ಮಂಗಳೂರು:(ಅ.28) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ತಾ. 26 ಅಕ್ಟೋಬರ್ 2024 ಶನಿವಾರದಂದು ಮಂಗಳೂರಿನ ಪುರಭವನದಲ್ಲಿ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಚುನಾವಣಾ ಪ್ರಕ್ರಿಯೆ ನಡೆಯಿತು.

ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಪುರಭವನದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಯುವ ವಾಗ್ಮಿ ಚಿಂತಕರು ಪತ್ರಕರ್ತರು ಆಗಿರುವ ಶ್ರೀಕಾಂತ್ ಶೆಟ್ಟಿ ಕಾರ್ಕಳ , ಕನ್ನಡದ ಕೋಗಿಲೆ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಸಂಗೀತಗಾರ ಸಂದೇಶ್ ನೀರ್ ಮಾರ್ಗ ಮತ್ತು ಹಿರಿಯ ವಕೀಲರಾದ ರವಿಚಂದ್ರ ಮತ್ತು ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಹೆಚ್.ಕೆ ಮತ್ತು

ಮಂಗಳೂರು ಜಿಲ್ಲಾ ಸಂಚಾಲಕ್ ಸುವಿತ್ ಶೆಟ್ಟಿ ಹಾಗೂ ಮಂಗಳೂರು ಮಹಾನಗರ ಕಾರ್ಯದರ್ಶಿ ಮೋನಿಷ್ ತೂಮಿನಾಡ್ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ಪ್ರಾಸ್ತಾವಿಕ ಭಾಷಣವನ್ನು ಪ್ರಾಂತ ಕಾರ್ಯದರ್ಶಿ ಪ್ರವೀಣ್ ಹೆಚ್.ಕೆ ಮಾತಾಡಿ ವಿದ್ಯಾರ್ಥಿ ಪರಿಷತ್ ಮಂಗಳೂರು ಅಖಿಲ ಭಾರತೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಭಾಗ ಇನ್ನಷ್ಟು ಸಕ್ರಿಯ ಕಾರ್ಯಕರ್ತರ ವಿಕಾಸ ಇಲ್ಲಿಂದ ನಡೆಯಬೇಕಿದೆ ಎಂದರು.


ಯುವ ವಾಗ್ಮಿ ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತಾಡಿ ಇಡೀ ವಿಶ್ವದಲ್ಲಿ ಯುವಕರನ್ನು ಹೊಂದಿರುವ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿ ಪರಿಷತ್ ಅದೆಷ್ಟೋ ಸಾವಿರ ಕಾರ್ಯಕರ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ ಇದು ವಿದ್ಯಾರ್ಥಿ ಪರಿಷತ್ತಿನ ಸಿದ್ಧಾಂತ ನೋಡಿ ಬಂದಿರುವ ಕಾರ್ಯಕರ್ತರು ಇನ್ನಷ್ಟು ಯುವ ಮನಸ್ಸುಗಳು ವಿದ್ಯಾರ್ಥಿ ಪರಿಷತ್ತಿನ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕಿದೆ ಎಂದರು ನಂತರದಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರಮುಖರಾದ ಹಿರಿಯ ವಕೀಲರಾದ ರವಿಚಂದ್ರ ರವರು ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ 2024-25 ನೇ ಸಾಲಿನ ಪದಾಧಿಕಾರಿಗಳ ಜವಾಬ್ದಾರಿಯನ್ನು ಘೋಷಿಸಿದರು.

ಜವಾಬ್ದಾರಿ ಸ್ವೀಕರಿಸಿದ ನಂತರ ಮಂಗಳೂರು ಪುರಭವನದಿಂದ ಕಾಲ್ನಡಿಗೆ ಜಾಥಾವು ಪ್ರಾರಂಭವಾಗಿ ಕ್ಲಾಕ್ ಟವರ್ ಮುಂಭಾಗವಾಗಿ ಸಿಟಿ ಸೆಂಟರ್ ಮಾರ್ಗವಾಗಿ
ಈ ಸಂದರ್ಭದಲ್ಲಿ ಎಬಿವಿಪಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮರಾಠಿ,ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ಮಂಗಳೂರು ಜಿಲ್ಲಾ ಸಹ ಸಂಚಾಲಕ್ ಪ್ರತೀಕ್ ಬಂಟ್ವಾಳ, ತಾಲೂಕು ಸಂಚಾಲಕ್ ಶ್ರೇಯಸ್ ಇಡ್ಯಾಡ್ಕ ಮತ್ತು ಮಂಗಳೂರು ವಿಭಾಗ ಕಲಾ ಮಂಚ್ ಪ್ರಮುಖ್ ಸಮೀಕ್ಷಾ, ಮಂಗಳೂರು ವಿಸ್ತಾರಕ್ ಶ್ರೀ ಲಕ್ಷ್ಮೀ ಹಾಗೂ ಅಮೃತ್, ಆಕಾಶ್, ಧನುಷ್, ಕಾರ್ತಿಕ್, ರಂಜನ್, ಅಕ್ಷತಾ ಹಾಗೂ ಮಹಾನಗರ ತಂಡದ ಪ್ರಮುಖರು ಉಪಸ್ಥಿತರಿದ್ದರು.
