Wed. Nov 20th, 2024

Semicolon tattoos: ಟ್ರೆಂಡ್‌ ಆದ ಅರ್ಧವಿರಾಮ ಟ್ಯಾಟೂ!!- ಏನಿದರ ರಹಸ್ಯ?

Semicolon tattoos:(ಅ.27) ಯುವ ಪೀಳಿಗೆಗಳು ಇತ್ತೀಚೆಗೆ ಟ್ಯಾಟೂಗಳ ಟ್ರೆಂಡ್‌ಗೆ ಹೆಚ್ಚು ಮಾರುಹೋಗುವುದನ್ನು ನೋಡಬಹುದು. ಹುಡುಗಿಯರು, ಹುಡುಗರು ತಮ್ಮ ಮೈ ಮೇಲೆ ಇಷ್ಟದ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಕೆಲವರು ಚಿತ್ರ ವಿಚಿತ್ರವಾಗಿ ಟ್ಯಾಟೂ ಹಾಕಿಸಿಕೊಳ್ಳುವುದು ಕೂಡ ನಾವು ನೋಡಬಹುದು. ಹಾಗೆ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಬರೆದವರು ಕೂಡ ಇದ್ದಾರೆ.
ಹಾಗೆ ಮೈ ಮೇಲೆ ಹಾಕಿಸಿಕೊಂಡ ಟ್ಯಾಟೂ ಕೂಡ ಸುದ್ದಿಯಾಗಿದ್ದೂ ಇದೆ. ಅದರಲ್ಲೂ ಕ್ರಿಕೆಟರ್ ವಿರಾಟ್ ಕೊಹ್ಲಿ, ಶಿಖರ್ ಧವನ್, ನಟ, ನಟಿಯರು ಟ್ಯಾಟೂ ಹಾಕಿಸಿಕೊಂಡಾಗ ಅವರ ಅಭಿಮಾನಿಗಳು ಕೂಡ ಅದನ್ನೇ ಫಾಲೋ ಮಾಡೋದನ್ನು ನೋಡಿರುತ್ತೇವೆ.

ಇದನ್ನೂ ಓದಿ: ⭕ಪುತ್ತೂರು: ಬೈಕ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ

ಕೆಲವು ತಮ್ಮ ಇಷ್ಟ ಹೆಸರು, ದೇವರ ಚಿತ್ರ ಹಾಗೆ ತಮ್ಮ ಇಷ್ಟದ ಸಿಂಬಲ್‌ಗಳನ್ನು ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಯಾರು ಕೂಡ ಸುಮ್ಮನೆ ಮನಸ್ಸಿಗೆ ಬಂದದ್ದನ್ನು ಟ್ಯಾಟೂ ಹಾಕಿಸುವುದಿಲ್ಲ. ಅವರು ಹತ್ತಾರು ಬಾರಿ ಯೋಚಿಸುತ್ತಾರೆ. ಆ ಟ್ಯಾಟೂವಿನಲ್ಲಿ ಅರ್ಥ ಇರುವಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಒಮ್ಮೆ ಟ್ಯಾಟೂ ಹಾಕಿಸಿದರೆ ಅದನ್ನು ತೆಗೆಯುವುದು ಬಹಳ ಕಷ್ಟ. ಹೀಗಾಗಿ ಹತ್ತಾರು ಬಾರಿ ಆಲೋಚಿಸಿ ಟ್ಯಾಟೂ ಹಾಕಿಸುತ್ತಾರೆ.

ಆದ್ರೆ ಕೆಲವೊಂದು ಸಿಂಬಲ್‌ಗಳು ಒಳಾರ್ಥಗಳನ್ನು ಹೊಂದಿರುತ್ತವೆ. ನಾವಿಂದು ಸೆಮಿಕೋಲನ್ ಟ್ಯಾಟೂಗಳು ಕುರಿತಂತೆ ಅದರ ಒಳ ಅರ್ಥದ ಕುರಿತಂತೆ ತಿಳಿದುಕೊಳ್ಳೋಣ. ನೀವು ಈ ಮೇಲೆ ನೀಡಲಾಗಿರುವ ಸೆಮಿಕೋಲನ್ ಟ್ಯಾಟೂವನ್ನು ಯಾರ ಕೈ ಮೇಲಾದರು ಕಾಲಿನ ಮೇಲೆ ನೋಡಿರಬಹುದು. ಆದ್ರೆ ಇದರ ಅರ್ಥ ನಿಮಗೆ ತಿಳಿದಿರುವುದಿಲ್ಲ.

ಸೆಮಿಕೋಲನ್ ಚಿಹ್ನೆಯನ್ನು ಕನ್ನಡದಲ್ಲಿ ನಾವು ಅರ್ಧವಿರಾಮ ಎಂದು ಕರೆಯುತ್ತೇವೆ. ಇತ್ತೀಚಿಗೆ ಈ ಟ್ಯಾಟೂ ಬಹಳ ಫೇಮಸ್ ಆಗಿದೆ. ಯುವಜನತೆಯ ಕೈ ಮೇಲೆ ಈ ಅರ್ಧ ವಿರಾಮ ಚಿಹ್ನೆಯ ಟ್ಯಾಟೂ ನೀಡಬಹುದು. ನೋಡಲು ಬಹಳ ಟ್ರೆಂಡಿಯಾಗಿ ಕಾಣುತ್ತದೆ. ಆದ್ರೆ ಈ ಟ್ಯಾಟೂ ಮಾನಸಿಕ ಆರೋಗ್ಯ ಹಾಗೂ ಆತ್ಮಹತ್ಯೆ ತಡೆಗಟ್ಟುವಿಕೆಯ ಪ್ರಾಮುಖ್ಯತೆ ಹೊಂದಿದೆ ಎಂಬುದು ತಿಳಿದಿದೆಯೇ?

ಈ ಸೆಮಿಕೋಲನ್ ಟ್ರೆಂಡ್ 2013ರಲ್ಲಿ ಆರಂಭಗೊಂಡಿತ್ತು. ಅದು ಸಾಮಾಜಿಕ ಜಾಲತಾಣದ ಒಂದು ಅಭಿಯಾನದ ಮೂಲಕ ಆರಂಭಗೊಂಡಿತ್ತು. ಈ ಟ್ಯಾಟೂವನ್ನು ಖಿನ್ನತೆ, ಆತ್ಮಹತ್ಯೆ, ವ್ಯಸನಗಳ ವಿರುದ್ಧ ಹೋರಾಟದ ಭರವಸೆ, ಪ್ರೀತಿಯ ಸಂಕೇತವಾಗಿ ಬಳಸುವ ಅಭಿಯಾನವಾಗಿ ಇದನ್ನು ಆರಂಭಿಸಲಾಯಿತು. ಏಕೆಂದರೆ, ಬರಹಗಾರರು ತಮ್ಮ ವಾಕ್ಯದ ಕೊನೆಯಲ್ಲಿ ಅರ್ಧ ವಿರಾಮದ ಚಿಹ್ನೆ ಬಳಸುತ್ತಾರೆ. ಆದ್ರೆ ನಾವು ನಮ್ಮ ಜೀವನ ಅಂತ್ಯಗೊಳಿಸಲು ನಿರ್ಧರಿಸಬಾರದು ಎಂಬ ಸಂಕೇತವನ್ನು ಇದು ಸೂಚಿಸುತ್ತದೆ.

ಈ ಅರ್ಧ ವಿರಾಮದ ಟ್ಯಾಟೂವಿನಲ್ಲಿ ಇಷ್ಟೊಂದು ಗಂಭೀರ ಆಲೋಚನೆ ಕೂಡ ಅಡಗಿದೆ. ಆದ್ರೆ ಬರು ಬರುತ್ತಾ ಈ ಟ್ರೆಂಡ್ ಬದಲಾಗಿದೆ. ಹಲವರು ಖಿನ್ನತೆಗೆ ಒಳಗಾಗಿ ಜೀವನ ಗೆದ್ದು ಬಂದವರು, ಆತ್ಮಹತ್ಯೆಯ ಆಲೋಚನೆ ಮಾಡಿ ಜೀವನ ಕೊನೆಗೊಳಿಸಲು ಮುಂದಾಗಿ ನಂತರ ಅವರ ನಿರ್ಧಾರ ಬದಲಿಸಿರುವವರು ಈ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದೊಂದು ಪುನರ್‌ಜೀವನ ಎಂದು ಬಣ್ಣಿಸಲಾಗುತ್ತದೆ.

ಹೀಗಾಗಿ ಈ ಸೆಮಿಕೋಲರ್ ಟ್ಯಾಟೂ ಹಾಕಿಸಿಕೊಂಡವರು ನಿಮ್ಮ ನಡುವೆ ಇದ್ದರೆ ಅಥವಾ ಹಾಕಿಸಿಕೊಂಡವರನ್ನು ನೀವು ನೋಡಿದರೆ ಅವರನ್ನು ಎಚ್ಚರಿಕೆಯಿಂದ ಗಮನಿಸಿ ನೋಡಿ. ಏಕೆಂದರೆ ಅವರಲ್ಲಿ ಯಾವುದಾದರು ಮಾನಸಿಕ ಸಮಸ್ಯೆಯೂ ಇರಬಹುದು. ಇಲ್ಲವೇ ಇಂತಹ ಸಮಸ್ಯೆಯಿಂದ ಹೊರಬರಲು ಅವರು ಹೋರಾಡುತ್ತಿರಬಹುದು. ಕೆಲವರು ಈ ಯಾವುದೇ ಅರ್ಥ ತಿಳಿಯದೆ ಈ ಟ್ಯಾಟೂ ಹಾಕಿಸಿಕೊಂಡವರು ಕೂಡ ಬಹಳ ಜನ ಇದ್ದಾರೆ.

Leave a Reply

Your email address will not be published. Required fields are marked *