Wed. Nov 20th, 2024

Tumkur: ಸೆಲ್ಫಿ ಹುಚ್ಚಿನಿಂದ ಹರಿಯುವ ನೀರಿಗೆ ಬಿದ್ದು ಯುವತಿ ನಾಪತ್ತೆ!!- ಆಕೆ ಬದುಕಿದ್ದೇ ರೋಚಕ ಕಥೆ!!

ತುಮಕೂರು:(ಅ.28) ಸೆಲ್ಫಿ ಹುಚ್ಚಿಗೆ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆ ಕೋಡಿ ಬಳಿ ನಡೆದಿದ್ದು. ಅದೃಷ್ಟವಶಾತ್ ಅಗ್ನಿಶಾಮಕ ದಳದ ಸತತ 12 ಗಂಟೆ ಕಾರ್ಯಾಚರಣೆಯಿಂದ ಯುವತಿ ಸಾವನ್ನೇ ಗೆದ್ದು ಬಂದಿದ್ದಾಳೆ.

ಇದನ್ನೂ ಓದಿ: 🛑ಪುತ್ತೂರು: ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಕರೆ

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಎಂಬುವವರ ಮಗಳಾದ ಹಂಸ ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಿಳು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ಕೋಡಿ ಹರಿಯುವ ಸುದ್ದಿ ಕೇಳಿ ನೋಡಲು ಕೆರೆ ಬಳಿ ಹೋಗಿದ್ದರು.

ಕೆರೆ ಕೋಡಿ ಬಳಿ ತೆರಳಿರುವ ಯುವತಿ ರಭಸವಾಗಿ ಹರಿಯುವ ನೀರಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಆಯತಪ್ಪಿ ಕಾಲು ಜಾರಿ ಪೊಟರೆಯೊಳಗೆ ಬಿದ್ದಿರುವ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.

ನಿನ್ನೆಯಿಂದಲೇ ನಿರಂತರವಾಗಿ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿ ಹಾಗೂ ಪೊಲೀಸರು ಯುವತಿ ಪತ್ತೆಗೆ ಕಾರ್ಯಾಚರಣೆ ನಡೆಸಿ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *