Wed. Nov 20th, 2024

Bengaluru: ಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದ ಯುವಕ – ನಡೆದದ್ದು ಮಾತ್ರ ಲವ್ ಜಿಹಾದ್!! – ಮದುವೆಯ ಅಸಲಿ ಕಾರಣ ಬಯಲು!! ನಿಧಿಗೋಸ್ಕರ ಸೈತಾನ್ ಗೆ ತನ್ನ ಮಗುವನ್ನೇ ಬಲಿ ಕೊಡಲು ಮುಂದಾದ ತಂದೆ!

ಬೆಂಗಳೂರು:(ಅ.29) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಪಾಪಿ ತಂದೆಯೋರ್ವ ನಿಧಿಗಾಗಿ ತನ್ನ ಮಗುವನ್ನು ಬಲಿ ಕೊಡಲು ಮುಂದಾದ ಘಟನೆ ನಡೆದಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ : ಬಾರ್ಯದಲ್ಲಿ ಖಾಸಗಿ ಬ್ಯಾಂಕ್ ಎಟಿಎಂ ಒಡೆದು ದರೋಡೆಗೆ ಯತ್ನ!!

ನಾನು (ವನಜಾಕ್ಷಿ) 2020 ರಲ್ಲಿ ಬ್ಲೂಡಾರ್ಟ್‌ನಲ್ಲಿ ಉದ್ಯೋಗಿಯಾಗಿದ್ದಾಗ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಪರಿಚಯವಾಗಿದ್ದಾನೆ. ಈ ವೇಳೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಪ್ರೀತಿ ಪ್ರೀತಿ ಮಾಡು, ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ಹಿಂದೆ ಬಿದಿದ್ದನು. ಬಳಿಕ, ನಾವಿಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹವಾದೇವು. ನಂತರ, ನವೆಂಬರ್ 2020ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುವಂತೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಒತ್ತಾಯಿಸಿದನು.

ಬಳಿಕ, ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ನನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದನು. ಅಲ್ಲಿ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್‌, ಇಸ್ಲಾಂ ಧರ್ಮಕ್ಕೆ ಮತಾಂತರವಾಗವಂತೆ ನನಗೆ ಒತ್ತಾಯಿಸಿದರು. ಅಲ್ಲಿ ನನಗೆ ಸಾದಿಯಾ ಕೌಸರ್ ಎಂದು ಮರುನಾಮಕರಣ ಮಾಡಿದರು. ಮುಸ್ಲಿಂ ವಿವಾಹ ಪ್ರಮಾಣಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಅವರು ನನಗೆ ಒತ್ತಡ ಹೇರಿದರು.

ಇದಾದ ಬಳಿಕ ನಾನು ಗರ್ಭವತಿಯಾದೆ. ಗರ್ಭಿಣಿಯಾದ ನನ್ನ ಮೇಲೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ನಿರಂತರವಾಗಿ ಹಲ್ಲೆ ಮಾಡಿದನು. ಅಲ್ಲದೇ ನನ್ನ ತಾಯಿಗೂ ಜೀವ ಬೆದರಿಕ ಹಾಕಿದನು. 2021ರ ಜುಲೈ 15 ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಮಗನಿಗೆ ಕರಣ್ ರಾಜ್ ಎಂದು ನಾಮಕರಣ ಮಾಡಿದೆ.

ಬಳಿಕ, ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ನಿಧಿಗಾಗಿ “ಕುಟ್ಟಿ ಪೂಜೆ” ಎಂಬ ಮಾಟಮಂತ್ರ ಮಾಡಲು ತಯಾರಿ ನಡೆಸಿದನು. ಈ ಮಾಟಮಂತ್ರಕ್ಕೆ ಮಗನನ್ನು ಬಲಿಕೊಡುವುದಾಗಿ ಹೇಳಿದನು. ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮಾಟಮಂತ್ರ ಮಾಡುವುದನ್ನು ಕಲಿತಿದ್ದು, ಕೇರಳದವರ ಜೊತೆಗೂಡಿ ಮಾಟಮಂತ್ರ ಮಾಡುತ್ತಿದ್ದನು. ಅಲ್ಲದೇ, ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.

ಬಳಿಕ, ಇದೇ ವರ್ಷ ಅಕ್ಟೋಬರ್​ 13 ರಂದು ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್‌ ತುಮಕೂರಿನ ನನ್ನ ನಿವಾಸದ ಬಳಿ ಬಂದು, ನನ್ನ ಮಗನನ್ನು ಅಪಹರಿಸಲು ಯತ್ನಿಸಿದರು. ಆದರೆ, ಪಕ್ಕದಲ್ಲಿದ್ದ ಮನೆಯವರ ಸಹಾಯದಿಂದ ನಾನು ಮತ್ತು ನನ್ನ ಮಗ ತಪ್ಪಿಸಿಕೊಂಡಿದ್ದೇವೆ. ಈ ಘಟನೆಯ ನಂತರ ನಾನು ಭಯಗೊಂಡು, ತಲೆಮರಿಸಿಕೊಂಡಿದ್ದೇನೆ.

ಈ ಬಗ್ಗೆ ಕೆಆರ್ ಪುರಂ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ದೂರನ್ನು ಸ್ವೀಕರಿಸಿಲ್ಲ. ಆದ್ದರಿಂದ, ಕೂಡಲೇ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಕುಟುಂಬಕ್ಕೆ ಪೊಲೀಸ್​ ರಕ್ಷಣೆ ನೀಡಬೇಕು. ನಮಗೆ ಯಾವುದೇ ಹಾನಿಯುಂಟಾದರೆ, ಅದಕ್ಕೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಕಾರಣನಾಗಿರುತ್ತಾನೆ ಎಂದು ವನಜಾಕ್ಷಿ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *