Wed. Nov 20th, 2024

ಮೇಷ ರಾಶಿ: ಪ್ರಭಾವೀ ವ್ತಕ್ತಿಗಳಿಗೆ ನಿಮ್ಮಿಂದ ಸಹಾಯವಾಗಲಿದೆ. ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಬಹುದು. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗದು. ನಿಮ್ಮ ದಾರಿಯ ಬಗ್ಗೆ ನಿಮಗೆ ವಿಶ್ವಾಸವು ಇರಲಿ. ನಿಮ್ಮಿಂದ ಕೆಲಸವನ್ನು ಮಾಡಿಕೊಳ್ಳಲು ಹೊಗಳಬಹುದು. ಬಂಧುಗಳಿಗೆ ನಿಮ್ಮ ಆಗಮನವು ಇಂದು ಇಷ್ಟವಾಗದು.

ವೃಷಭ ರಾಶಿ: ಕೆಲವರ ಮಾತು ನಿಮಗೆ ನಿರುತ್ಸಾಹವನ್ನು ತರಿಸುವುದು. ಇಂದು ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ವಿದ್ಯಾಭ್ಯಾಸದಲ್ಲಿ ಪ್ರಗತಿಯು ಇರಲಿದ್ದು ಅಡೆತಡೆಗಳೂ ಇರಲಿವೆ. ನಿಯಮದ ಉಲ್ಲಂಘನೆ‌ಯ ಕಾರಣ ದಂಡ ತೆರಬೇಕಾದ ಸ್ಥಿತಿ ಇರಲಿದೆ.

ಮಿಥುನ ರಾಶಿ: ನಿಮ್ಮ ಭರವಸೆಯು ಸುಳ್ಳಾಗುವುದು. ಯೋಚನೆಯ ದಿಕ್ಕನ್ನು ಬದಲಿಸಿದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ಕದಡುವುದು. ಅನ್ನಿಸಿದ್ದನ್ನು ಕೂಡಲೇ ಹೇಳುವುದು ಬೇಡ. ಸಮಯಕ್ಕಾಗಿ ಕಾಯಿರಿ. ನೀವು ದೂರಪ್ರಯಾಣ ಮಾಡಿ ಅತಂತ್ರರಂತೆ ಆಗುವಿರಿ. ಮಾಡಬೇಕೆಂದು ಹೊರಟ ಕೆಲಸಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸುವಿರಿ. ಆದಾಯದ ವಿಚಾರದಲ್ಲಿ ನೀವು ಬಹಳ ಹಿಂದೆ. ನಿಮ್ಮ ಮೇಲಿನ ಗೌರವವು ನಿಮ್ಮ ನಡವಳಿಕೆಯಿಂದ ಇನ್ನೂ ಹೆಚ್ಚಾಗಬಹುದು.

ಕರ್ಕಾಟಕ ರಾಶಿ: ಅಧಿಕಾರವನ್ನು ಅನುಭವಿಸುವ ಆಸೆ ಇದ್ದರೂ ಗೊಂದಲ ಭಯದಿಂದ ಹೊರಬರುವುದು ಕಷ್ಟವಾದೀತು. ಇಂದು ನಿಮ್ಮ ಮನೆಯ ಹಿರಿಯರ ಸೇವೆಯಿಂದ ನೆಮ್ಮದಿ ಸಿಗುವುದು. ಮನಸ್ಸು ಸ್ಥಿರವಿಲ್ಲದೇ ಇರುವ ಕಾರಣ ನಿಮ್ಮ ಗುರಿಯೂ ಬದಲಾಗುವುದು. ಬಂಧುಗಳು ನಿಮ್ಮನ್ನು ನೋಡಲು ಬರಬಹುದು. ಸಮಯ ಸ್ಫೂರ್ತಿಯಿಂದ ಕಾರ್ಯವನ್ನು ಸಾಧಿಸಿ. ಪ್ರೇಮದಲ್ಲಿ ಅಂತಿಮವಾಗಿ ನೀವೇ ಯಶಸ್ಸನ್ನು ಸಾಧಿಸುವಿರಿ. ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ.

ಸಿಂಹ ರಾಶಿ: ಅಪರಿಚಿತರು ನಿಮ್ಮ ಬಳಿ ನೋವನ್ನು ಹೇಳಿಕೊಳ್ಳುವರು. ಕಷ್ಟಕ್ಕೆ ಸುಮ್ಮನೆ ಕಿವಿಯಾಗಿ‌ಸಾಕು. ಬದಲಾದ ನಿಮ್ಮ ವ್ಯಕ್ತಿತ್ವವೇ ನಿಮಗೆ ಅಚ್ಚರಿ ಮೂಡಿಸಬಹುದು. ಮನೆಯಲ್ಲಿಯೇ ಇದ್ದು ಬೇಸರ ಬಂದ ಕಾರಣ ಎಲ್ಲಿಗಾದರೂ ವಿಹಾರಕ್ಕೆ ಹೋಗುವಿರಿ. ಅಧಿಕಾರಿಗಳಿಂದ ನಿಮ್ಮ ಉದ್ಯಮದ ಪರಿಶೀಲನೆ ನಡೆಯುವುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿಬರುವುದು. ಶತ್ರುಗಳಿಗೆ ನಿಮ್ಮ ಮಾತು ನಡುಕ ತಂದೀತು. ಮನೆಯಲ್ಲಿ ಜಗಳವಾಡಿ ನೀವು ದೂರವಿರಬೇಕಾಗುವುದು.

ಕನ್ಯಾ ರಾಶಿ: ವಿದೇಶದಲ್ಲಿ ಪಾಲುದಾರರಾಗಿ ಹೂಡಿಕೆ ಮಾಡುವಿರಿ. ಇಂದು ಮಾಡುವ ಕಾರ್ಯವು ನಿಮ್ಮ ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡುವುದು. ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗಲಿದೆ. ಕೆಟ್ಟವರ ಸಹವಾಸದಿಂದ ನಿಮಗೆ ಅಪಕೀರ್ತಿಯು ಬರುವುದು. ಕೆಲವು ವಿಚಾರಗಳಿಗೆ ನೀವು ಪ್ರತಿಕ್ರಿಯೆಯನ್ನು ನೀಡಬೇಕಿಲ್ಲ. ನಿಮ್ಮ ಕೆಲಸಗಳನ್ನು ನೀವು ಮುಂದುರಿಸುವಿರಿ. ಕಷ್ಟಪಟ್ಟು ಪಡೆಯುವುದನ್ನು ಇಷ್ಟದಿಂದ ಪಡೆಯಲು ಪ್ರಯತ್ನಿಸಿ.

ತುಲಾ ರಾಶಿ: ಬೆಲೆ ಇರುವಲ್ಲಿ ಮಾತ್ರ ಬೆಲೆಕೊಡಿ. ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ದೇಹ ಪೀಡೆಯು ಅಧಿಕವಾಗಿ ಇರಲಿದೆ. ಇದರಿಂದ ನಿಮ್ಮ ಇಂದಿನ ಕೆಲಸವೂ ವಿಳಂಬವಾಗುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ಇಂದಿನ ಸಮಯವೇ ಗೊತ್ತಾಗದಂತೆ ಕಳೆದುಹೋಗುವುದು. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ: ಹಿರಿಯರಿಂದ ಬದುಕಿಗೆ ಕಿವಿಮಾತು ಸಿಗುವುದು. ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಪ್ರೇಮವು ನಿಮಗೆ ಬಂಧನದಂತೆ ತೋರಬಹುದು. ಮಕ್ಕಳ ಪ್ರಗತಿಯಿಂದ ಸಂತೋಷವು ಇರಲಿದೆ. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ದ್ವೇಷವಾಗಿ ಪರಿಣಮಿಸಬಹುದು. ವ್ಯವಹಾರದಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಸೋಲನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿರುವುದಿಲ್ಲ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾದೀತು.

ಧನು ರಾಶಿ: ನಿಮ್ಮ ಬದುಕಿಗೆ ಏನಾದರೂ ಹೊಸತು ಬೇಕು ಎನಿಸಬಹುದು. ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ‌. ಹೊಂದಾಣಿಕೆಯ ಮನೋಭಾವವು ನಿಮಗೆ ಆಗದುವೃಶ್ಚಿಕ ರಾಶಿ: ಹಿರಿಯರಿಂದ ಬದುಕಿಗೆ ಕಿವಿಮಾತು ಸಿಗುವುದು. ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಪ್ರೇಮವು ನಿಮಗೆ ಬಂಧನದಂತೆ ತೋರಬಹುದು. ಮಕ್ಕಳ ಪ್ರಗತಿಯಿಂದ ಸಂತೋಷವು ಇರಲಿದೆ. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ದ್ವೇಷವಾಗಿ ಪರಿಣಮಿಸಬಹುದು. ವ್ಯವಹಾರದಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಸೋಲನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿರುವುದಿಲ್ಲ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾದೀತು.

ಮಕರ ರಾಶಿ: ಪ್ರೀತಿಸುವ ಜನರನ್ನು ನೀವು ಉಳಿಸಿಕೊಳ್ಳಲಾಗದು. ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಯಾವಾಗಲೂ ಸಿಟ್ಟು ಮಾಡುತ್ತಿದ್ದರೆ ನಿಮ್ಮ‌ ಸಿಟ್ಟಿಗೆ ಯಾವ ಬೆಲೆಯೂ ಇರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆ ಇರುವುದು. ಅಧ್ಯಾತ್ಮದ ವಿಚಾರಕ್ಕೆ ಹೆಚ್ಚು ಒತ್ತು ಕೊಡುವಿರಿ. ಇನ್ನೊಬ್ಬರ ದುಃಖಕ್ಕೆ ನೀವು ಸ್ಪಂದಿಸುವಿರಿ. ಎಲ್ಲರ ಜೊತೆ ಸಂತೋಷದಿಂದ ಇರಲು ಇಷ್ಟಪಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರು ನಿಮಗೆ ಇಷ್ಟವಾಗುವರು. ಒಂದಾದ‌ಮೇಲೆ ಒಂದರಂತೆ ಸವಾಲುಗಳು ನಿಮಗೆ ಸಿಗುವುದು.

ಕುಂಭ ರಾಶಿ: ಜನ ಇಂದು ನಿಮ್ಮವರ ಅವಶ್ಯಕತೆ ತಿಳಿಯುವುದು. ಮನೆಯ ಕೆಲಸದಿಂದ ನಿಮಗೆ ಆಯಾಸವಾಗುವುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಯಾರಾದರೂ ನಿಮಗೆ ಬೇಸರ ಮಾಡಿಸುವರು. ಆದರೆ ನಿಮಗೆ ಮೌನವೇ ಇಷ್ಟವಾದೀತು. ಮಾನಸಿಕ ಕಿರಿಕಿರಿಯಿಂದ ನೆಮ್ಮದಿ ಸಿಗಲಿದೆ. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ. ಜನಪ್ರಿಯರಾಗುವ ಆಸೆ ಅತಿಯಾಗುವುದು. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ.‌

ಮೀನ ರಾಶಿ: ಜಂಟಿಯಾಗಿ ನಿರ್ವಹಣೆ ಮಾಡುವುದು ಕಾರ್ಯದಲ್ಲಿ ಕಷ್ಟವಾಗುವುದು. ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಯಾವುದಾದರೂ ಮಾರ್ಗವನ್ನು ಪಡೆಯುವಿರಿ. ಬೇರೆ ಬೇರೆ ಆಲೋಚನೆಯನ್ನು ಮಾಡುವಿರಿ. ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವಿರಿ. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋಗುವುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತೆಯಿಂದ ಇರದು. ಆಸ್ತಿಯ ವಿಚಾರದಲ್ಲಿ ಆಂತರಿಕ ಕಲಹವು ದೊಡ್ಡದಾಗಬಹುದು. ದಾಂಪತ್ಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುವುದು. ನಿಮ್ಮದೇ ಆದ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ವೃತ್ತಿಯಲ್ಲಿ ನಿಮಗೆ ಸಹಕಾರವು ಸಿಗದು.

Leave a Reply

Your email address will not be published. Required fields are marked *