Fri. Apr 18th, 2025

Belthangadi: ಹೆಜ್ಜೇನು ದಾಳಿಯಿಂದ ಮಗುವನ್ನು ರಕ್ಷಿಸಿದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ – ಚಂದ್ರಾವತಿಯವರ ಸಮಯಪ್ರಜ್ಞೆಗೆ ಗ್ರಾಮಸ್ಥರ ಮೆಚ್ಚುಗೆ!!

ಬೆಳ್ತಂಗಡಿ: (ಅ.27) ಮೇಲಂತ ಬೆಟ್ಟು ಗ್ರಾಮ ಪಂಚಾಯಿತ್ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿತ್ತು. ಜನ ಭಯ ಯಿಂದ ಓಡಿಹೋದರು. ಸುತ್ತಲೂ ಇದ್ದಂಥ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.

ಇದನ್ನೂ ಓದಿ: ⭕Delhi: ಲವ್‌ ಜಿಹಾದ್‌ ಗೆ 19 ರ ಯುವತಿ ಬಲಿ

ಆಗತಾನೆ ಸಂತ ತೆರೆಸಾ ಶಾಲೆ ಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತಬೆಟ್ಟು ಶಾಲೆಯಿಂದ ಮನೆ ಕಡೆ ಬರುತ್ತಿದ್ದರು. ಇವರ ಮೇಲೆ ತೀವ್ರ ವಾಗಿ ಹೆಜ್ಜೇನು ದಾಳಿ ನಡೆಸಿತ್ತು. ಮಗು ದಾರಿತೋರದೆ ಕೆಲ ಮನೆಗಳಿಗೆ ಓಡಿತ್ತು. ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.

ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ, ಅತ್ತು ಕರೆದರೂ ರಕ್ಷಣೆಗೆ ಯಾರು ಇಲ್ಲದಾಗ ಕೊನೆಗೆ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರೇರಿಯನ್ ಸಿಬ್ಬಂದಿಯಾದ ಚಂದ್ರಾವತಿ ಯೋಗೀಶ್ ಪೂಜಾರಿ ಗೇರುಕಟ್ಟೆ ಇವರು ದೇವತೆಯಂತೆ ಬಂದು ಮುಚ್ಚಿದ್ದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರ್ಕೊಂಡು ಹೋದರು ಆದರೂ ಬೆನ್ನು ಬಿಡದ ಹೆಜ್ಜೇನು ಅಲ್ಲಿಯೂ ದಾಳಿ ಮಾಡಿತು.

ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಕೂಡ ಹೆಜ್ಜೇನು ಇದ್ದು ದಾಳಿ ಮಾಡಿತ್ತು.
ಮತ್ತೆ ಚಂದ್ರವತಿಯವರು ಪೊರಕೆ ಸಹಾಯದಿಂದ ಬಹಳಷ್ಟು ಸಂಖ್ಯೆ ಯಲ್ಲಿ ಇದ್ದ ಹೆಜ್ಜೇನುವನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳ್ಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು.

ನಂತರ ಮಗುವನ್ನು ಆಸ್ಪತ್ರೆ ಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮಗು ಈಗ ಅರೋಗ್ಯ ದಿಂದ ಇದ್ದು ಚೇತರಿಸಿ ಕೊಳ್ಳು ತ್ತಿದ್ದಾನೆ. ಪಂಚಾಯತ್ ನೌಕರ ರಾದ ಚಂದ್ರಾವತಿಯವರ ಸಮಯ ಪ್ರಜ್ಞೆ, ತಾಯಿ, ಮಮತೆ, ಧೈರ್ಯವು ಗ್ರಾಮಸ್ಥರ ಪ್ರೀತಿ ಗೆ ಪಾತ್ರವಾಯಿತು.

Leave a Reply

Your email address will not be published. Required fields are marked *