Wed. Nov 20th, 2024

Puttur: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಕರೆ – ಹಲಾಲ್ ಹಕ್ಕು ಮುಸಲ್ಮಾನರಿಗಷ್ಟೇ; ಆದ್ರೆ ಹಿಂದೂಗಳಿಗಲ್ಲ – ಪುತ್ತೂರಿನಾದ್ಯಂತ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಅಭಿಯಾನ

ಪುತ್ತೂರು :(ಅ.28) ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಪುತ್ತೂರಿನಾದ್ಯಂತ ಅಭಿಯಾನ ಆರಂಭಿಸಿದೆ.

ಇದನ್ನೂ ಓದಿ: 🛑ಪ್ರೀತಿಸಿ ಅನ್ಯಧರ್ಮೀಯರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಬಿಗ್‌ ಶಾಕ್?!!

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕರಪತ್ರ ಹಂಚಿ ಅಭಿಯಾನ ಆರಂಭಿಸಿದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯವರು, ದೀಪಾವಳಿಯನ್ನು “ರಾಷ್ಟ್ರದ್ರೋಹಿ ಹಲಾಲ್” ಮುಕ್ತವಾಗಿ ಆಚರಿಸಿ ಎಂದು ಕರೆ ನೀಡಿದರು.

ಈ ಬಗ್ಗೆ ಮಾತನಾಡಿದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯವರು, ಭಾರತದಲ್ಲಿ ಇಸ್ಲಾಂ ಮೇಲಾಧಾರಿತ ಹಲಾಲ್ ಆರ್ಥಿಕ ವ್ಯವಸ್ಥೆ ನಿರ್ಮಿಸಲು ಪ್ರಯತ್ನಗಳಾಗುತ್ತಿವೆ. “ಎಫ್ ಎಸ್ ಎಸ್ ಎ ಐ” ನಂತಹ ಸರ್ಕಾರಿ ಸಂಸ್ಥೆಯ ಪ್ರಮಾಣಪತ್ರ ತೆಗೆದುಕೊಂಡ ನಂತರವೂ ಇಸ್ಲಾಮೀ ಸಂಸ್ಥೆಗಳು ಸಾವಿರಾರು ರೂಪಾಯಿ ತೆಗೆದುಕೊಂಡು ಪ್ರಮಾಣಪತ್ರ ನೀಡುತ್ತಿವೆ.

ಮಾಂಸಕಷ್ಟೇ ಸೀಮಿತವಾಗಿದ್ದ ಮೂಲ ಹಲಾಲ್ ಪರಿಕಲ್ಪನೆ ಈಗ ಸಸ್ಯಹಾರಿ ಪದಾರ್ಥ, ಎಣ್ಣೆ, ಚಾಕಲೇಟು, ಚಿಪ್ಸ್, ರೆಸ್ಟೋರೆಂಟ್ ಹೀಗೆ ಇನ್ನಿತರ ಸಾಮಾಗ್ರಿಗಳವರೆಗೆ ತಲುಪಿದೆ. ಹಾಗಾಗಿ ಹಲಾಲ್ ನಂತಹ ಉತ್ಪನ್ನಗಳನ್ನ ಹಿಂದೂಗಳಾದ ನಾವು ಉಪಯೋಗಿಸದೇ ಹಲಾಲ್ ಮುಕ್ತ ಆಚರಣೆ ಮಾಡಬೇಕಿದೆ ಎಂದರು.

ಹಲಾಲ್ ಹಕ್ಕು ಮುಸಲ್ಮಾನರಿಗಷ್ಟೇ ಸೀಮಿತ. ಹಾಗಿರುವಾಗ ಅದನ್ನು ಹಿಂದೂ ಹಾಗೂ ಇನ್ನಿತರ ಧರ್ಮದಮರ ಮೇಲೆ ಏಕೆ ಹೇರಲಾಗುತ್ತಿದೆ.

ಭಾರತದಲ್ಲಿ ಹಿಂದೂಗಳು ಹಲಾಲ್ ಮುಕ್ತ ಸಾಮಾಗ್ರಿಗಳನ್ನ ಖರೀದಿಸಬೇಕು. ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನ ಉಪಯೋಗಿಸುವ ಮೂಲಕ ಹಲಾಲ್ ಉತ್ಪನ್ನಗಳನ್ನ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *