Wed. Nov 20th, 2024

Indore: ಹಿಂದೂ ಹೆಸರಿನಲ್ಲಿ ಯುವತಿಯರನ್ನು ಟ್ರ‍್ಯಾಪ್ – ಕೊನೆಗೂ ಸಿಕ್ಕಿಬಿದ್ದ ಅಮನ್ ಖಾನ್ – ಈತನ ಆಟಕ್ಕೆ ಬಲಿಯಾದದ್ದೆಷ್ಟು ಹೆಣ್ಣುಮಕ್ಕಳು ಗೊತ್ತಾ??!

ಇಂದೋರ್‌: (ಅ.28) ಅಮನ್ ಗುಪ್ತಾ ಎಂಬ ಹೆಸರಿನಲ್ಲಿ ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿ ಶೋಷಣೆ ಮಾಡುತ್ತಿದ್ದ ಅಮನ್ ಖಾನ್ ಎಂಬ ಯುವಕನನ್ನು ಹಿಂದೂ ಜಾಗರಣ್ ಮಂಚ್ ಇಂದೋರ್ ನಲ್ಲಿ ಹಿಡಿದಿದ್ದು, ಈತನ ಲವ್ ಜಿಹಾದ್ ಆಟ ಬಯಲಾಗಿದೆ. ಖಾಸಗಿ ಟೆಲಿಕಾಲಿಂಗ್ ಕಂಪನಿಯಲ್ಲಿ ಒಂದು ವಾರದಲ್ಲಿ ಐದನೇ ಲವ್ ಜಿಹಾದ್ ಪ್ರಕರಣವಾಗಿದೆ.

ಇದನ್ನೂ ಓದಿ: 🛑ತುಮಕೂರು: ಸೆಲ್ಫಿ ಹುಚ್ಚಿನಿಂದ ಹರಿಯುವ ನೀರಿಗೆ ಬಿದ್ದು ಯುವತಿ ನಾಪತ್ತೆ!!

ಇಂದೋರ್‌ನಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಮನ್ ಗುಪ್ತಾ ಎಂಬ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಟ್ರ‍್ಯಾಪ್ ಮಾಡುತ್ತಿದ್ದ ಅಮನ್ ಖಾನ್ ಎಂಬ ಯುವಕನನ್ನು ಸದ್ಯ ಬಂಧಿಸಲಾಗಿದೆ. ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿ ದೈಹಿಕ ಹಾಗೂ ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದ. ಯುವಕ ಛತ್ತರ್‌ಪುರ ನಿವಾಸಿಯಾಗಿದ್ದು, ಕೆಲ ದಿನಗಳಿಂದ ಇಂದೋರ್‌ನಲ್ಲಿ ನೆಲೆಸಿದ್ದ. ಇಂದೋರ್‌ನ ಹುಡುಗಿಯರನ್ನು ಗುರಿಯಾಗಿಸಲು ಈತನ ಲವ್ ಜಿಹಾದ್ ಕೃತ್ಯ ಶುರುಮಾಡಿದ್ದ.

ಹಿಂದೂ ಜಾಗರಣ್ ಮಂಚ್ ನ ಕಾರ್ಯಕರ್ತರಿಗೆ ಅಮನ್ ಖಾನ್ ಎಂಬ ಯುವಕ ಹಿಂದೂ ಯುವತಿಯರಿಗೆ ಆಮಿಷವೊಡ್ಡಿ ಶೋಷಣೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ತಾನು ಹಿಂದೂ ಎಂದು ಬಿಂಬಿಸಿಕೊಂಡು ದೇವಸ್ಥಾನಕ್ಕೆ ಹೋಗುವುದು, ಕೈಗೆ ಖಡ್ಗ ಹಾಗೂ ದಾರ ಕಟ್ಟಿಕೊಂಡಿದ್ದ. ತಕ್ಷಣ ಎಚ್ಚೇತ್ತ ಹಿಂದೂ ಜಾಗರಣ ಮಂಚ್ ಕಾರ್ಯಕರ್ತರು ಅಮನ್ ನನ್ನು ಹಿಡಿದು ವಿಚಾರಣೆ ನಡೆಸಿದಾಗ ಮೊದಲು ಅವನು ತನ್ನ ಹೆಸರು ಅಮನ್ ಗುಪ್ತಾ ಎಂದು ಹೇಳಿದ್ದಾನೆ. ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು ಆತನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಆತ ತನ್ನ ಹೆಸರನ್ನು ಮೊಹಮ್ಮದ್ ಅಮನ್ ಖಾನ್ ಎಂದು ಬಹಿರಂಗಪಡಿಸಿದ್ದಾನೆ.

ಈತ ಕಳೆದ ಎರಡು ವರ್ಷಗಳಿಂದ ಇಂದೋರ್‌ನಲ್ಲಿ ನೆಲೆಸಿದ್ದ. ಇಂದೋರ್‌ನ ಬಜರಂಗ್ ನಗರದಲ್ಲಿನ ಫ್ಲಾಟ್‌ನಲ್ಲಿ ಹಿಂದೂ ಹುಡುಗಿಯನ್ನು ಒಂದು ವರ್ಷದಿಂದ ಇರಿಸಿದ್ದಾನೆ. ಈ ಬಗ್ಗೆ ಬಾಲಕಿಯ ಪೋಷಕರಿಗೆ ಮಾಹಿತಿ ಇಲ್ಲ. ಹಿಂದೂ ಹುಡುಗಿಯರನ್ನು ಮೋಹಿಸಿ ಮತಾಂತರ ಮಾಡಿ ದೈಹಿಕವಾಗಿ ಶೋಷಣೆ ಮಾಡುವುದೆ ಈತನ ಕೆಲಸವಾಗಿತ್ತು. ಅಮಾನ್ ಖಾನ್ ಮೊಬೈಲ್‌ನಲ್ಲಿ ಅನೇಕ ಹುಡುಗಿಯರ ಫೋಟೋಗಳು ಮತ್ತು ವೀಡಿಯೊಗಳು ಕಂಡುಬಂದಿವೆ. ಸದ್ಯ ಎಲ್ಲವನ್ನೂ ಪೊಲೀಸ್ ವಶಕ್ಕೆ ನೀಡಲಾಗಿದೆ.

ಒಂದು ವಾರದಲ್ಲಿ ಐದು ಲವ್ ಜಿಹಾದ್ ಪ್ರಕರಣ:
ಬಿಲಿಯಂಟ್ ಕನ್ವೆನ್ಷನ್‌ನಲ್ಲಿರುವ ಖಾಸಗಿ ಟೆಲಿಕಾಲಿಂಗ್ ಕಂಪನಿಯಲ್ಲಿ ಒಂದು ವಾರದಲ್ಲಿ ಲವ್ ಜಿಹಾದ್‌ನ ಐದು ಪ್ರಕರಣ ಬೆಳಕಿಗೆ ಬಂದಿದೆ. ಅಮನ್ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯಲ್ಲಿ ಇದೇ ರೀತಿಯ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದರೆ, ಸಂಘಟನೆಯ ವತಿಯಿಂದ ಪ್ರಮುಖ ಕ್ರಮ ಕೈಗೊಳ್ಳಲಾಗುವುದು. ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *