Digital Condom:(ಅ.28) ತಂತ್ರಜ್ಞಾನ ಹೆಚ್ಚಾದಂತೆ ಮನುಷ್ಯ ಖಾಸಗಿ ಬದುಕನ್ನು ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ. ಖಾಸಗಿ ವಿಡಿಯೋ ಇಟ್ಟುಕೊಂಡು ವಂಚನೆ ಮಾಡುವುದು, ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಆಡಿಯೋ ವಿಡಿಯೋ ಹರಿಬಿಟ್ಟು ಇನ್ನೊಬ್ಬರನ್ನು ಸಮಸ್ಯೆಗೆ ಸಿಲುಕಿಸುತ್ತಾರೆ. ಇದೀಗ ಅಂತಹ ಅಪಾಯಕ್ಕೆ ಬ್ರೇಕ್ ಹಾಕಲು ಡಿಜಿಟಲ್ ಕಾಂಡೋಮ್ ಆಪ್ ಪರಿಚಿತವಾಗಿದೆ.
ಇದನ್ನೂ ಓದಿ: 🟣ಬೆಳ್ತಂಗಡಿ : ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ
ಹೌದು, ಜರ್ಮನಿಯ ಲೈಂಗಿಕ ಆರೋಗ್ಯ ಬ್ರ್ಯಾಂಡ್ ಬಿಲ್ಲಿ ಬಾಯ್ ಸಂಸ್ಥೆಯು ಇನ್ನೋಸಿಯನ್ ಬರ್ಲಿನ್ ಜೊತೆಗಿನ ಪಾಲುದಾರಿಕೆಯಲ್ಲಿ ಡಿಜಿಟಲ್ ಕಾಂಡೋಮ್ ಅನ್ನು ಪರಿಚಯಿಸಿದೆ . ಇದು ಡಿಜಿಟಲ್ ಕಾಂಡೋಮ್ ಅಪ್ಲಿಕೇಶನ್ ಆಗಿದ್ದು, ಒಪ್ಪಿಗೆ ಇಲ್ಲದೆ ಜೋಡಿಯ ಖಾಸಗಿ ಕ್ಷಣವನ್ನು ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್ ತಡೆಗಟ್ಟಲು ಈ ಆಪ್ ಸಹಾಯವಾಗಿದೆ. ʼನಿಜವಾದ ಕಾಂಡೋಮ್ ಬಳಸಿದಷ್ಟೇ ಸುಲಭʼ ಎಂಬ ಶೀರ್ಷಿಕೆಯಡಿಯಲ್ಲಿ ಕಂಪನಿ ಇದರ ಜಾಹೀರಾತು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಡೋಮ್ ಅಪ್ಲಿಕೇಶನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡುವುದಾದರೆ, ಅಪ್ಲಿಕೇಶನ್ ಅನ್ನು ಪರಿಚಯಿಸಿರುವ ಡೆವಲಪರ್ ಫೆಲಿಪ್ ಅಲ್ಮೇಡಾ “ಸ್ಮಾರ್ಟ್‌ಫೋನ್‌ಗಳು ಜನರಿಗೆ ಅತ್ಯವಶ್ಯಕ. ಜನರ ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ನಿಮ್ಮ ಅನುಮತಿಯಿಲ್ಲದೇ ನಿಮ್ಮ ವೈಯಕ್ತಿಕ ಸಂಗತಿಗಳನ್ನು, ಕ್ಷಣಗಳ ರೆಕಾರ್ಡಿಂಗ್‌ನಿಂದ ನಿಮ್ಮನ್ನು ರಕ್ಷಿಸುವ ಸಲುವಾಗಿ ಈ ಆಪ್ ಅನ್ನು ಡೆವಲವ್ ಮಾಡಲಾಗಿದೆ. ಬ್ಲೂಟೂತ್ ಬಳಕೆಯ ಮೂಲಕ ನಿಮ್ಮ ಕ್ಯಾಮರಾ ಮತ್ತು ಮೈಕ್ ಅನ್ನು ಸರಳವಾಗಿ ನಿರ್ಬಂಧಿಸಬಹುದಾದ ಮೊದಲ ಅಪ್ಲಿಕೇಶನ್ ಇದಾಗಿದೆ.
ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ಕಂಪನಿಯು “ಇದು ಏಕಕಾಲದಲ್ಲಿ ಅನೇಕ ಸಾಧನಗಳನ್ನು ನಿರ್ಬಂಧಿಸಬಹುದು” ಎಂದು ಹೇಳಿದೆ. ಅಪ್ಲಿಕೇಶನ್‌ನ ಕಾರ್ಯವು ಸರಳವಾಗಿದೆ: ಖಾಸಗಿ ಕ್ಷಣಗಳ ಮೊದಲು, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸ್ಮಾರ್ಟ್‌ಫೋನ್ ಅನ್ನು ಸಮೀಪದಲ್ಲಿ ಇರಿಸುತ್ತಾರೆ. ಈ ಅಪ್ಲೀಕೇಶನ್ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡುವುದನ್ನು ತಡೆಯುತ್ತದೆ. ಒಂದು ವೇಳೆ ರೆಕಾರ್ಡಿಂಗ್ ಆಗುತ್ತಿದ್ದರೆ ಸೈರನ್ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡುತ್ತದೆ ಎಂದು ಹೇಳಿದೆ.