Golgappa Ban:(ಅ.28) ಗೋಬಿ, ಬೀದಿ ಬದಿ ಆಹಾರಗಳು ಸೇರಿದಂತೆ ಇದೀಗ ಗೋಲ್ ಗಪ್ಪಾ ಮೇಲೂ ನಿರ್ಬಂಧ ಬರಲಿದೆ ಅನ್ನು ಮಾತು ಕೇಳಿ ಬರುತ್ತಿದೆ. ಗೋಲ್ ಗಪ್ಪಾದ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ಇದನ್ನೂ ಓದಿ: 🛑ಅಳಿಯಂದಿರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್
ಸಾಮಾಜಿಕ ಜಾಲತಾಣದಲ್ಲಿ ಗೋಲ್ ಗಪ್ಪಾ ತಯಾರಿಕ ಘಟಕಗಳ ವಿಡಿಯೋ ವೈರಲ್ ಬೆನ್ನಲ್ಲೇ, ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಡ್ರೈವ್ ಮುಂದುವರೆದಿದೆ.
ಬೀದಿ ಬದಿ ಗೋಲ್ ಗಪ್ಪಾ ತಿನ್ನೋರು ಹುಷಾರ್:
ಗೋಲ್ ಗಪ್ಪಾದ ಕ್ವಾಲಿಟಿ ಮೇಲೆ ದೂರುಗಳು ಬಂದ ಹಿನ್ನೆಲೆ ಗೋಲ್ ಗಪ್ಪಾವನ್ನು ಆಹಾರ ಇಲಾಖೆ ಪರೀಕ್ಷೆಗೆ ಒಳಪಡಿಸಿದೆ. ಅಧಿಕಾರಿಗಳು ಬೆಂಗಳೂರಿನಲ್ಲಿ Random samples ಸಂಗ್ರಹ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ.
ಗೋಲ್ ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ ಗೊತ್ತಾ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತೆ? ಇದರಿಂದ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಕಳೆದ ಎರಡು ದಿನದಿಂದ ತಯಾರಿಕಾ ಘಟಕದ ಮೇಲೆ
ಆಹಾರ ಇಲಾಖೆ ದಾಳಿ ನಡೆಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗೋಲ್ ಗಪ್ಪಾ ವರದಿ ಬರಲಿದೆ. ಮುಂದೆ ಗೋಲ್ ಗಪ್ಪಾ ಭವಿಷ್ಯ ನಿರ್ಧಾರವಾಗಲಿದೆ.