Fri. Apr 11th, 2025

Udupi: ಇಟ್ಟುಕೊಂಡವನಿಗೋಸ್ಕರ ಕಟ್ಟುಕೊಂಡವನಿಗೆ ಸ್ಲೋ ಪಾಯಿಸನ್‌ ಕೊಟ್ಟು ಕೊಂದ ವಿಷಕನ್ಯೆ – ಮಾಯಾಂಗನೆಯ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌!!!

ಉಡುಪಿ:(ಅ.26) ಅಜೆಕಾರಿನಲ್ಲಿ ನಡೆದ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 🐍ಪುತ್ತೂರು: ವಿದ್ಯಾರ್ಥಿಗಳು ಕ್ಲಾಸ್ ರೂಂ ನಲ್ಲಿ ಇರುವಾಗಲೇ ಎಂಟ್ರಿ ಕೊಟ್ಟ ನಾಗರಹಾವಿನ ಮರಿ!

ಮೃತ ಬಾಲಕೃಷ್ಣ ಕೊಲೆ ಕುರಿತಂತೆ ಆರೋಪಿಗಳಾದ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯತಮ ದಿಲೀಪ್‌ ಹೆಗ್ಡೆ ಅವರು ಸೇರಿ ಕೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿಮಾ ಹಾಗೂ ದಿಲೀಪ್‌ ಹೆಗ್ಡೆ ಬಾಲಕೃಷ್ಣ ಅವರನ್ನು ಸಾಯಿಸಲೇಬೇಕೆಂದು ಸಂಚು ಮಾಡಿದ್ದರು. ಹೀಗಾಗಿ ಪ್ರತಿಮಾ ಪ್ರತಿ ದಿನ ಬಾಲಕೃಷ್ಣ ಅವರ ಊಟದಲ್ಲಿ ವಿಷ ಪದಾರ್ಥ ಮಿಶ್ರಣ ಮಾಡುತ್ತಿದ್ದರು ಎನ್ನಲಾಗಿದೆ.

ಇದರಿಂದಾಗಿ ಬಾಲಕೃಷ್ಣ ಅವರು ತೀರಾ ಅಸ್ವಸ್ಥರಾಗುತ್ತಿದ್ದರು. ಹಾಗೂ ಇವರು ವಿವಿಧ ಆಸ್ಪತ್ರೆಗಳಲ್ಲಿ ಕೂಡಾ ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಪಿಗಳಿಬ್ಬರೂ ತೀರಾ ಅಸ್ವಸ್ಥರಾಗಿದ್ದ ಬಾಲಕೃಷ್ಣ ಅವರ ಮುಖಕ್ಕೆ ಬೆಡ್‌ಶೀಟ್‌ ಒತ್ತಿ ಕೊಲೆ ಮಾಡಿದ್ದಾರೆ.

ಪೊಲೀಸರು ಇಬ್ಬರನ್ನೂ ಬಂಧನ ಮಾಡಿದ್ದು, ಪ್ರತಿಮಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿ ದಿಲೀಪ್‌ ಹೆಗ್ಡೆಯನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು