Wed. Nov 20th, 2024

Sakaleshpur: ದತ್ತಪೀಠದಲ್ಲಿ ಕರ್ಪೂರ, ಭಜನೆ, ಪ್ರಸಾದಕ್ಕೆ ನಿರ್ಬಂಧ – ರಘು ಸಕಲೇಶಪುರ ಕಿಡಿ!

ಸಕಲೇಶಪುರ :(ಅ.27) ದತ್ತಪೀಠದಲ್ಲಿ ಕರ್ಪೂರ ಹಚ್ಚಬಾರದು, ಭಜನೆ ಮಾಡಬಾರದು, ಪ್ರಸಾದ ಹಂಚಬಾರದೆಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಆದೇಶಿರುವುದನ್ನು ದತ್ತಪೀಠ ಮುಕ್ತಿ ಹೋರಾಟಗಾರ ರಘು ಸಕಲೇಶಪುರ ಖಂಡಿಸಿದ್ದಾರೆ.

ಇದನ್ನೂ ಓದಿ: ⭕Udupi: ಊಟ ಮಾಡುತ್ತಾ ಮನೆಯಿಂದ ಹೊರ ಬಂದ ಯುವತಿ ದಿಢೀರ್ ನಾಪತ್ತೆ!!

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿಕ್ಕಮಗಳೂರಿನಲ್ಲಿ ದತ್ತ ಭಕ್ತರು ಆಯೋಜಿಸುವ ದತ್ತಮಾಲ
ಅಭಿಯಾನದಲ್ಲಿ ದೂರದ ಊರಿನಿಂದ ಬರುವ ದತ್ತಭಕ್ತರು ಅತ್ಯಂತ ಶ್ರದ್ಧೆಯಿಂದ ಮಾಲೆ ಧರಿಸಿ 11 ದಿನಗಳ ಕಠಿಣ ವ್ರತಾಚರಣೆ ಮಾಡಿ, ಭಜನೆ, ಸಂಕೀರ್ತನೆಯಿಂದಲೇ ಶಕ್ತಿಯನ್ನು ಮೈಗೂಡಿಸಿಕೊಳ್ಳುವ ಶ್ರೇಷ್ಠವಾದ ಪ್ರಕ್ರಿಯೆಯಾಗಿದೆ.

ದತ್ತ ಜಯಂತಿಯಲ್ಲಿಸರದಿ ಸಾಲಿನಲ್ಲಿ ಬರುವಾಗ ಸರ್ವೇ ಸಾಮಾನ್ಯವಾಗಿ ಭಕ್ತರು ಭಜನೆ, ದತ್ತನಾಮ, ಸಂಕೀರ್ತನೆ ಮಾಡುತ್ತಲೇ ಮನಸ್ಸಿನಲ್ಲಿ ಕೆಟ್ಟದನ್ನು ಆಲೋಚನೆ ಮಾಡದೇ ಅಧ್ಯಾತ್ಮಿಕದಲ್ಲಿ ಮಿಂದೆಳುವ ಭಕ್ತರಿಗೆ ಭಜನೆ ಮಾಡಬಾರದು ಎಂದು ಹೇಳಿಕೆ ನೀಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಪ್ರಚೋದನಕಾರಿ ಭಾಷಣ ಮಾಡಬಾರದು, ಆಯುಧಗಳನ್ನು ಪಟಾಕಿ ಇತರೆ ಸ್ಫೋಟಕ ವಸ್ತುಗಳನ್ನು ತರಬಾರದು, ನ್ಯಾಯಾಲಯದ ಆದೇಶ ಪಾಲಿಸಬೇಕು, ಪಾದುಕೆ ಮುಟ್ಟಬಾರದು ಎಂಬ ಆದೇಶಗಳ ಬಗ್ಗೆ ಯಾವುದೇ ಸಮಸ್ಯೆಯಿಲ್ಲ, ಆದರೆ, ಅದನ್ನು ಬಿಟ್ಟು ಕರ್ಪೂರ ಹಚ್ಚಬಾರದು, ಭಜನೆ ಮಾಡಬಾರದು ಎಂಬ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಮೀನ ನಾಗರಾಜ್ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಈ ಕುರಿತು ರಾಜ್ಯಾದ್ಯಂತ ಅಭಿಯಾನ ನಡೆಸಿ ಜನ ಜಾಗೃತಿ ಮಾಡುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *