ಪಣಕಜೆ :(ಅ.26) ವೆನಿಲಾ ಕೃಷಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದು ಸುದೀರ್ಘ ವರ್ಷ ಕೃಷಿಯಲ್ಲೇ ಖುಷಿ ಕಂಡುಕೊಂಡಿದ್ದ ಪಣಕಜೆ ಮಜಲು ಮನೆ ನಿವಾಸಿ
ಇದನ್ನೂ ಓದಿ: ⭕ಮಂಗಳೂರು : “ನನ್ನ ಜೊತೆ ಸಹಕರಿಸು ಇಲ್ಲದಿದ್ದರೆ 24 ಪೀಸ್ ಗಳನ್ನಾಗಿ ಮಾಡುತ್ತೇನೆ”
ಅಬ್ದುಲ್ಲಾ (69) ಅವರು ಅಲ್ಪ ಕಾಲದ ಅಸೌಖ್ಯದಿಂದ ಮದ್ದಡ್ಕದ ಅವರ ಮಗ ಅಬ್ದುಲ್ ಲೆತೀಫ್ ಅವರ ನಿವಾಸದಲ್ಲಿ ಶುಕ್ರವಾರ (ಅಕ್ಟೋಬರ್25 ) ನಿಧನರಾಗಿದ್ದಾರೆ.
ಉಡುಪಿಯಲ್ಲಿ ಅವರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಇತ್ತ ಮನೆಯಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಕರ್ನಾಟಕ ಮುಸ್ಲಿಂ ಜಮಾಅತ್ ಈಸ್ಟ್ ಜಿಲ್ಲಾ ಸಮಿತಿ ಸದಸ್ಯರಾಗಿದ್ದರು.
ಯು.ಕೆ ಮುಹಮ್ಮದ್ ಹನೀಫ್ ಅವರ ಚಿಕ್ಕಪ್ಪ. ಮೃತರು ಪತ್ನಿ ನೆಬಿಸ, ನಾಲ್ವರು ಗಂಡು ಮಕ್ಕಳಾದ ರಫೀಕ್, ಹನೀಫ್, ಅಬ್ದುಲ್ ಲೆತೀಫ್ ಮತ್ತು ಹಂಝ, ಏಕೈಕ ಪುತ್ರಿ ಮೈಮುನಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.