೆಂಜರ್ ಮೂಲಕ ಹಣ ಕೇಳಿದ್ದಾರೆ.

ಈ ವಿಚಾರ ತಿಳಿದ ಮಂಗಳೂರು ಪೊಲೀಸ್ ಆಯುಕ್ತ ​​​​ ಅನುಪಮ್ ಅಗರ್ವಾಲ್ ಅವರು ವಂಚಕರ ವಿರುದ್ಧ ಮಂಗಳೂರು ಸೆನ್​ ​ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ “ತಮ್ಮ ಹೆಸರಲ್ಲಿ ಬರುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *